ಮುಖಪುಟ /ಸುದ್ದಿ ಸಮಾಚಾರ

ಕನ್ನಡ ಚಿತ್ರಗಳಲ್ಲಿ ಸಂಸ್ಕಾರವೇ ಇಲ್ಲ - ರಾಜೇಶ್ ವಿಷಾದ

Rajeshಬೆಂಗಳೂರು, ಏ.೨೧:- ಕನ್ನಡ ಚಿತ್ರಗಳು ಇಂದು ತೀರಾ ಕಳಪೆಯಾಗುತ್ತಿದ್ದು, ಕಲಾವಿದರಲ್ಲಿ ಭಾಷೆ, ಸಂಸ್ಕೃತಿ, ಸಂಸ್ಕಾರವೇ ಇಲ್ಲದಂತಾಗಿದೆ ಎಂದು ಹಿರಿಯ ಚಿತ್ರನಟ ರಾಜೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಕನ್ನಡ ಕುಲ ದೀಪಕರು ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲಾವಿದರು ತೊಡುವ ಅರೆನಗ್ನ ವಸ್ತ್ರಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಮಕ್ಕಳು, ಕುಟುಂಬದ ಸದಸ್ಯರೊಂದಿಗೆ ಚಿತ್ರಮಂದಿರಕ್ಕೆ ಹೋದರೆ ಕಣ್ಮುಚ್ಚಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದಿಸಿದರು.

ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರ ಚಿತ್ರಗಳನ್ನು ಇಂದಿನ ಎಲ್ಲ ಕಲಾವಿದರು ವೀಕ್ಷಿಸಿದರೆ ಅವರಿಗೆ ಕರ್ನಾಟಕದ ಕಲೆ, ಸಂಸ್ಕೃತಿ, ಸಂಸ್ಕಾರದ ಪರಿಚಯ ಆಗುತ್ತದೆ. ಅನುಭವ ಇಲ್ಲದ ಮಂದಿ ಇಂದು ಚಿತ್ರರಂಗ ಪ್ರವೇಶಿಸುತ್ತಿರುವುದೇ ಇದಕ್ಕೆಲ್ಲಾ ಕಾರಣ ಎಂದು ಹೇಳಿದರು.

ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಮತ್ತಿತರರು ಉಪಸ್ಥಿತರಿದ್ದರು.

 

ಮುಖಪುಟ /ಸುದ್ದಿ ಸಮಾಚಾರ