ಮುಖಪುಟ /ಸುದ್ದಿ ಸಮಾಚಾರ   

ಸರ್ಕಾರಿ ವಾಹನ ನಾಮಫಲಕದಲ್ಲಿ  ಕನ್ನಡ ಕಡ್ಡಾಯ: ಚಂದ್ರು

Mukyamantri  Chandruಬೆಂಗಳೂರು ಡಿ ೧೮: ಕನ್ನಡ ಹಾಗೂ ಕನ್ನಡ ಅಂಕಿಗಳನ್ನು ಆಡಳಿತದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ರಾಜ್ಯ ಸರ್ಕಾರ, ಸರ್ಕಾರಿ ವಾಹನಗಳ ಮೇಲೆ ಕನ್ನಡ ಅಕ್ಷರ ಮತ್ತು ಅಂಕಿಗಳನ್ನು ಕಡ್ಡಾಯವಾಗಿ ಬಳಸಬೇಕೆಂದು ಆದೇಶ ಹೊರಡಿಸಿದ್ದರೂ ಇನ್ನೂ ಇದು ಪೂರ್ಣ ರೀತಿಯಲ್ಲಿ ಜಾರಿಗೆ ಬಂದಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ವಿಷಾದಿಸಿದ್ದಾರೆ.

  ತಮ್ಮ ಪ್ರವಾಸ ಸಂದರ್ಭದಲ್ಲಿ ತಾವು ಈ ಉಲ್ಲಂಘನೆಯನ್ನು ಬಹಳಷ್ಟು ಗಮನಿಸಿದ್ದು ಈ ಸಂಬಂಧವಾಗಿ ಮುಖ್ಯ ಕಾರ್ಯದರ್ಶಿಗಳು, ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಹಾನಗರಪಾಲಿಕೆ ಆಯುಕ್ತರು, ವಿಶ್ವವಿದ್ಯಾಲಯದ ಕುಲಪತಿಗಳಿಗೆ ಪತ್ರ ಬರೆದಿದ್ದು ಜನವರಿ ೧ ರೊಳಗೆ  ಕಡ್ಡಾಯವಾಗಿ ಬದಲಾವಣೆ ಮಾಡಬೇಕೆಂದು ಸೂಚಿಸಲಾಗಿದೆ ಎಂದರು.

 ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ದ ಶಿಸ್ತುಕ್ರಮ ಜರುಗಿಸಲು ಸಹಾ ತಿಳಿಸಲಾಗಿದೆ.  ಇಲ್ಲವಾದಲ್ಲಿ ಮುಂದಿನ ಅಧಿವೇಶನ ಸಮಯದಲ್ಲಿ ಸದನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗುವುದೆಂದು ತಿಳಿಸಿದರು.  ಅಲ್ಲದೆ ಸಾರ್ವಜನಿಕರಲ್ಲಿಯೂ ಜಾಗೃತಿ ಮೂಡಿಸುವ ಮೂಲಕ ಜನಾಂದೋಲ ಮಾಡುವುದಾಗಿ ತಿಳಿಸಿದರು. 

ಮುಖಪುಟ /ಸುದ್ದಿ ಸಮಾಚಾರ