ಮುಖಪುಟ /ಸುದ್ದಿ ಸಮಾಚಾರ   
           2011ನೇ ವರ್ಷದಲ್ಲ್ಲಿ ಬರುವ ಸರ್ಕಾರಿ ರಜಾದಿನಗಳ ವಿವರ

ಬೆಂಗಳೂರು ಡಿ. ೩:        2011ನೇ ವರ್ಷದಲ್ಲಿ  ಈ ಕೆಳಕಂಡ ದಿನಗಳನ್ನು ಕರ್ನಾಟಕ ರಾಜ್ಯಾದ್ಯಂತ ಸಾರ್ವಜನಿಕ ರಜೆಗಳೆಂದು ಘೋಷಿಸಲಾಗಿದೆ. ಸಾರ್ವತ್ರಿಕ ರಜಾ ದಿನಗಳು ಈ ಕೆಳಗಿನಂತಿವೆ.

ಜನವರಿ ೧೫ ರಂದು ಶನಿವಾರ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ, ಜನವರಿ ೨೬ ರ ಬುಧವಾರಂದು ಗಣರಾಜ್ಯೋತ್ಸವ, ಫೆಬ್ರವರಿ ೧೬ ರಂದು ಬುಧವಾರ ಈದ್ ಮಿಲಾದ್ಮಾರ್ಚ್ ೨ ರಂದು ಬುಧವಾರ ಮಹಾಶಿವರಾತ್ರಿ, ಏಪ್ರಿಲ್ ೪ ರಂದು ಸೋಮವಾರ ಚಂದ್ರಮಾನ ಯುಗಾದಿ, ಏಪ್ರಿಲ್ ೧೪ ರಂದು ಗುರುವಾರ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ, ಸೌರಮಾನ ಯುಗದಿ, ಏಪ್ರಿಲ್ ೧೬ ರಂದು ಶನಿವಾರ ಮಹಾವೀರ ಜಯಂತಿ, ಏಪ್ರಿಲ್ ೨೨ ರಂದು ಶುಕ್ರವಾರ ಗುಡ್‌ಫ್ರೈಡೆ, ಮೇ ೬ ರಂದು ಶುಕ್ರವಾರ ಬಸವ ಜಯಂತಿ, ಆಗಸ್ಟ್ ೧೫ ರಂದು  ಸೋಮವಾರ ಸ್ವಾತಂತ್ರ್ಯ ದಿನಚರಣೆ, ಆಗಸ್ಟ್ ೩೧ ರರಂದು ಬುಧವಾರ ಖುತುಬ್-ಎ-ರಂಜನ್, ಸ್ವರ್ಣಗೌರಿ ವ್ರತ, ಸೆಪ್ಟೆಂಬರ್ ೧ ರಂದು ಗುರುವಾರ ಶ್ರೀ ವರಸಿದ್ಧಿ ವಿನಾಯಕ ವ್ರತ, ಸೆಪ್ಟೆಂಬರ್ ೨೭ ರಂದು ಮಂಗಳವಾರ ಮಹಾಲಯ ಅಮಾವಾಸ್ಯೆ.  ಅಕ್ಟೋಬರ್ ೫ ರಂದು ಬುಧವಾರ ಮಹಾನವಮಿ, ಆಯುಧಪೂಜೆ ಅಕ್ಟೋಬರ್ ೬ ರಂದು ಗುರುವಾರ ವಿಜಯದಶಮಿ, ಅಕ್ಟೋಬರ್ ೧೧ ರಂದು ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿ, ಅಕ್ಟೋಬರ್ ೨೫ ರಂದು ಮಂಗಳವಾರ ನರಕಚತುರ್ದಶಿಅಕ್ಟೋಬರ್ ೨೭ ರಂದು ಗುರುವಾರ ಬಲಿಪಾಡ್ಯಮಿ, ದೀಪಾವಳಿ, ನವೆಂಬರ್ ೧೧ ಮಂಗಳವಾರ ಕನ್ನಡ ರಾಜ್ಯೋತ್ಸವ, ನವೆಂಬರ್ ೭ ರಂದು ಸೋಮವಾರ ಬಕ್ರೀದ್, ನವೆಂಬರ್ ೧೪ ರಂದು ಸೋಮವಾರ ಕನಕದಾಸ ಜಯಂತಿ, ಡಿಸೆಂಬರ್ ೬ ರಂದು ಮಂಗಳವಾರ ಮೊಹರಂ ಕಡೇ ದಿನ.
ಸೂಚನೆ:  ೧.  ಈ ರಜೆ ಪಟ್ಟಿಯು ಭಾನುವಾರಗಳಂದು ಬರುವ ಕಾರ್ಮಿಕ ದಿನಾಚರಣೆ (೦೧-೦೫-೨೦೧೧) ಮಹಾತ್ಮಾ ಗಾಂದಿ ಜಯಂತಿ (೦೨-೧೦-೨೦೧೦) ಕ್ರಿಸ್‌ಮಸ್ ಡೇ (೨೫-೧೨-೨೦೧೧) ರಜಾ ದಿನಗಳನ್ನೊಳಗೊಂಡಿರುವುದಿಲ್ಲ.

 ಮುಖಪುಟ /ಸುದ್ದಿ ಸಮಾಚಾರ