ಮುಖಪುಟ /ಸುದ್ದಿ ಸಮಾಚಾರ   

ಕ್ರಾಯೊ-ಸೇವ್‌ನಿಂದ ಕಾರ್ಡ್ ಬ್ಲಡ್ ಸ್ಟೆಮ್ ಸೆಲ್ ಜಾಗೃತಿ ಮಾಸ

ಬೆಂಗಳೂರು, ಆಗಸ್ಟ್ ೩೧: ಯೂರೋಪ್‌ನ ಪ್ರಮುಖ ಸ್ಟೆಮ್ ಸೆಲ್ ಬ್ಯಾಂಕ್ ಕ್ರಾಯೊ-ಸೇವ್ ಸಾವಿರಾರು ಜೀವಗಳನ್ನು ಉಳಿಸುವ ವೈದ್ಯಕೀಯ ವಿಜ್ಞಾನದ ಹೊಸ ಸುಧಾರಣೆ ಬಗ್ಗೆ ಸಂದೇಶವನ್ನು ಹರಡಲು ಮತ್ತು ಅರಿವು ಮೂಡಿಸಲು ದೇಶಾದ್ಯಂತ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಒಂದೆಡೆ ತರಲು ಭಾರತದಲ್ಲಿ ಸೆಪ್ಟೆಂಬರ್ ತಿಂಗಳನ್ನು ತನ್ನ ಕಾರ್ಡ್ ಬ್ಲಡ್ ಸ್ಟೆಮ್ ಸೆಲ್ ಜಾಗೃತಿ ಮಾಸವೆಂದು ಪ್ರಕಟಿಸಿದೆ. ಕಾರ್ಡ್ ಬ್ಲಡ್ ಸ್ಟೆಮ್ ಸೆಲ್ ಜಾಗೃತಿ ಮಾಸ ದೇಶಾದ್ಯಂತ ಸಾಮಾನ್ಯ ಸಾರ್ವಜನಿಕರು ಮತ್ತು ರೋಗಿಗಳು, ವೈದ್ಯರು, ಸಂಶೋಧಕರನ್ನು ಸಂಪರ್ಕಿಸುವ ಸಾರ್ವಜನಿಕ ಅರಿವು ಮೂಡಿಸುವ ಉಪಕ್ರಮವಾಗಿದೆ.

ಸ್ಟೆಮ್ ಸೆಲ್ಟ್‌ನಲ್ಲಿ ವೈಜ್ಞಾನಿಕ ಮತ್ತು ಕ್ಲಿನಿಕಲ್ ಅಭಿವೃದ್ಧಿಗಳನ್ನು ಪ್ರಶಂಸಿಲು, ಪರಿಕಲ್ಪನೆ ಬಗೆಗಿರುವ ಊಹೆ ಹಾಗೂ ಕಟ್ಟುಕಥೆಗಳನ್ನು ವಿವರಿಸಲು ಮತ್ತು ಕಾರ್ಡ್ ಬ್ಲಡ್ ಸ್ಟೆಮ್ ಸೆಲ್‌ಗಳನ್ನು ಸಂಗ್ರಹಿಸುವ ಬಗ್ಗೆ ಜನರನ್ನು ಉತ್ತೇಜಿಸಲು ಇದು ವೇದಿಕೆ ಒದಗಿಸುತ್ತದೆ.

ಕ್ರಾಯೊ-ಸೇವ್ ಕಾರ್ಡ್ ಬ್ಲಡ್ ಸ್ಟೆಮ್ ಸೆಲ್ ಸಂಗ್ರಹದ ಬಗ್ಗೆ ಅರಿತುಕೊಳ್ಳುವಂತೆ ಪ್ರೋತ್ಸಾಹಿಸಲು ಈ ಉಪಕ್ರಮ ಕೈಗೊಂಡಿದೆ ಹಾಗೂ ಹಲವು ಮಾರಣಾಂತಿಕ ರೋಗಗಳಿಗೆ ಇದು ಸದೃಢ ಪರಿಹಾರವಾಗಿದೆ. ಈ ಸಂದರ್ಭದಲ್ಲಿ, ಭಾರತದ ಕ್ರಾಯೊ-ಸೇವ್ ನಿರ್ದೇಶಕರಾದ ಡಾ. ಪಾರಿಜಾತ ರಾವ್ ಮಾತನಾಡಿ, ಜೀವನಪರ್ಯಂತ ತಾಯಿಯ ಆರೈಕೆ ವಿಸ್ತರಿಸುವ ಮತ್ತು ಮಗುವಿನ ಭವಿಕ್ಯದ ಆರೋಗ್ಯದ ಭರವಸೆಯಾಗುವ ಕಾರ್ಡ್ ಬ್ಲಡ್ ಸಂಗ್ರಹಿಸುವಂತೆ ತಾಯಿಯಾಗುತ್ತಿರುವವರನ್ನು ಉತ್ತೇಜಿಸಲು ಬಯಸಿದ್ದೇವೆ ಎಂದರು.

ಬೆಂಗಳೂರು ಸೊಸೈಟಿ ಫಾರ್ ಆಬ್‌ಸ್ಟೆಸ್ಟ್ರಿಕ್ಸ್ ಅಂಡ್ ಗೈನಕಾಲಜಿಸ್ಟ್ ಅಧ್ಯಕ್ಷ ಡಾ. ಎನ್. ವೆಂಕಟೇಶ್ ಮಾತನಾಡಿ, ಕಾರ್ಡ್ ಬ್ಲಡ್ ಸ್ಟೆಮ್ ಸೆಲ್ಸ್ ಬಗ್ಗೆ ಜನರಲ್ಲಿ ಅರಿವು

ಮೂಡಿಸಬೇಕು ಹಾಗೂ ಇದು ಕ್ಲಿನಿಕಲ್ ಅಪ್ಲಿಕೇಕನ್ಸ್ ಭಾರತದಲ್ಲಿ ಕಡಿಮೆಯಿದ್ದು, ಈ ರೀತಿಯ ಜಾಗೃತಿ ಕಾರ್ಯಕ್ರಮವು ತಾಯಿಯಾಗುತ್ತಿರುವವರು ವಿವೇಚನಯುತ ನಿರ್ಧಾರ ಮಾಡುವುದಕ್ಕೆ ನಿರ್ಧಾರವಾಗುತ್ತದೆ. ನಾವು ಸಂಗ್ರಹಿಸುವ ಜೈವಿಕ ತ್ಯಾಜ್ಯ ರೂಪದ ಇದು ವೈದ್ಯಕೀಯ ವಿಜ್ಞಾನದ ಕ್ರಾಂತಿಯಲ್ಲಿ ಒಂದು ವಿಶೇಕ ಮೈಲಿಗಲ್ಲಾಗಿದೆ ಹಾಗೂ ಕಾರ್ಡ್ ಬ್ಲಡ್ ಸ್ಟೆಮ್ ಸೆಲ್ ಸಂಗ್ರಹ ವಿವಿಧ ವೈದ್ಯಕೀಯ ಸಂದರ್ಭಗಳಲ್ಲಿ ಚಿಕಿತ್ಸೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ ಎಂದರು.

ಕೀಮೊಥೆರಪಿ ಹಲವು ಕ್ಯಾನ್ಸರ್ ಸೆಲ್‌ಗಳನ್ನು ನಿರ್ಮೂಲನ ಮಾಡುವುದರೊಂದಿಗೆ

ಬೋನ್ ಮ್ಯಾರೊನಲ್ಲಿ ರಕ್ತ ರೂಪಿಸುವ ಸೆಲ್‌ಗಳನ್ನು ತೆಗೆಯುವುದರಿಂದ ರೋಗಿಯ ಶಕ್ತಿ ಕಡಿಮೆಯಾಗಿ ಸಾವನ್ನಪ್ಪುತ್ತಾರೆ. ಈ ಪ್ರಕರಣದಲ್ಲಿ, ರಕ್ತ ತೊಂದರೆಯಲ್ಲಿದ್ದಾಗ ಅಥವಾ ದಾನಿಯ ಮ್ಯಾರೊದಿಂದ ತೆಗೆದುಕೊಂಡ ಸ್ಟೆಮ್ ಸೆಲ್‌ಗಳನ್ನು ರೋಗಿಗೆ ಚುಚ್ಚುಮದ್ದಿನಿಂದ ಹಾಕಲಾಗುತ್ತದೆ. ಮೂರನೇ ಕ್ಷಿಪ್ರವಾಗಿ ವಿಕಸಿತವಾಗುತ್ತಿರುವ ಆಯ್ಕೆಯಾಗಿ ಸ್ಟೆಮ್ ಸೆಲ್ಸ್ ಬಳಸಲಾಗುತ್ತಿದ್ದು, ಸ್ಟೆಮ್ ಸೆಲ್ ಬ್ಯಾಂಕ್‌ನಲ್ಲಿ ಹೊಕ್ಕಳಬಳ್ಳಿಯಿಂದ ಇವುಗಳನ್ನು

ಸಂಗ್ರಹಿಸುವುದು ಸೂಕ್ತ ಹಾಗೂ ವಿಶ್ವಾದ್ಯಂತ ಸ್ಟೆಮ್ ಸೆಲ್ ಬ್ಯಾಂಕ್‌ಗಳು ಕ್ರಮೇಣವಾಗಿ ವಿಕಸನವಾಗುತ್ತಿವೆ ಎಂದರು ವೈದೇಹಿ ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ ಅಂಡ್ ರೀಸರ್ಚ್ ಸೆಂಟರ್, ಆಂಕಾಲಜಿ ಮುಖ್ಯಸ್ಥ ಡಾ. ಗಣೇಶ್.

ಕಾರ್ಡ್ ಬ್ಲಡ್ ಸ್ಟೆಮ್ ಸೆಲ್ಸ್ ಅಸಾಧಾರಣ ಸಾಧನೆ ಸೃಷ್ಟಿ, ವೈದ್ಯಕೀಯ ಸಂಶೋಧನೆಯಲ್ಲಿ ಅಸಾಧಾರಣ ಉತ್ತೇಜನ ಮೂಡಿಸಿವೆ. ಕಾರ್ಡ್ ಬ್ಲಡ್ ಸೆಲ್‌ಗಳು ಶುದ್ಧ ರೂಪದಲ್ಲಿದ್ದು ಹಲವು ಮಾರಣಾಂತಿಕ, ಗಂಭೀರ ರೋಗಿಗಳ ಚಿಕಿತ್ಸೆಯಲ್ಲಿ ಉಪಯೋಗವಾಗುತ್ತದೆ ಮತ್ತು ಹೃದಯ, ಶ್ವಾಸ, ಮಿದುಳು, ಕಿಡ್ನಿ ಹಾಗೂ ನರವ್ಯೂಹ ವ್ಯವಸ್ಥೆ (ಅಲ್ಜೈಮರ್ ಮತ್ತು ಪಾರ್ಕಿನಸನ್ಸ್ ರೋಗ ಸೇರಿದಂತೆ), ಆಟೊಇಮ್ಯೂನ್ ರೋಗಗಳು (ಮಲ್ಟಿಪಲ್ ಸೆಲೊರೊಸಿಸ್, ಟೈಪ್ ೧ ಡಯಬಿಟಿಸ್ ಹಾಗೂ ರ‍್ಯೂಮಟಾಯ್ಡ್ ಆರ್ಥ್ರಿಟ್ರಿಸ್), ಇಮ್ಯುನೊಡಿಫೀಸಿಯನ್ಸಿ ಇತ್ಯಾದಿ ರೋಗಳನ್ನು ನಿಯಂತ್ರಿಸುತ್ತದೆ. ಜಾಗತಿಕವಾಗಿ ಕ್ಯಾನ್ಸರ್ ಮತ್ತು ಹಲವು ನ್ಯೂರಲ್ ರೋಗಗಳಿಗೆ ನೀಡಿರುವ ಚಿಕಿತ್ಸೆಯಲ್ಲಿ ೨೫.೩% ಸ್ಟೆಮ್ ಸೆಲ್ ಥೆರಪಿಗಳು ಯಶಸ್ವಿಯಾಗಿವೆ. ಸಂಶೋಧನೆ ಮತ್ತು ಅಧ್ಯಯನ ನಡೆಯುತ್ತಿದ್ದು ಇಂತಹ ಮಾರಣಾಂತಿಕ ರೋಗಗಳಿಂದ ನಮ್ಮ ಜೀವನ ರಕ್ಷಿಸುವ ಮತ್ತು ಮತ್ತು ನಿರ್ವಹಿಸುವ ಹಲವು ಹೆಚ್ಚಿನ ವಿಧಾನಗಳನ್ನು ಕಂಡುಹಿಡಿಯಲಾಗುತ್ತದೆ.

ಕ್ರಾಯೊ-ಸೇವ್ ಬಗ್ಗೆ:ಯೂರೋಪ್‌ನ ಬೃಹತ್ ಅಡಲ್ಟ್ ಸ್ಟೆಮ್ ಸೆಲ್ ಸಂಗ್ರಹದ ಬ್ಯಾಂಕ್ ಕ್ರಾಯೊ-ಸೇವ್ ಇಂಡಿಯಾ ಕ್ರಾಯೊ ಸೇವ್ ಗ್ರೂಪ್ ಎನ್.ವಿಯ ೧೦೦% ಬೆಂಬಲಿತ ಸಂಸ್ಥೆಯಾಗಿದ್ದು, ಸುಸಜ್ಜಿತ ಸಂಪೂರ್ಣ ಸ್ವಯಂಚಾಲಿತ ವಯಸ್ಕ ಸ್ಟೆಮ್ ಸೆಲ್ ಸಂಗ್ರಹದ ಘಟಕದೊಂದಿಗೆ ಬೆಂಗಳೂರಿನಲ್ಲಿ ಮುಖ್ಯಕಚೇರಿ ಹೊಂದಿದೆ. ಬೆಂಗಳೂರಿನ ಘಟಕವು ೧೦,೦೦೦ ಚದರ ಅಡಿ ವಿಸ್ತೀರ್ಣದಲ್ಲಿ ೧,೫೦,೦೦೦ ಮಾದರಿಗಳಿಂದ ೩,೦೦,೦೦೦ ವರೆಗೆ ಮಾದರಿಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. ಕ್ರಾಯೊ-ಸೇವ್ ಇಂಡಿಯಾ ಅತ್ಯುತ್ತಮ ಗುಣಮಟ್ಟದ ದರ್ಜೆಗಳಿಗೆ ಸಮರ್ಪಿತವಾಗಿದೆ ಹಾಗೂ ತನ್ನ ಕಾರ್ಯಾಚರಣೆ ಆರಂಭಿಸಿದ ಸ್ವಲ್ಪ ಸಮಯದಲ್ಲಿಯೇ, ಟಿಯುವಿನಿಂದ ಐಎಸ್‌ಒ ೯೦೦೧:೨೦೦೮ ಪ್ರಮಾಣಪತ್ರ ಪಡೆದುಕೊಂಡಿದೆ.

ಜಿಎಂಪಿ ಅಗತ್ಯಗಳನ್ನು ಪೂರೈಸುವ ಮತ್ತು ಭಾರತದ ನಿಯಮಗಳನ್ನು ಒಳಗೊಂಡಿರುವ ರೀತಿಯಲ್ಲಿ ಲ್ಯಾಬ್ ನಿರ್ಮಾಣಗೊಂಡಿದೆ. ಕ್ರಾಯೊ-ಸೇವ್ ಇಂಡಿಯಾ ತನ್ನ ಅನನ್ಯ ಎರಡು-ಸಂಗ್ರಹ ವ್ಯವಸ್ಥೆಗಳೊಂದಿಗೆ ಭಾರತದ ಏಕೈಕ ಕಂಪನಿ ಆಗಿದೆ ಹಾಗೂ ಇದು ದೇಶದಲ್ಲಿ ಮೊದಲ ಬಾರಿಗೆ ಲಭ್ಯವಾಗುತ್ತಿದೆ.

ಕ್ರಾಯೊ-ಸೇವ್ ಗ್ರೂಪ್ ಎನ್.ವಿ. (ಎಐಎಂ: ಕ್ರಾಯೊ) ೧೩೫,೦೦೦ಕ್ಕೂ ಹೆಚ್ಚು ಮಾದರಿ ಸಂಗ್ರಹಿಸುವುದರೊಂದಿಗೆ ಯೂರೋಪ್‌ನ ಬೃಹತ್ ಅಡಲ್ಟ್ ಸ್ಟೆಮ್ ಸೆಲ್ ಸಂಗ್ರಹದ ಬ್ಯಾಂಕ್ ಆಗಿದೆ. ೨೦೦೦ರಲ್ಲಿ ಆರಂಭಗೊಂಡ ಕಂಪನಿ, ನೆದರ್‌ಲೆಂಡ್ಸ್‌ನಲ್ಲಿ ಮುಖ್ಯಕಚೇರಿ ಹೊಂದಿದೆ ಹಾಗೂ ತನ್ನದೇ ಅಥವಾ ಸೌಲಭ್ಯಕ್ಕಾಗಿ, ಬೆಲ್ಜಿಯಂ, ಜರ್ಮನಿ ಮತ್ತು ದುಬೈನಲ್ಲಿ ಲ್ಯಾಬೊರೇಟರಿ ಹಾಗೂ ಸಂಗ್ರಹ ಘಟಕಗಳನ್ನು ನಿರ್ವಹಿಸುತ್ತಿದೆ. ತನ್ನ ಅಂತಾರಾಷ್ಟ್ರೀಯ ವ್ಯವಹಾರ ಕೌಶಲ್ಯದಿಂದ, ಕ್ರಾಯೊ ಸೇವ್‌ನ ಸೇವೆಗಳು ಮೂರು ಖಂಡಗಳಾದ್ಯಂತ (ಯೂರೋಪ್, ಏಕ್ಯಾ, ಆಫ್ರಿಕಾ) ೩೯ ರಾಕ್ಟ್ರಗಳಲ್ಲಿ ಸೇವೆ ಒದಗಿಸುತ್ತಿದೆ ಮತ್ತು ಬೆಲ್ಜಿಯಂ, ಜರ್ಮನಿ ದುಬೈ ಹಾಗೂ ಫ್ರಾನ್ಸ್ (ಪ್ರಸ್ತುತ ನಿರ್ಮಾಣಗೊಳ್ಳುತ್ತಿದೆ)ನಲ್ಲಿ ಸುಸಜ್ಜಿತ ಪ್ರಕ್ರಿಯೆ ಘಟಕಗಳನ್ನು ಹೊಂದಿದೆ.

ಕ್ರಾಯೊ ಸೇವ್ ಕಾರ್ಡ್ ಬ್ಲಡ್, ಹೊಕ್ಕಳಬಳ್ಳಿ ಮತ್ತು ಆಡಿಪೋಸ್ ಟಿಶ್ಯೂವಿನಿಂದ ಅಡಲ್ಟ್ ಸ್ಟೆಮ್ ಸೆಲ್ಸ್ ರಕ್ಷಣೆ ಮತ್ತು ಸಂಗ್ರಹ ಮಾಡುತ್ತಿದೆ. ಕ್ರಾಯೊ-ಸೇವ್ ಸ್ಟೆಮ್ ಸೆಲ್ ಸಂಗ್ರಹದಲ್ಲಿ ಅತ್ಯುತ್ತು ಗುಣಮಟ್ಟದ ದರ್ಜೆಗಳನ್ನು ನಿರ್ವಹಿಸುತ್ತಿದ್ದು, ಭವಿಕ್ಯದಲ್ಲಿ ಮಾರಣಾಂತಿಕ ರೋಗಗಳ ವಿರುದ್ಧದ ಹೋರಾಟಕ್ಕೆ ಕೊಡುಗೆ ನೀಡುವ ಪ್ರಮುಖ ಉದ್ದೇಶವನ್ನು ಹೊಂದಿದೆ. ಕ್ರಾಯೊ-ಸೇವ್ ತನ್ನ ಸೇವೆ ಕ್ರಾಯೊಕಾರ್ಡ್ಗೆ ಗ್ಯಾರಂಟಿ ನೀಡಿದ್ದು, ಸಾಗಾಣಿಕೆ, ಸಿದ್ಧತೆ ಮತ್ತು ನಿಮ್ಮ ಮಗುವಿನ ಅಂಬಿಲಿಕಲ್ ಕಾರ್ಡ್ ಬ್ಲಡ್ ಸಂಗ್ರಹದಲ್ಲಿ ಉನ್ನತ ಗುಣಮಟ್ಟದ ದರ್ಜೆಗಳನ್ನು ನಿರ್ವಹಿಸುವ ಭರವಸೆ ನೀಡುತ್ತದೆ.

ಕಾರ್ಡ್ ಬ್ಲಡ್ ಸ್ಟೆಮ್ ಸೆಲ್ ಜಾಗೃತಿ ಸಹಾಯವಾಣಿ: +91 810 555 7777

 ಮುಖಪುಟ /ಸುದ್ದಿ ಸಮಾಚಾರ