ಮುಖಪುಟ /ಸುದ್ದಿ ಸಮಾಚಾರ   
 

ಬೆಂಗಳೂರು ಬಂದ್ ಗೆ ನೀರಸ ಪ್ರತಿಕ್ರಿಯೆ

ಬೆಂಗಳೂರು, ಆಗಸ್ಟ್ 9 : ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಅನಾವರಣ ವಿರೋಧಿಸಿ, ಕನ್ನಡ ಪರ ಸಂಘಟನೆಗಳು ಇಂದು ಕರೆ ನೀಡಿದ್ದ ಬೆಂಗಳೂರು ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಇಂದು ಭಾನುವಾರವಾಗಿದ್ದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು ಬಾಗಿಲು ಮುಚ್ಚಿದ್ದವು. ಸಂಚಾರ  ವಿರಳವಾಗಿತ್ತು. ಆದರೆ, ವಾಣಿಜ್ಯ ವಹಿವಾಟು ಮಾಮೂಲಿನಂತಿತ್ತು. ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ವಾಟಾಳ್ ನಾಗರಾಜ್, ಕನ್ನಡ ರಕ್ಷಣಾ ವೇದಿಕೆಯ ಹಿರಿಯ ಮುಖಂಡರು ಸೇರಿದಂತೆ ನೂರಾರು ಕನ್ನಡ ಪರ ಕಾರ್ಯಕರ್ತರುಗಳನ್ನು ಬಂಧಿಸಿತ್ತು.

ಈ ನಡುವೆಯೂ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ  ಕನ್ನಡ ಪರ ಕಾರ್ಯಕರ್ತರ ಬಂಧನ ಪ್ರತಿಭಟಿಸಿ ಹಾಗೂ ತಿರುವಳ್ಳುವರ್ ಪ್ರತಿಮೆ ವಿರೋಧಿಸಿ ಬೀದಿಗಿಳಿದು ಹೋರಾಟ ನಡೆಸಿದ ಕನ್ನಡ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಜನಜೀವನ ಸಾಮಾನ್ಯವಾಗಿತ್ತು.

 ಮುಖಪುಟ /ಸುದ್ದಿ ಸಮಾಚಾರ