ಮುಖಪುಟ /ಸುದ್ದಿ ಸಮಾಚಾರ   

ಖ್ಯಾತ ವಿಮರ್ಶಕ ಕಿ.ರಂ. ನಾಗರಾಜ್ ನಿಧನ

Kiram Nagaraj, ಕಿ.ರಂ. ನಾಗರಾಜ್ಬೆಂಗಳೂರು, ಆಗಸ್ಟ್ 7 :ಕನ್ನಡ ಸಾರಸ್ವತ ಲೋಕದ ಹಿರಿಯ ಕವಿ, ವಿಮರ್ಶಕ ಕಿ.ರಂ. ನಾಗರಾಜ್ ಇಂದು ರಾತ್ರಿ ತೀವ್ರ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನ ಹೊಂದಿದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಬನಶಂಕರಿಯ ಸುಚಿತ್ರಾ ಫಿಲಂ ಸೊಸೈಟಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ವರಕವಿ ಬೇಂದ್ರೆ ಅವರ ಬಗ್ಗೆ ಉಪನ್ಯಾಸ ನೀಡಿ, ಮನೆಗೆ ಮರಳಿದ ಕಿ.ರಂ. ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

1943ರಲ್ಲಿ ಹಾಸನ ಜಿಲ್ಲೆ ಕಿತ್ತಾನೆಯಲ್ಲಿ ಜನಿಸಿದ ಕಿ.ರಂ.ನಾಗರಾಜ್ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಅವರು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಕನ್ನಡದ ಅತ್ಯುತ್ತಮ ವಿಮರ್ಶಕ ಎಂದೇ ಹೆಸರಾಗಿದ್ದ ಕಿ.ರಂ. ಹಲವು ಯುವ ಕವಿಗಳನ್ನು, ಬರಹಗಾರರನ್ನು ಬೆಳೆಸಿದ ಶ್ರೇಯಕ್ಕೆ ಪಾತ್ರರಾಗಿದ್ದರು. ನಾಳೆ ಅಂತ್ಯಕ್ರಿಯೆ ನಡೆಯಲಿದೆ.ಕಿ.ರಂ.ನಾಗರಾಜ್ ಅವರ ನಿಧನಕ್ಕೆ ಸಾಹಿತ್ಯ ಲೋಕದ ಗಣ್ಯರು ಕಂಬನಿ ಮಿಡಿದಿದ್ದಾರೆ.

 ಮುಖಪುಟ /ಸುದ್ದಿ ಸಮಾಚಾರ