ಮುಖಪುಟ /ಸುದ್ದಿ ಸಮಾಚಾರ   
 

ಟೆಲಿಮೆಡಿಸಿನ್ ತಾಂತ್ರಿಕ ಸಹಾಯಕ ಹುದ್ದೆಗೆ ಸಂದರ್ಶನ

ಬೆಳಗಾವಿ, ಡಿ. 11: ಬೆಳಗಾವಿ ಜಿಲ್ಲಾ ಅಸ್ಪತ್ರೆಯ ಟೆಲಿಮೆಡಿಸಿನ್ ವಿಭಾಗದಲ್ಲಿ ಟೆಲಿಮೆಡಿಸಿನ್ ತಾಂತ್ರಿಕ ಸಹಾಯಕರ ಒಂದು ಹುದ್ದೆಗೆ ಒಂದು ವರ್ಷದ ಅವಧಿಗೆ ಗುತ್ತಿಗೆ ಒಪ್ಪಂದದ ಮೇಲೆ ನೇಮಕ ಮಾಡಲು ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

ಅಧೀಕ್ಷಕರು ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾ ಆಸ್ಪತ್ರೆ ಬೆಳಗಾವಿ ಇವರ ಕೋಣೆಯಲ್ಲಿ ಇದೇ ಡಿಸೆಂಬರ್ ೨೦ ರಂದು ಮಧ್ಯಾಹ್ನ ೩ ಗಂಟೆಗೆ ನೇರ ಸಂದರ್ಶನ ಆಯೋಜಿಸಲಾಗಿದೆ.

ಅಭ್ಯರ್ಥಿಗಳು ಡಿಪ್ಲೋಮಾ/ಕಂಪ್ಯೂಟರ್ ಸಾಯನ್ಸ್‌ನಲ್ಲಿ ಅಥವಾ ಬಿ.ಸಿ.ಎ. ಪದವೀಧರರಾಗಿರಬೇಕು. ಮತ್ತು ಒಂದು ವರ್ಷದ ತಾಂತ್ರಿಕ ಅನುಭವ ಹೊಂದಿರಬೇಕು. ಪ್ರತಿ ತಿಂಗಳಿಗೆ ಸಂಚಿತ ವೇತನ ರೂ. ೧೦,೦೦೦/- ನೀಡಲಾಗುತ್ತದೆ. ಕಾರಣ ಅರ್ಹ ಇಚ್ಛಿತ ಅಭ್ಯರ್ಥಿಗಳು ಅವರ ಶೈಕ್ಷಣಿಕ ಮೂಲ ದಾಖಲೆಗಳೊಂದಿಗೆ ಹಾಜರಿರಬೇಕು.

ಅಭ್ಯರ್ಥಿಗಳು ಸಂದರ್ಶನ ಸಮಯದ ಪೂರ್ವ ಒಂದು ಗಂಟೆ ಮೊದಲೇ ಹಾಜರಿದ್ದು, ನಿಗದಿತ ಪ್ರಪತ್ರ ಪಡೆದು ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಆ ಕುರಿತು ದೃಢೀಕರಿತ ಶೈಕ್ಷಣಿಕ ಹಾಗೂ ಇತರೆ ದಾಖಲೆಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಧೀಕ್ಷಕರು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜಿಲ್ಲಾ ಆಸ್ಪತ್ರೆ ಬೆಳಗಾವಿ ಇವರನ್ನು ಸಂಪರ್ಕಿಸಲು ಕೋರಿದೆ. 

ಮುಖಪುಟ /ಸುದ್ದಿ ಸಮಾಚಾರ