ಮುಖಪುಟ /ಸುದ್ದಿ ಸಮಾಚಾರ 

ತುಮಕೂರಿನಲ್ಲಿ ಜಗ್ಗೇಶ್ ಪ್ರತಿಭಟನೆ

ಬೆಂಗಳೂರು, ಏ.18 ಕನ್ನಡ ಪರ ಸಂಘಟನೆಗೆಳು ಇಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಚಿತ್ರನಟ ಹಾಗೂ ವಿಧಾನಪರಿಷತ್ ಸದಸ್ಯ ಜಗ್ಗೇಶ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕನ್ನಡ ಕಾರ್ಯಕರ್ತರೊಂದಿಗೆ ತುಮಕೂರಿನಲ್ಲಿಂದು ರಸ್ತೆಯಲ್ಲಿ ಅವರು ಪ್ರತಿಭಟನೆ ನಡೆಸಿ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿಗೆ ಯಾರೂ ಅಡ್ಡಿಪಡಿಸಬಾರದು ಇದು ಮಾನವೀಯತೆ ಅಲ್ಲ ಎಂದರು.

ರಾಜ್ಯ ಸರ್ಕಾರ ಯಾರ ಒತ್ತಡಕ್ಕೂ ಮಣಿಯದೆ ಯೋಜನೆಯ ಜಾರಿಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಸಿದರು.

ರಾಜ್ಯದ ಜನತೆ ಬೀದಿಗಿಳಿದು ಇಲ್ಲವೇ ಸಾಮಾಜಿಕ ತಾಣಗಳ ಮೂಲಕ ಬಂದ್‌ಗೆ ತಮ್ಮ ಬೆಂಬಲ ಸೂಚಿಸಬೇಕು ಎಂದು ಅವರು ಕರೆ ನೀಡಿದರು.

 

ಮುಖಪುಟ /ಸುದ್ದಿ ಸಮಾಚಾರ