ಮುಖಪುಟ /ಸುದ್ದಿ ಸಮಾಚಾರ   
 

ರಾಜ್ಯಾದ್ಯಂತ ಹನುಮ ಜಯಂತಿ ಆಚರಣೆ

ಬೆಂಗಳೂರಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ

Anjaneya swamay, Hanumanthanagar, ಬೆಂಗಳೂರು, ಡಿ.10 ಇಂದು ರಾಮಭಕ್ತ ಹನುಮ ಜಯಂತಿ. ರಾಜ್ಯಾದ್ಯಂತ ಹನುಮ ಜಯಂತಿಯನ್ನು ಭಕ್ತಿ, ಭಾವಗಳಿಂದ ಆಚರಿಸಲಾಗುತ್ತಿದೆ.  ಬೆಂಗಳೂರಿನ ವಿವಿಧ ಶ್ರೀರಾಮ ಹಾಗೂ ಹನುಮ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ.

ಹನುಮಂತನಗರದಲ್ಲಿರುವ ಆನಂದ ಮಿಲನಾದ್ರಿ ಶ್ರೀರಾಮಾಂಜುನೇಯ ರಸ್ತೆಯಲ್ಲಿರುವ ಪ್ರಾಣದೇವರ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ಸ್ವಾಮಿಯನ್ನು ಸುಂದರವಾಗಿ ಅಲಂಕರಿಸಲಾಗಿತ್ತು.

ಕನ್ನಡ ಕುಲ ಪುಂಗವನಾದ ಹನುಮನ ಕಾಣಲು ಬೆಳಗ್ಗಿನಿಂದಲೇ ಆಂಜನೇಯನ ದೇವಾಲಯಗಳ ಮುಂದೆ ಭಕ್ತರು ಸಾಲುಗಟ್ಟಿ ನಿಂತ ದೃಶ್ಯ ಸಾಮಾನ್ಯವಾಗಿತ್ತು.

 

ಮುಖಪುಟ /ಸುದ್ದಿ ಸಮಾಚಾರ