ಮುಖಪುಟ /ಸುದ್ದಿ ಸಮಾಚಾರ   

ಸೆ.1ರಂದು ರಾಜ್ಯಕ್ಕೆ ಬರಲಿದೆ ಕ್ವೀನ್ಸ್ ಬ್ಯಾಟನ್

ಬೆಂಗಳೂರು ೨೬: ಕಾಮನ್‌ವೆಲ್ತ್ ಕ್ರೀಡಾಕೂಟದ ಕ್ವೀನ್ಸ್ ಬ್ಯಾಟನ್ ರಿಲೇಯು ದೇಶದ ಎಲ್ಲ ರಾಜ್ಯಗಳಿಗೆ ಸಂಚರಿಸಲಿದೆ.

ಸೆಪ್ಟೆಂಬರ್ ೧ರಂದು ರಾಜ್ಯಕ್ಕೆ ತಮಿಳುನಾಡಿನಿಂದ ಚಾಮರಾಜ ನಗರದ ಗಡಿಭಾಗದ ಚಿಕ್ಕನಹಳ್ಳಿಗೆ ಬರಲಿದ್ದು, ಈ ರಿಲೇ ಕಾರ್ಯಕ್ರಮದಲ್ಲಿ ತಾವು ಪಾಲ್ಗೊಳ್ಳುತ್ತಿರುವುದಾಗಿ ಯುವಜನಸೇವೆ ಹಾಗೂ ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬ್ಯಾಟನ್ ರಿಲೇ ಸ್ವೀಕರಿಸಿಕೊಂಡು ರಾಜ್ಯದ ಮೈಸೂರು, ಬೆಂಗಳೂರು, ಹಾಸನ, ಮಂಗಳೂರು ಮತ್ತು ಕಾರವಾರ ಜಿಲ್ಲೆಗಳ ಮೂಲಕ ಸೆಪ್ಟೆಂಬರ್ ೭ಕ್ಕೆ ಗೋವಾ ರಾಜ್ಯವನ್ನು ಪ್ರವೇಶಿಸಲಿದೆ.

ಮೈಸೂರಿನಲ್ಲಿ ನಾಡಿನ ಸಂಸ್ಕೃತಿ ಮತ್ತು ಚರಿತ್ರೆಯನ್ನು ಸಾರುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಚಿವರು ಹೇಳಿದರು.

ಸೆಪ್ಟೆಂಬರ್ ೨ರಂದು ಮೈಸೂರಿನಿಂದ ಹೊರಟ ಕ್ವೀನ್ಸ್ ಬ್ಯಾಟನ್ ರಿಲೇಯನ್ನು ಸಂಜೆ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಅವರು ಬರಮಾಡಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಅರ್ಜುನ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಅಂತಾರಾಷ್ಟ್ರೀಯ ಕ್ರೀಡಾಪಟುಗಳು, ಶಾಲಾ iಕ್ಕಳು, ಸಚಿವರು, ಸಂಸದರು, ಶಾಸಕರು ಚಿತ್ರರಂಗದ ಗಣ್ಯರು ಮುಂತಾದವರು ಪಾಲ್ಗೊಳ್ಳಲಿದ್ದಾರೆ.

ಸೆಪ್ಟೆಂಬರ್ ೪ರಂದು ಹಾಸನ ಜಿಲ್ಲೆಗೆ ತಲುಪಲಿರುವ ರಿಲೇ, ೫ರಂದು ಮಂಗಳೂರಿಗೆ, ೬ರಂದು ಕಾರವಾರಕ್ಕೆ ತಲುಪಿದೆ ಎಂದು ಕ್ರೀಡಾಸಚಿವರು ತಿಳಿಸಿದರು.   

 ಮುಖಪುಟ /ಸುದ್ದಿ ಸಮಾಚಾರ