ಮುಖಪುಟ /ಸುದ್ದಿ ಸಮಾಚಾರ 

ತಿಥಿ ಮಾಡಿ ವಿಭಿನ್ನವಾಗಿ ಬಂದ್ ಆಚರಣೆ

ಬೆಂಗಳೂರು, ಏ.18 ತಮಿಳುನಾಡು ನಡೆಸಿದ ಬಂದ್ ಗೆ ಪ್ರತಿಯಾಗಿ ಇಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಅಂಗವಾಗಿ ಬೆಂಗಳೂರಿನ ಪುರಭವನದ ಬಳಿ ಬೃಹತ್ ಪ್ರತಿಭಟನೆ ನಡೆಯಲಾಯಿತು. ಬಳಿಕ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬೃಹತ್ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಬಾವುಟಗಳು ಬಾನೆತ್ತರದಲ್ಲಿ ಹಾರಾಡಿದರೆ, ನಾಡಗೀತೆ ಹಾಗೂ ಕನ್ನಡ ಪರ ಜಯಕಾರ ಮುಗಿಲು ಮುಟ್ಟುವಂತೆ ಮೊಳಗಿತು.

ಬೆಳಗ್ಗೆಯಿಂಗೆಂದಲೇ ನೂರಾರು ಬೈಕ್‌ಗಳಲ್ಲಿ ಬಂದು ಪುರಭವನ ಬಳಿ ಜಮಾಯಿಸಿದ ಕನ್ನಡ ಪರ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಇದೇ ವೇಳೆ ಪುರಭವನದ ಎದುರು ಧರಣಿ ನಡೆಸಲಾತು.  ತಮಿಳುನಾಡು ಮುಖ್ಯಮಂತ್ರಿ  ಪನ್ನೀರು ಸೆಲ್ವಂ ಹಾಗೂ ಮಾಜಿ ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇವರಿಬ್ಬರ ಚಿತ್ರ ಇಟ್ಟು, ತಿಥಿ ಮಾಡಿ ಅಣಕು ಶವಯಾತ್ರೆ ನಡೆಸಿದರು.

ಈ ಸಂದರ್ಭದಲ್ಲಿ ಚಂದ್ರಶೇಖರ ಪಾಟೀಲ್, ನಟ, ನಿರ್ಮಾಪಕ ಸಾ.ರಾ.ಗೋವಿಂದು, ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಸೇರಿದಂತೆ ಹಲವು ಸಾಹಿತಿ ಕಲಾವಿದರು ಪಾಲ್ಗೊಂಡಿದ್ದರು.

 

ಮುಖಪುಟ /ಸುದ್ದಿ ಸಮಾಚಾರ