ಮುಖಪುಟ /ಸುದ್ದಿ ಸಮಾಚಾರ   

ಬೆಂಗಳೂರು-ಶಿವಮೊಗ್ಗ ಇಂಟರ್ ಸಿಟಿ ರೈಲಿಗೆ ಚಾಲನೆ

Train shimoga bangalore intercityಬೆಂಗಳೂರು, ಡಿ.8 :  ಬೆಂಗಳೂರು ಶಿವಮೊಗ್ಗ ನಡುವಿನ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು ಸೇವೆಗೆ ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ ಬೆಂಗಳೂರಿನಲ್ಲಿಂದು ಚಾಲನೆ ನೀಡಿದರು. 

ಬೆಂಗಳೂರು ಸಿಟಿ ರೈಲು ನಿಲ್ದಾಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು ಮೊದಲಿಗೆ ಕನ್ನಡದಲ್ಲಿ ಎಲ್ಲರಿಗೂ ನಮಸ್ಕಾರ ಸಲ್ಲಿಸಿ ಕರತಾಡನಕ್ಕೆ ಪಾತ್ರರಾದರು. ಬೆಂಗಳೂರು ಒಂದು ಸುಂದರ ನಗರ ಎಂದು ಬಣ್ಣಿಸಿದರು.

ರೈಲ್ವೆ ಇಲಾಖೆಯ ಸಾಧನೆಯನ್ನು ವಿವಿರಿಸಿದ  ಅವರು, ಕರ್ನಾಟಕದ ಬೇಡಿಕೆಗಳ ಕುರಿತಂತೆ ಪರಿಶೀಲಿಸುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಅವರು, ರಿಮೋಟ್ ವ್ಯವಸ್ಥೆಯ ಮೂಲಕ ಯಶವಂತಪುರ ಮೈಸೂರು, ಯಶವಂತಪುರ ಸೊಲ್ಲಾಪುರ ರೈಲು ಸಂಚಾರಕ್ಕೂ ಚಾಲನೆ ನೀಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಕರ್ನಾಟಕದ ಜನತೆಯ ಬಹು ದಿನಗಳ ಬೇಡಿಕೆ ಈ ಹೊಸ ರೈಲುಗಳ ಸಂಚಾರದಿಂದ ಈಡೇರಿದಂತಾಗಿದೆ. ರಾಜ್ಯದ ಇನ್ನೂ ಹಲವು ರೈಲ್ವೆ ಯೋಜನೆಗಳು ಬೇಡಿಕೆಯಾಗೇ ಉಳಿದಿದ್ದು ಅವುಗಳನ್ನೂ ಈಡೇರಿಸುವಂತೆ ಕೋರಿದರು.

ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ, ಸಂಸತ್ ಸದಸ್ಯ ಪಿ.ಸಿ.ಮೋಹನ್, ಶಾಸಕ ದಿನೇಶ್ ಗುಂಡೂರಾವ್ ಮತ್ತಿತರರು ಪಾಲ್ಗೊಂಡಿದ್ದರು.

 ಮುಖಪುಟ /ಸುದ್ದಿ ಸಮಾಚಾರ