ಮುಖಪುಟ /ಸುದ್ದಿ ಸಮಾಚಾರ   
 

ಮೈಸೂರಿನಲ್ಲಿ ಏರ್‌ಮನ್ ಆಯ್ಕೆ ವಿಶೇಷ ಅಭಿಯಾನ

ಮೈಸೂರು, ಡಿ. 11 : ವಾಯುಪಡೆಯ ಏರ್‌ಮನ್ ಹುದ್ದೆಗಳ ನೇಮಕಾತಿಗಾಗಿ ಮುಂದಿನ ತಿಂಗಳು  ೨೯ ರಿಂದ ೩೧ರವರೆಗೆ ಮೂರು ದಿನಗಳ ಕಾಲ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ವಿಶೇಷ ನೇಮಕಾತಿ ಅಭಿಯಾನ ನಡೆಯಲಿದೆ.

ವಾಯುಪಡೆಯ ಗ್ರೂಪ್ ಎಕ್ಸ್ ಮತ್ತು ಗ್ರೂಪ್ ವೈ ಹುದ್ದೆಗಳಿಗೆ ಆಯ್ಕೆ ನಡೆಯಲಿದ್ದು, ಗ್ರೂಪ್ ಎಕ್ಸ್ ತಾಂತ್ರಿಕ ಹುದ್ದೆಗಳಿಗೆ ೧೭ ರಿಂದ ೨೨ ವರ್ಷ ವಯಸ್ಸಾಗಿರಬೇಕು. ಅಭ್ಯರ್ಥಿಗಳು ಗಣಿತ ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ ಇಂಟರ್‌ಮೀಡಿಯಟ್ ಅಥವಾ ೧೦+೨ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಟ ಒಟ್ಟಾರೆ ಶೇ.೫೦ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಥವಾ ಸರ್ಕಾರಿ ಮಾನ್ಯತೆ ಪಡೆದಿರುವ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕನಿಷ್ಟ ಶೇ.೫೦ ಅಂಕಗಳೊಂದಿಗೆ ಮೆಕಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಕಂಪ್ಯೂಟರ್ ಸೈನ್ಸ್, ಇನ್ಟ್ರುಮೆಂಟೇಷನ್ ಟೆಕ್ನಾಲಜಿ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಇಂಜಿನಿಯರಿಂಗ್ ಡಿಪ್ಲೊಮಾ ಪಾಸಾಗಿರಬೇಕು.

ಗ್ರೂಪ್ ಎಕ್ಸ್ ನ ಎಜುಕೇಷನ್ ಇನ್ಸ್‌ಸ್ಟ್ರಕ್ಟರ್ ಟ್ರೇಡ್ ಹುದ್ದೆಗಳಿಗೆ ೨೦ ರಿಂದ ೨೫ ವರ್ಷ ವಯೋಮಿತಿ ಇರಬೇಕು. ಸರ್ಕಾರಿ ಮಾನ್ಯತೆ ಪಡೆದ ಶಾಲಾಕಾಲೇಜುಗಳಲ್ಲಿ ೨ ವರ್ಷಗಳ ಬೋಧನಾ ಅನುಭವ / ಬಿಇಡಿ ಪದವಿಯೊಂದಿಗೆ ಕಲೆ, ವಾಣಿಜ್ಯ ಅಥವಾ ವಿಜ್ಞಾನದಲ್ಲಿ ಪದವಿ ಪಡೆದಿರಬೇಕು. ಅಭ್ಯರ್ಥಿಗಳು ಬಿಇಡಿ ಮತ್ತು ಪದವಿಯಲ್ಲಿ ಕನಿಷ್ಟ ಪಕ್ಷ ಒಟ್ಟಾರೆ ಶೇ.೫೦ರಷ್ಟು ಅಂಕ ಗಳಿಸಿ ಉತ್ತೀರ್ಣರಾಗಿರಬೇಕು. ಅಥವಾ ೨೦ ರಿಂದ ೨೮ ವರ್ಷ ವಯೋಮಿತಿಯಲ್ಲಿದ್ದು ಸರ್ಕಾರಿ ಮಾನ್ಯತೆ ಪಡೆದ ಶಾಲಾಕಾಲೇಜುಗಳಲ್ಲಿ ೨ ವರ್ಷಗಳ ಬೋಧನಾ ಅನುಭವ / ಬಿಇಡಿ ಪದವಿಯೊಂದಿಗೆ ಎಂಎ ಇಂಗ್ಲೀಷ್ / ಎಂಎಸ್ಸಿ ಗಣಿತ, ಭೌತಶಾಸ್ತ್ರ , ಕಂಪ್ಯೂಟರ್ ವಿಜ್ಞಾನ / ಎಂಸಿಎ ಪಾಸಾಗಿರಬೇಕು. ಗ್ರೂಪ್ ವೈ ಐಎಎಫ್ (ಸೆಕ್ಯುರಿಟಿ) ಐಎಎಫ್ (ಪೋಲೀಸ್) ಮತ್ತು ಇತರ ಎಲ್ಲಾ ಗ್ರೂಪ್ ವೈ ಟ್ರೇಡ್‌ಗಳಿಗೆ ೧೭ ರಿಂದ ೨೨ ವರ್ಷಗಳ ವಯೋಮಿತಿ ಹೊಂದಿದ್ದು ಅಭ್ಯರ್ಥಿಗಳು ಕಲೆ, ವಿಜ್ಞಾನ ಅಥವಾ ಕಾಮರ್ಸ್ ವಿಷಯಗಳೊಂದಿಗೆ ಇಂಟರ್‌ಮೀಡಿಯಟ್ / ೧೦+೨ / ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಟ ಪಕ್ಷ ಒಟ್ಟಾರೆ ಶೇ.೫೦ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಹೆಚ್ಚಿನ ಮಾಹಿತಿಗೆ ಏರ್‌ಮನ್ ಆಯ್ಕೆ ಕೇಂದ್ರ, ನಂ.೧, ಕಬ್ಬನ್ ರಸ್ತೆ, ಬೆಂಗಳೂರು - ೫೬೦೦೦೧ ದೂರವಾಣಿ ಸಂಖ್ಯೆ ೦೮೦ -೨೫೫೯೨೧೯೯ ಸಂಪರ್ಕಿಸಬಹುದಾಗಿದೆ.

ಮುಖಪುಟ /ಸುದ್ದಿ ಸಮಾಚಾರ