ಮುಖಪುಟ /ಸುದ್ದಿ ಸಮಾಚಾರ   
 

ಡಿ.10ರಿಂದ 20ರವರೆಗೆ ಮಂತ್ರಾಲಯದಲ್ಲಿ ಪುಷ್ಕರ ಉತ್ಸವ

ಬೆಂಗಳೂರು, ಡಿ. 4 : ಗುರುರಾಯರು ನೆಲೆಸಿಹ ಮಂತ್ರಾಲಯದ ತುಂಗಭದ್ರಾ ನದಿಯ ತಟದಲ್ಲಿ ಇದೇ ಡಿಸೆಂಬರ್ 10ರಿಂದ 20ರವರೆಗೆ ಪುಷ್ಕರ ಉತ್ಸವ ಆಯೋಜಿಸಲಾಗಿದೆ.

ಹನ್ನೆರೆಡು ವರ್ಷಗಳಿಗೊಮ್ಮೆ ನಡೆಯುವ ಪುಷ್ಕರ ಉತ್ಸವವನ್ನು ವಿಜೃಂಭಣೆಯಿಂದ ನಡೆಸಲು ಮಂತ್ರಾಲಯ ಮಠದ ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ಉತ್ತರ ಭಾರತದಲ್ಲಿ ನಡೆಯುವ ಕುಂಭ ಮೇಳದ ಮಾದರಿಯಲ್ಲಿಯೇ ನಡೆಯುವ ಪುಷ್ಕರ ಉತ್ಸವದಲ್ಲಿ ಪಾಲ್ಗೊಂಡು ಪವಿತ್ರ ಸ್ನಾನ ಮಾಡಲು ಮಂತ್ರಾಲಯಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಶ್ರೀಮಠದ ಆಡಳಿತಾಧಿಕಾರಿ ಡಾ.ಆರ್. ಪ್ರಭಾಕರರಾವ್ ನೇತೃತ್ವದಲ್ಲಿ ಈಚೆಗೆ ಸಭೆ ನಡೆಸಲಾಯಿತು.

ಈ ಹಿಂದೆ1996ರಲ್ಲಿ ಪುಷ್ಕರ ಉತ್ಸವ ಮಂತ್ರಾಲಯದಲ್ಲಿ ಜರುಗಿತ್ತು. ಈಗ 12 ವರ್ಷಗಳ ಬಳಿಕ ಮತ್ತೆ ಉತ್ಸವ ನಡೆಯುತ್ತಿದೆ ಎಂದು ಮಠದ ಪ್ರಕಟಣೆ ಹೇಳಿದೆ.

ಮುಖಪುಟ /ಸುದ್ದಿ ಸಮಾಚಾರ