ಮುಖಪುಟ /ಸುದ್ದಿ ಸಮಾಚಾರ   
 

ಸಿಎಂರಿಂದ ಬಿಜೆಪಿ ವರಿಷ್ಠರಿಗೆ ೫೦೦ಕೋಟಿ ಲಂಚ- ಕಾಂಗ್ರೆಸ್ ಆರೋಪ

ಬೆಂಗಳೂರು, ಡಿ.೩: ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸಿಎಂ ಪದವಿ ಉಳಿಸಿಕೊಳ್ಳಲು ಬಿಜೆಪಿ ವರಿಷ್ಠರಿಗೆ ಹಾಗೂ ಆರ್‌ಎಸ್‌ಎಸ್ ಮುಖಂಡರಿಗೆ ೫೦೦ ಕೋಟಿ ರೂ. ಲಂಚ ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿ.ಎಸ್.ಉಗ್ರಪ್ಪ ಭೂಹಗರಣ, ಸ್ವಜನ ಪಕ್ಷಪಾತ ಆರೋಪ ಎದುರಿಸುತ್ತಿದ್ದ ಯಡಿಯೂರಪ್ಪ, ತಾವು ಲೂಟಿ ಹೊಡೆದ ಹಣದಲ್ಲಿ  ೫೦೦ ಕೋಟಿ ಲಂಚ ನೀಡಿ ತಮ್ಮ ಹುದ್ದೆ ಉಳಿಸಿಕೊಂಡರು ಎಂದು ಆರೋಪಿಸಿದರು.

ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರಿಂದ ಲಂಚ ಪಡೆದಿರುವುದನ್ನು ಸಾಬೀತುಪಡಿಸಲು ತಾವು ಸಿದ್ಧ ಎಂದು ಸವಾಲು ಹಾಕಿದ ಅವರು, ಇಲ್ಲವಾದಲ್ಲಿ ಅವರ ಮನೆ ಕೆಲಸದಾಳಾಗಿ ದುಡಿಯಲು ಸಿದ್ಧ ಎಂದರು.

ರಾಜೀನಾಮೆ ನೀಡುವ ಮೂಲಕ ಕಟ್ಟಾ ಸುಬ್ರಹ್ಮಣ್ಯನಾಯ್ಡು ಯಡಿಯೂರಪ್ಪ ಅವರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ನೈತಿಕತೆ ಇದ್ದರೆ ಸಿಎಂ ರಾಜಿನಾಮೆ ನೀಡಬೇಕು ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ೧೦ ಮಂದಿ ವಿರುದ್ದ ಲೋಕಾಯುಕ್ತರಿಗೆ ದೂರು ನೀಡಲಾಗಿದ್ದು ೩೮೮ ಪುಟಗಳ ಪೂರಕ ದಾಖಲೆ ಒದಗಿಸಲಾಗಿದೆ  ಎಂದು ತಿಳಿಸಿದರು.

ಸಚಿವ ಮುರುಗೇಶ್ ನಿರಾಣಿ, ಏಕಗವಾಕ್ಷಿ ಯೋಜನೆಯಡಿ ೨೦೦ ಎಕರೆ ಭೂಮಿಯನ್ನು ಖರೀದಿಸಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ  ಎಂದರು.

 ಮುಖಪುಟ /ಸುದ್ದಿ ಸಮಾಚಾರ