ಮುಖಪುಟ /ಸುದ್ದಿ ಸಮಾಚಾರ   

ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

ಮೈಸೂರು, ಡಿ.14 : ಇದೇ 25ರಿಂದ 5 ದಿನಗಳ ಕಾಲ ಮೈಸೂರಿನ ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ ಎಂದು  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜಯರಾಮ ರಾಜೇ ಅರಸ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಬಹುರೂಪಿ ನಾಟಕೋತ್ಸವವನ್ನು ಈ ತಿಂಗಳ ೨೫ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಉದ್ಘಾಟಿಸಲಿದ್ದಾರೆ. ಖ್ಯಾತ ನಾಟಕಕಾರ, ಸಾಹಿತಿ, ಚಿಂತಕ ಡಾ.ಚಂದ್ರಶೇಖರ್ ಕಂಬಾರ, ಮುಖ್ಯಅತಿಥಿಗಳಾಗಿ ಆಗಮಿಸಲಿದ್ದರೆಂದರು. ನಾಟಕೋತ್ಸವದ ಅಂಗವಾಗಿ ನಾಟಕ, ಸಿನಿಮಾ, ಚಿತ್ರಕಲೆ, ಕರಕುಶಲ, ಕಾವ್ಯರಂಗ ನಡೆಯಲಿದ್ದು, ಈ ತಿಂಗಳ ೨೪ರಿಂದ ೨೮ರವರೆಗೆ ಐದು ದಿನಗಳ ಕಾಲ ಧಾರವಾಡದಲ್ಲಿಯೂ ಸಹ ಬಹುರೂಪಿ ನಾಟಕೋತ್ಸವ ನಡೆಯಲಿದೆ ಎಂದರು.

ಇದೇ ಮೊದಲ ಬಾರಿಗೆ ಶಿಲ್ಪಕಲಾ ಶಿಬಿರವನ್ನು ಸಹ ಏರ್ಪಡಿಸಲಾಗಿದ್ದು ೨೨ ರಿಂದ ಜನಪದ ಮತ್ತು ಬೀದಿ ನಾಟಕಗಳು ನಡೆಯಲಿವೆ, ರಾಜ್ಯದ ೧೨ ಜನಪದ ಸಂಘಗಳು ಏಳು ದಿನಗಳ ಕಾಲ ನಗರದ ವಿವಧ ಭಾಗಗಳಲ್ಲಿ ಪ್ರದರ್ಶನ ನೀಡಲಿದ್ದಾರೆ ಎಂದು ಜಯರಾಮ ರಾಜೇ ಅರಸ್ ತಿಳಿಸಿದರು.

ಮುಖಪುಟ /ಸುದ್ದಿ ಸಮಾಚಾರ