ಮುಖಪುಟ /ಸುದ್ದಿ ಸಮಾಚಾರ   

ಸಿ.ಆರ್.ಸಿಂಹ ನೇತೃತ್ವದಲ್ಲಿ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ  

C.R.Simha, Kannada Cinema Actorಬೆಂಗಳೂರು ಡಿ ೧೭: ರಾಜ್ಯ ಸರ್ಕಾರ ಕೊಡ ಮಾಡುವ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳ ಆಯ್ಕೆಗೆ ಶಿಫಾರಸು ಮಾಡಲು ನಟ, ನಾಟಕಕಾರ, ರಂಗಕಲಾವಿದ ಸಿ.ಆರ್.ಸಿಂಹ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.

೨೦೦೭-೦೮ ನೇ ಸಾಲಿನ ರಾಜ್ಯ ಪ್ರಶಸ್ತಿಗಳಿಗಾಗಿ  ಸಿ.ಆರ್. ಸಿಂಹ ಅಧ್ಯಕ್ಷತೆಯ ಹತ್ತು  ಸದಸ್ಯರ ಸಲಹಾ ಸಮಿತಿ ಕಾರ್ಯೋನ್ಮುಖವಾಗಲಿದ್ದು, ಚಲನಚಿತ್ರಗಳನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ಸಮಿತಿಗೆ  ಆನಂದ ಪಿ. ರಾಜು, ಕೇಸರಿ ಹರವು,  ಮಾಲತಿ ಸುಧೀರ್, ರತ್ನಮಾಲ ಪ್ರಕಾಶ್, ವಿಜಯಕುಮಾರ್,  ವಾಸು,  ಅಶೋಕ ನಾಯ್ಡು,  ಸಂಕೇತ್ ಕಾಶಿ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.  ಸಮಿತಿಯಲ್ಲಿ ವಾರ್ತಾ ಇಲಾಖೆಯ ನಿರ್ದೇಶಕ ಎನ್. ಆರ್. ವಿಶು ಕುಮಾರ್ ಅವರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಮುಖಪುಟ /ಸುದ್ದಿ ಸಮಾಚಾರ