ಮುಖಪುಟ /ಸುದ್ದಿ ಸಮಾಚಾರ   

ಬೆಂಗಳೂರಲ್ಲಿ 6 ದಿಗಳ ಪುಸ್ತಕ ಪ್ರದರ್ಶನ

ಬೆಂಗಳೂರು, ಡಿ. ೧೮:     ಮಾಹಿತಿ ತಂತ್ರಜ್ಞಾನ ಯುಗದಲ್ಲೂ, ಪುಸ್ತಕಗಳು ಓದುಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ. ವ್ಯಕ್ತಿತ್ವ ವಿಕಸನ, ಮನೋವಿಕಾಸ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಅಂತರ ಮಾಧ್ಯಮ ಪ್ರಚಾರ ಸಮನ್ವಯ ಸಮಿತಿ ಅಧ್ಯಕ್ಷ ಎ.ಪಿ.ಫ್ರಾಂಕ್ ನರೋನ ಅಭಿಪ್ರಾಯ ಪಟ್ಟಿದ್ದಾರೆ.

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಕಾಶನ ವಿಭಾಗ ನಗರದ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಏರ್ಪಡಿಸಿರುವ ಒಂದು ವಾರ ಕಾಲದ ಪುಸ್ತಕ ಮಾರಾಟ ಹಾಗೂ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ, ಗಾಂಧೀಜಿ-ಚಿಂತನೆಗಳು, ಕಲೆ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ-ತಂತ್ರಜ್ಞಾನ, ಸೇರಿದಂತೆ ಹಲವು ಉಪಯುಕ್ತ ಪುಸ್ತಕಗಳು ಇಲ್ಲಿವೆ ಎಂದರು.

ಐ.ಎ.ಎಸ್., ಐ.ಪಿ.ಎಸ್., ಐ.ಐ.ಎಸ್., ಐ.ಎಫ್.ಎಸ್ ಸೇರಿದಂತೆ ನಾಗರೀಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಕಾಶನ ವಿಭಾಗದ ಪ್ರಕಟಣೆಗಳು ಅತ್ಯುಪಯುಕ್ತ ಎಂದು ತಿಳಿಸಿದರು.

ಡಿಸೆಂಬರ್ ೧೮ ರಿಂದ ೨೩ರವರೆಗೆ ಆರು ದಿನಗಳ ಕಾಲ ಬೆಳಗ್ಗೆ ೧೧ ರಿಂದ ಸಂಜೆ ೭.೦೦ರವರೆಗೆ ಪುಸ್ತಕ ಪ್ರದರ್ಶನ ಸಾರ್ವಜನಿಕ ಪ್ರವೇಶಕ್ಕೆ ಮುಕ್ತ. ಮಾರಾಟದಲ್ಲಿ ಶೇಕಡ ೧೦ ರಿಂದ ೫೦ರವರೆಗೆ ರಿಯಾಯಿತಿ ದರದಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಕೋರಮಂಗಲದ ಕೇಂದ್ರೀಯ ಸದನದಲ್ಲಿರುವ ಕಛೇರಿಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: ೨೫೫೩೭೨೪೧.

ಮುಖಪುಟ /ಸುದ್ದಿ ಸಮಾಚಾರ