ಮುಖಪುಟ /ಸುದ್ದಿ ಸಮಾಚಾರ   
      

ತೀರ್ಪು ಪೂರ್ಣ ಸಮಾಧಾನ ತಂದಿಲ್ಲ -ಬಸವರಾಜ ಬೊಮ್ಮಾಯಿ

Basavaraj Bommayiಬೆಂಗಳೂರು, ಡಿ. ೩೦ - ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಪೂರ್ಣ ಸಮಾಧಾನ ತಂದಿಲ್ಲ ಎಂದು ರಾಜ್ಯದ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಆಲಮಟ್ಟಿ ಜಲಾಶಯದ ಎತ್ತರವನ್ನು ೫೨೪.೨೬ ಅಡಿಗಳಿಗೆ ಏರಿಸಲು ಅನುಮತಿ ನೀಡಿರುವುದರಿಂದ ಹೆಚ್ಚಿನ ನೀರು ಸಂಗ್ರಹಣೆಗೆ ಅನುಕೂಲವಾಗಲಿದೆ. ಇದು ಸ್ವಾಗತಾರ್ಹ ಎಂದರು.

ಆದರೆ, ಬಿ ಸ್ಕೀಂನಲ್ಲಿ ಕರ್ನಾಟಕಕ್ಕೆ ಇನ್ನೂ ೧೦೦ ಟಿಎಂಸಿ ನೀರು ಹಂಚಿಕೆ ಮಾಡಬೇಕಿತ್ತು. ಈ ಬಗ್ಗೆ ಚಿಂತನೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು, ತಜ್ಞರೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೃಷ್ಣಾಮೇಲ್ದಂಡೆಗೆ ೩೦ ಟಿಎಂಸಿ ನೀರು ಮಂಜೂರು ಮತ್ತು ತುಂಗಭದ್ರಾ ದಿಂದ ೩೧೦ ಟಿಎಂಸಿ ಬದಲಾಗಿ ೩೬೦ ಟಿಎಂಸಿಗೆ ಹಂಚಿಕೆ ಮಾಡಿರುವುದು ಕೂಡ ಸ್ವಾಗತಾರ್ಹ ಎಂದು ತಿಳಿಸಿದರು. ತೀರ್ಪಿನ ಪೂರ್ಣ ಪ್ರತಿ ಕೈಸೇರಿದ ಬಳಿಕ ಸಾಧಕ ಬಾಧಕಗಳ ಬಗ್ಗೆ ಚರ್ಚಿಸುವುದಾಗಿ ಅವರು ಹೇಳಿದರು.

 ಮುಖಪುಟ /ಸುದ್ದಿ ಸಮಾಚಾರ