ಮುಖಪುಟ /ಲೇಖನಮಾಲೆ 
 

ರಂಗಾಭರಣ ಕಲಾಕೇಂದ್ರ (ರಿ)
ಕಲಾರಂಗದಲ್ಲಿ 15 ವರ್ಷಗಳ ಸಾರ್ಥಕ ಸಾಧನೆ..

ರಂಗಾಭರಣರಂಗಾಭರಣ ಕಲಾಕೇಂದ್ರ (ರಿ), ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಕಲಾಶಾಲೆ. ಚಿತ್ರಕಲೆ, ಕುಸುರಿ ಕಲೆ, ನಾಟಕ, ಸಂಗೀತ, ನೃತ್ಯ, ಆತ್ಮರಕ್ಷಣಾ ಕಲೆ ಸೇರಿದಂತೆ ವಿವಿಧ ತರಬೇತಿಯಲ್ಲಿ ತೊಡಗಿಸಿಕೊಂಡಿರುವ ರಂಗಾಭರಣ, ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಕಲೆಯನ್ನು ಪ್ರೋತ್ಸಾಹಿಸಲು  ನಿಯಮಿತವಾಗಿ ಚಿತ್ರಕಲೆ, ಸಂಗೀತ, ನೃತ್ಯ ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಬಂದಿದೆ.

ತಮ್ಮ ಕಲಾಕೇಂದ್ರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳ ಪ್ರತಿಭೆಯ ಪ್ರಕಾಶಕ್ಕೂ ವೇದಿಕೆ ಕಲ್ಪಿಸುತ್ತಿರುವ ರಂಗಾಭರಣ, ಪ್ರತಿ ೬ ತಿಂಗಳಿಗೊಮ್ಮೆ ಸಾಂಸ್ಕೃತಿಕ ಉತ್ಸವ, ಪ್ರತಿಭೋತ್ಸವಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ರಾಜ್ಯದ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಡೆಯುವ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ತಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿರುವ ರಂಗಾಭರಣ, ಪ್ರಶಸ್ತಿ ಪಾರಿತೋಷಕಗಳನ್ನೂ ಬಾಚಿಕೊಂಡಿದೆ.

ಸ್ಥಾಪನೆ

3೦ ವರ್ಷಗಳ ಹಿಂದೆ ಆರ್.ಟಿ. ನಗರದಲ್ಲಿ ಪ್ರಾರಂಭವಾದ ರಂಗಾಭರಣ ಕಲಾಕೇಂದ್ರ ಈ ಒಂದೂವರೆ ದಶಕದಲ್ಲಿ ಕಲಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಬೆಂಗಳೂರಿನ ಸಂಜಯ ನಗರದಲ್ಲಿ ಶಾಖೆಯೊಂದನ್ನು ತೆರೆದು ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ.

ಆರ್.ಟಿ.ನಗರ ಹಾಗೂ ಸಂಜಯನಗರದ ಶಾಲೆಗಳಲ್ಲಿ ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಸಂಗೀತ, ಚಿತ್ರಕಲೆ, ಪಾಶ್ಚಾತ್ಯ ನೃತ್ಯ, ಅಭಿನಯ ಕಲೆ ಸೇರಿದಂತೆ ವಿವಿಧ ಕಲಾ ಪ್ರಕಾರಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಕೇವಲ ತರಬೇತಿ ನೀಡಿದರಷ್ಟೇ ಸಾಲದು, ತರಬೇತಿ ಹೊಂದಿದವರಿಗೆ ತಮ್ಮ ಪ್ರತಿಭೆಯ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವುದೂ ಅಷ್ಟೇ ಅಗತ್ಯ  ಎಂಬುದನ್ನು ಮನಗಂಡಿರುವ ರಂಗಾಭರಣ. ಸಂಜಯನಗರದ ಕೆ..ಬಿ. ಬಡಾವಣೆಯಲ್ಲಿ ತನ್ನದೇ ಆದ ಸ್ವಂತ ರಂಗಮಂದಿರವನ್ನೂ ನಿರ್ಮಿಸಿದೆ.

ಚಂದ್ರಪ್ರಿಯ ರಂಗಮಂದಿರ...

ಚಂದ್ರಪ್ರಿಯ ರಂಗಮಂದಿರರಂಗಾಭರಣ ಕಲಾ ಕೇಂದ್ರದಲ್ಲಿ  ಸಂಗೀತ, ನೃತ್ಯ ಹಾಗೂ ರಂಗ ತರಬೇತಿ ಪಡೆಯುತ್ತಿರುವ ಯುವ ಕಲಾವಿದರ ಪ್ರತಿಭೆಯ ಪ್ರಕಾಶಕ್ಕಾಗಿ ನಿರಂತರ ವೇದಿಕೆ ಕಲ್ಪಿಸುವ ಸಲುವಾಗಿ ಹಾಗೂ ಉತ್ತರ ಬೆಂಗಳೂರು ಭಾಗದಲ್ಲಿ ಇರುವ ಕಲಾಮಂದಿರದ ಕೊರತೆ ನೀಗಿಸಲು ಭವಾನಿ ಟ್ರಸ್ಟ್‌ನ ಲಕ್ಷ್ಮಣ್ ದಂಪತಿಗಳ ಆರ್ಥಿಕ ನೆರವಿನಿಂದ ರಂಗಾಭರಣ ಈಗ ಸಂಜಯನಗರದಲ್ಲಿ  ಸ್ವಂತ ಆಪ್ತ ರಂಗಮಂದಿರವನ್ನೂ ನಿರ್ಮಿಸಿದೆ.

ಸಂಜಯನಗರ ಕೆ..ಬಿ. ಬಡಾವಣೆಯ ೭ನೇ ಮುಖ್ಯರಸ್ತೆ, ೩ನೇ ಅಡ್ಡರಸ್ತೆಯಲ್ಲಿ ನಿರ್ಮಿಸಲಾಗಿರುವ ೨೦೦ ಆಸನಗಳ, ಆಧುನಿಕ ಧ್ವನಿ ಬೆಳಕಿನ ವ್ಯವಸ್ಥೆ ಇರುವ ಚಂದ್ರಪ್ರಿಯ ರಂಗಮಂದಿರದಲ್ಲಿ ತಿಂಗಳಲ್ಲಿ ಎರಡು ಬಾರಿ ತಮ್ಮ ಕಲಾಶಾಲೆಯ ಪುಟಾಣಿಗಳಿಂದ ಹಾಗೂ ಅನುಭವಿ ಯುವಕಲಾವಿದರಿಂದ ಸ್ಥಳೀಯ ನಾಗರಿಕರ ಮನರಂಜನೆಗಾಗಿ  ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲೂ ರಂಗಾಭರಣ ಉದ್ದೇಶಿಸಿದೆ. ೨೦೦ ಆಸನಗಳ ಈ ಸುಂದರ ರಂಗಮಂದಿರ, ನಾಟಕ, ನೃತ್ಯ, ಸಂಗೀತವೇ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ವಿಚಾರಸಂಕಿರಣ, ವಿಚಾರಗೋಷ್ಠಿಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ.

ರಂಗ ಚಟುವಟಿಕೆಗಳ ತಾಲೀಮು, ರಂಗ ಪ್ರದರ್ಶನಕ್ಕೆ ಅಗತ್ಯವಾದ ಎಲ್ಲ ಅತ್ಯಾಧುನಿಕ ಪರಿಕರಗಳೂ ಇಲ್ಲಿವೆ. ಅತ್ಯುತ್ತಮ ಬೆಳಕಿನ ವ್ಯವಸ್ಥೆ, ಧ್ವನಿ ವ್ಯವಸ್ಥೆಯನ್ನು ಹೊಂದಿರುವ ರಂಗಮಂದಿರದಲ್ಲಿ ಪ್ರತಿ ತಿಂಗಳೂ ರಂಗಾಭರಣ ಕಲಾವಿದರು ರಂಗ ಸಂಜೆಯನ್ನು ನಡೆಸಿಕೊಡುತ್ತಾರೆ. ಶಾಲೆಯ ಉದಯೋನ್ಮುಖ ವಿದ್ಯಾರ್ಥಿಗಳಿಗೆ ರಂಗ ತಾಲೀಮಿನ ಮೊದಲ ವೇದಿಕೆ ಇದಾಗಿದೆ.

ವರಪ್ರದ ಶ್ರೀ ಬಲಮುರಿ ಗಣಪತಿ ದೇವಾಲಯ...

ಗಣಪತಿ ದೇವಾಲಯಆದಿ ವಂದಿಪ ಗಣಪ. ಯಾವುದೇ ಶುಭಕಾರ್ಯ ಮಾಡುವ ಮುನ್ನ ವಿಘ್ನನಿವಾರಕ ಗಣಪನ ಪೂಜಿಸುವುದು ಸಂಪ್ರದಾಯ. ಹೀಗಾಗೇ ರಂಗಾಭರಣ ಕಲಾಕೇಂದ್ರ ಸಂಜಯನಗರದ ಸ್ವಂತ ಕಟ್ಟಡದ ಮುಂಭಾಗದಲ್ಲಿ ವರಸಿದ್ಧಿವಿನಾಯಕನ ದೇವಾಲಯ ನಿರ್ಮಿಸಿದೆ. ಆ ಮೂಲಕ ಈ ಭಾಗದಲ್ಲಿ ಇದ್ದ ದೇವಾಲಯದ ಕೊರತೆಯನ್ನೂ ನೀಗಿಸಿದೆ.

ತರಬೇತಿ ಕೋರ್ಸ್‌ಗಳು...

. ಭರತನಾಟ್ಯ

. ಕೂಚುಪುಡಿ ನೃತ್ಯ

. ಚಲನಚಿತ್ರ ಗೀತ ನೃತ್ಯ

. ಕರ್ನಾಟಕ ಶಾಸ್ತ್ರೀಯ ಸಂಗೀತ

. ಹಿಂದೂಸ್ತಾನಿ ಸಂಗೀತ

. ಸುಗಮ ಸಂಗೀತ

. ಚಿತ್ರಕಲೆ

. ವಾದ್ಯ ಸಂಗೀತ (ಡ್ರಂಸ್, ಕೀಬೋರ್ಡ್, ಹಾರ್ಮೋನಿಯಂ, ವೀಣೆ, ವಾಯೋಲಿನ್, ತಬಲ, ಮೃದಂಗ, ಗಿಟಾರ್)

. ಕರಾಟೆ.

೧೦. ಏರೋಬಿಕ್ಸ್

೧೧. ಭಾನುವಾರದ ಅಭಿನಯ ತರಗತಿ

ವಯೋಮಿತಿ -

ಮೇಲ್ಕಂಡ ಎಲ್ಲ ತರಬೇತಿಗಳಿಗೆ ೫ ವರ್ಷ ಮೇಲ್ಪಟ್ಟ ವಯೋಮಿತಿ ಇರುವ ಮಕ್ಕಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಗರಿಷ್ಠ ವಯೋಮಿತಿ ಎಂಬುದಿಲ್ಲ. ಯಾರೇ ಕಲಾಸಕ್ತರು ಯಾವುದೇ ತರಬೇತಿಗೆ ಅರ್ಹರಾಗಿರುತ್ತಾರೆ.

 

ಗುರುವೃಂದ

ಸಂಗೀತಾಭ್ಯಾಸಗುರುವಿಲ್ಲದೆ ಯಾವುದೇ ವಿದ್ಯೆ ಕಲಿಯಲು ಸಾಧ್ಯವಿಲ್ಲ. ಉತ್ತಮ ಗುರುವಿನಿಂದ ಮಾತ್ರವೇ ಉತ್ತಮ ಶಿಷ್ಯ ರೂಪುಗೊಳ್ಳಲು ಸಾಧ್ಯ. ರಂಗಾಭರಣ ಕಲಾಕೇಂದ್ರದಲ್ಲಿ ನುರಿತ, ಪರಿಣತ ಗುರುಗಳು ತರಬೇತಿ ನೀಡುತ್ತಾರೆ. ಹೀಗಾಗೇ ಶಾಲೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದ ಅಧಿಕೃತ ಪರೀಕ್ಷಾ ಪ್ರಾಧಿಕಾರಗಳು ನಡೆಸುವ ಪರೀಕ್ಷೆಗಳಲ್ಲಿ ಉತ್ತಮ ಸ್ಥಾನ ಪಡೆದು ಉತ್ತೀರ್ಣರಾಗುತ್ತಿದ್ದಾರೆ.

 

ರಂಗಾಭರಣ ಪತ್ರಿಕೆ....

ರಂಗಾಭರಣ ರಂಗ ಚಟುವಟಿಕೆ, ರಂಗ ಮಂದಿರ ಮಾಹಿತಿ, ರಂಗ ಪ್ರಯೋಗ ಮಾಹಿತಿ ಸಂಗ್ರಹಿಸಿ ಪ್ರಚಾರ ಮಾಡುವ ಸಲುವಾಗಿ ರಂಗಾಭರಣ ಪತ್ರಿಕೆಯನ್ನೂ ಆರಂಭಿಸಿದೆ. ವರ್ಷದ ಉದ್ದಕ್ಕೂ ನಡೆಯುವ ಸಂಗೀತ, ನೃತ್ಯ ತರಬೇತಿಗಳ ವಿವರ, ಚಿತ್ರಕಲಾಸ್ಪರ್ಧೆ, ನಾಟಕ, ಜಾನಪದ ಕಲೆಗಳು, ನೃತ್ಯ, ಸಿನಿಮಾ ಹಾಗೂ ಸಾಹಿತ್ಯಿಕ ಶಿಬಿರಗಳ ವಿವರ, ರಂಗಭೂಮಿಯಲ್ಲಿ ಸಾಹಿತ್ಯ ವಲಯಗಳಲ್ಲಿ, ಕಲಾಕೂಟಗಳಲ್ಲಿ, ಸರ್ಕಾರಿ ಅಕಾಡಮಿಗಳಲ್ಲಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ಒದಗಿಸಲು ರಂಗಾಭರಣ ಪತ್ರಿಕೆ ಸಹಕಾರಿಯಾಗಿದೆ. ಸಿನಿಮಾ, ರಾಜಕೀಯ, ಕ್ರೀಡೆ, ಜನಪದ, ಕಲೆ, ಜ್ಞಾನ, ವಿಜ್ಞಾನ, ರಂಗಭೂಮಿ, ಉದಯೋನ್ಮಖ ಕಲಾವಿದರ, ಸಾಹಿತಿಗಳ ಕ್ರೀಡಾಪಟುಗಳ ಹಾಗೂ ಸಮಾಜ ಸೇವಕರ, ಚಿತ್ರಕಲಾವಿದರ ಪರಿಚಯಾತ್ಮಕ ಲೇಖಗಳನ್ನು ಈ ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತಿದೆ. ದೇಶ ವಿದೇಶ ಹೀಗೆ ಸಮಗ್ರ, ಸಚಿತ್ರ ಲೇಖನಗಳಿಂದ ಶ್ರೀಮಂತವಾದ ರಂಗಾಭರಣ ಪತ್ರಿಕೆ ಉತ್ತಮ ಅಭಿವ್ಯಕ್ತಿ ಮಾಧ್ಯಮವಾಗಿದೆ. ಪ್ರತಿ ತಿಂಗಳೂ ತಪ್ಪದೆ ಹೊರಬರುವ ಪತ್ರಿಕೆಗೆ ೨೦೦ಕ್ಕೂ ಹೆಚ್ಚು ಚಂದಾದಾರರಿದ್ದಾರೆ.

 

ರಾಗಾಭರಣ ಸುಗಮ ಸಂಗೀತ ತಂಡ

ರಂಗಾಭರಣ ಕೇವಲ ಕಲಾ ತರಬೇತಿಗಷ್ಟೇ ತನ್ನನ್ನು ಸೀಮಿತಗೊಳಿಸಿಕೊಂಡಿಲ್ಲ. ಕಲೆಯನ್ನು ಮನೆ - ಮನಕ್ಕೆ ತಲುಪಿಸುವ ಕಾರ್ಯವನ್ನೂ ಮಾಡುತ್ತಿದೆ. ಶ್ರೀಮಂತವಾಗಿರುವ ಕನ್ನಡ ಸಾಹಿತ್ಯ ಹಾಗೂ ಜನಪದ ಸಾಹಿತ್ಯವನ್ನು ಜನಪ್ರಿಯಗೊಳಿಸಲು ರಂಗಾಭರಣವು ರಾಗಾಭರಣ ಎಂಬ ಸುಗಮ ಸಂಗೀತ ತಂಡವನ್ನೂ ಹುಟ್ಟುಹಾಕಿದೆ.

ಈ ತಂಡ ರಾಜ್ಯದ ವಿವಿಧ ಸ್ಥಳಗಳಲ್ಲಿ ಗಾಯನ ಪ್ರದರ್ಶನ ನೀಡುತ್ತಾ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

 

ರಾಗ ರಿದಮ್ಸ್ ವಾದ್ಯವೃಂದ

ರಂಗಾಭರಣದ ಮತ್ತೊಂದು ಜನಪ್ರಿಯ ಸಂಸ್ಥೆ. ರಾಗ ರಿದಮ್ಸ್ ವಾದ್ಯವೃಂದ. ನವೀನ ಶೈಲಿಯ ಚಲನಚಿತ್ರ ಗೀತೆಗಳ ಗಾಯನ ಹಾಗೂ ನೃತ್ಯಗಳ ಸಂಗಮ ಇದರ ವೈಶಿಷ್ಟ್ಯ. ಅತ್ಯಾಧುನಿಕ ವಾದ್ಯಗಳು, ಹಾಸ್ಯಮಯ ಹಾಗೂ ಸುಲಲಿತ ನಿರೂಪಣೆಯಿಂದ ಎಲ್ಲಕ್ಕಿಂತ ಮಿಗಿಲಾಗಿ ಸುಶ್ರಾವ್ಯ ಗಾಯನದ ಮೂಲಕ ರಾಗರಿದಮ್ಸ್ ವಾದ್ಯತಂಡ ಕಲಾರಸಿಕರ ಮನಸೆಳೆದಿದೆ.

ಭಾನುವಾರದ ಅಭಿನಯ ಶಾಲೆ

ಮಾಸ್ಟರ್ ಹಿರಣ್ಣಯ್ಯ ಅವರಿಂದ ಭಾನುವಾರದ ಅಭಿನಯ ತರಗತಿ ಉದ್ಘಾಟನೆರಂಗಾಭರಣ ಅಭಿನಯಕಲೆಯಲ್ಲಿ ಆಸಕ್ತಿ ಇರುವವರಿಗೋಸ್ಕರವೇ ೨ ವರ್ಷಗಳ ಡಿಪ್ಲೊಮಾ ತರಗತಿ ಆರಂಭಿಸಲು ಉದ್ದೇಶಿದೆ. ಈ ೨೦೦೮-೦೯ನೇ ಸಾಲಿನಿಂದ ಭಾನುವಾರದ ಅಭಿನಯ ತರಬೇತಿ ಕೋರ್ಸ್ ಅನ್ನು ಆರಂಭಿಸಲಾಗಿದ್ದು, ಖ್ಯಾತ ಚಲನಚಿತ್ರ ನಟ ಹಾಗೂ ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಈ ತರಗತಿಗಳನ್ನು ಉದ್ಘಾಟಿಸಿ, ಶುಭಕೋರಿದ್ದಾರೆ. ಇಲ್ಲಿ ತರಬೇತಿ ಹೊಂದಿದ ಯುವ ನಟರು ನಾಡಿನಾದ್ಯಂತ ತಿರುಗಾಟದ ಮೂಲಕ ರಂಗ ಜಾಗೃತಿ ಮೂಡಿಸುತ್ತಿದ್ದಾರೆ.

ಈ ತರಗತಿಗಳಿಗೆ ಸೇರಲಿಚ್ಛಿಸುವವರಿಗೆ ಯಾವುದೇ ವಯಸ್ಸಿನ ಅಥವಾ ವಿದ್ಯಾರ್ಹತೆಯ ಅಗತ್ಯವಿರುವುದಿಲ್ಲ. ಕೇವಲ ಆಸಕ್ತಿ ಇದ್ದರಷ್ಟೇ ಸಾಕು.

ಇಂಥ ಆಸಕ್ತರಿಗೆ ನುರಿತ ಕಲಾವಿದರು, ನಿರ್ದೇಶಕರು, ಖ್ಯಾತ ನಟರು, ಚಿತ್ರರಂಗದ ಹಿರಿಯ ತಂತ್ರಜ್ಞರು ತರಬೇತಿ ನೀಡಿ ಕಲಾವಿದರಲ್ಲಿ ವೃತ್ತಿ ನೈಪುಣ್ಯ ಹೆಚ್ಚಿಸುತ್ತಿದ್ದಾರೆ.

 

ನಮ್ಮ ಬೋಧಕ ವರ್ಗ

ಶ್ರೀಮತಿ ಲಕ್ಷ್ಮೀ ಚಂದ್ರಶೇಖರ್ - ಶಾಸ್ತ್ರೀಯ ಸಂಗೀತ, ವೀಣೆ, ವಯೋಲಿನ್.

ಶ್ರೀ. ಎಸ್. ಲಕ್ಷ್ಮೀಕಾಂತ್ - ಚಲನಚಿತ್ರ ಗೀತ ನೃತ್ಯ, ಪಾಶ್ಚಾತ್ಯ ನೃತ್ಯ.

ಶ್ರೀಮತಿ ಇಂದ್ರಾಣಿ - ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ.

ಶ್ರೀ ಸಂತೋಷ್ ಹಾಗೂ ಶ್ರೀ ತ್ಯಾಗರಾಜ್ - ಭರತನಾಟ್ಯ

ಶ್ರೀಮತಿ ಪದ್ಮಪ್ರಿಯಾ - ಕೂಚುಪುಡಿ ನೃತ್ಯ

ಶ್ರೀ ಸ್ಯಾಂ, ಪಾಲ್ ವಿಲ್ಸನ್ - ಗಿಟಾರ್

ಶ್ರೀ ಜೆ. ಜಾನ್ ಸ್ಯಾಮ್ಯುಯಲ್ - ಕೀಬೋರ್ಡ್

ಶ್ರೀ ರೆನ್ಸಿ ವೆಂಕಟೇಶ್ ಬಿ.ಕೆ. - ಕರಾಟೆ

ಶ್ರೀ ಶ್ಯಾಂಸುಂದರ್ - ಚಿತ್ರಕಲೆ - ಜಲವರ್ಣ ಚಿತ್ರ, ತೈಲವರ್ಣಚಿತ್ರ.

ಶ್ರೀ ಅಜೀಂಮುದ್ದೀನ್ - ಥಾಯ್ ಫಿಟ್‌ನೆಸ್.

 

ಆಡಳಿತ ವರ್ಗ

ಕುಮಾರಿ ಕವಿತಾ,

ಶ್ರೀ ರಘುನಾಥ್ ಟಿ.

ಶ್ರೀಮತಿ ಪಾರ್ವತಮ್ಮ

ಶ್ರೀಮತಿ ಅಂಬಿಕಾ

ಅರ್ಚಕರು - ಶ್ರೀ ಸತ್ಯನಾರಾಯಣ

 

ರಂಗಾಭರಣ ಕಲಾಕೇಂದ್ರದ ಸ್ಥಾಪಕ ಅಧ್ಯಕ್ಷರು - ದಿವಂಗತ ಶ್ರೀ. .ಪಿ. ಶಂಕರ್.
ಶಂಕರ್ ಅವರ ಪರಿಚಯ
-

ಪೋಷಕರಿಲ್ಲದೆ ಯಾವುದೇ ಕಲೆ ಬೆಳೆಯಲು, ಬೆಳಗಲು ಸಾಧ್ಯವಿಲ್ಲ. ಹಿಂದೆ ಕಲಾವಿದರಿಗೆ, ಕಲಾ ಸಂಸ್ಥೆಗಳಿಗೆ ರಾಜಾಶ್ರಯ ದೊರಕುತ್ತಿತ್ತು. ಇಂದು ಆ ಕೆಲಸವನ್ನು ಸರ್ಕಾರ ಮಾಡಬೇಕು. ಅದೇಕೋ ಕೆಲವು ಅರ್ಹ ಹಾಗೂ ನಿಸ್ವಾರ್ಥ ಕಲಾ ಸಂಸ್ಥೆಗಳಿಗೆ ಸರ್ಕಾರದ ಸೌಲಭ್ಯಗಳು ದೊರಕುತ್ತಿಲ್ಲ ಎಂಬುದು ನೋವಿನ ಸಂಗತಿ. ರಂಗಾಭರಣ ಕಲಾಕೇಂದ್ರಕ್ಕೂ ಸರ್ಕಾರದಿಂದ ಹೆಚ್ಚಿನ ಸೌಲಭ್ಯ, ಸವಲತ್ತು ದೊರಕಿಲ್ಲ. ಆದರೆ, ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ದಿವಂಗತ ಶ್ರೀ ಎ.ಪಿ. ಶಂಕರ್ ಮತ್ತು ಹಾಲಿ ಅಧ್ಯಕ್ಷರಾದ ಲಕ್ಷ್ಮಣ್ ಅವರ ಸಹಕಾರದಿಂದ ಸಂಸ್ಥೆ ಒಂದೂವರೆ ದಶಕದಿಂದ ಯಾವುದೇ ಸಂಕಷ್ಟಕ್ಕೆ ಸಿಲುಕದೆ ನಿರಂತರವಾಗಿ ಕಲಾ ಸೇವೆ ಮಾಡುತ್ತಾ ಬಂದಿದೆ.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶಂಕರ್ ಅವರು ಮೂಲತಃ ಎಚ್..ಎಲ್. ಕಾರ್ಖಾನೆಯ ಉದ್ಯೋಗಿಯಾಗಿ ನಿವೃತ್ತರಾದವರು. ಕಲಾಪೋಷಕರಾಗಿದ್ದ ಅವರು, ಕಲಾವಿದರಿಗೆ ಪ್ರೋತ್ಸಾಹ ನೀಡಲೆಂದೇ ಜನ್ಮತಳೆದ ರಂಗಾಭರಣ ಕಲಾಕೇಂದ್ರದ ಸ್ಥಾಪಕ ಅಧ್ಯಕ್ಷರಾಗಿ ನೀಡಿದ ಕೊಡುಗೆ ಅನುಪಮ. ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಅಗತ್ಯವಾಗಿ  ಬೇಕಾಗಿದ್ದ ಸ್ಥಳದ ಕೊರತೆಯನ್ನು ನೀಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆರ್.ಟಿ. ನಗರದಲ್ಲಿ ಸುಸಜ್ಜಿತವಾದ ಕಲಾಕೇಂದ್ರ ನಿರ್ಮಿಸಲು ಧನ ಸಹಾಯ ಮಾಡಿದ ಅವರ ಸೇವೆ ಚಿರಸ್ಮರಣೀಯ. ಇಂದಿಗೂ ಈ ಕೇಂದ್ರ ವರ್ಷದ ೩೬೫ ದಿನವೂ ಕಲಾ ಚಟುವಟಿಕೆಯಲ್ಲಿ ನಿರತವಾಗಿದೆ. ಇಂದು ಶಂಕರ್ ಅವರು ನಮ್ಮೊಂದಿಗಿಲ್ಲ. ಆದರೆ, ಅವರು ನೀಡಿದ ಮಾರ್ಗದರ್ಶನ, ಅವರು ಬಿಟ್ಟು ಹೋದ ಹೆಜ್ಜೆ ಗುರುತುಗಳು ನಮಗೆ ದಾರಿದೀಪವಾಗಿದೆ. ನಿತ್ಯವೂ ಶಂಕರ್ ಅವರನ್ನು ಸ್ಮರಿಸಿ ದೀಪ  ಹಚ್ಚುವೆವು ನಾವು.  

ಪ್ರಸ್ತಾವನೆ..... 

ಕರ್ನಾಟಕ ಕಲೆಗಳ ತವರು. ಹುಟ್ಟು ಕಲಾವಿದರಾದ ಕನ್ನಡಿಗರಲ್ಲಿ ಕಲೆ ಅಂತರ್ಗತವಾಗಿದೆ. ಈ ಸುಪ್ತ ಕಲೆಯನ್ನು ಪ್ರಕಾಶಕ್ಕೆ ತರುವ ನಿಟ್ಟಿನಲ್ಲಿ ಹಲವು ಸಂಸ್ಥೆಗಳು ಶ್ರಮಿಸುತ್ತಿವೆ. ಅಂಥ ಸಂಸ್ಥೆಗಳಲ್ಲಿ ರಂಗಾಭರಣ ಕಲಾಕೇಂದ್ರವೂ ಒಂದು. ಕಳೆದ ಮೂರು  ದಶಕದಿಂದ ಕಲೆಯ ಪುನರುತ್ಥಾನಕ್ಕೆ ದುಡಿಯುತ್ತಿರುವ ರಂಗಾಭರಣ ಕಲಾಕೇಂದ್ರ. ಬೆಂಗಳೂರಿನ ಪ್ರತಿಷ್ಠಿತ  ಬಡಾವಣೆ ಆರ್.ಟಿ. ನಗರ ಹಾಗೂ ಸಂಜಯನಗರಗಳಲ್ಲಿ ಪ್ರದರ್ಶಕ ಹಾಗೂ ಲಲಿತ ಕಲಾಶಾಲೆಯನ್ನು ನಡೆಸುತ್ತಿದೆ. ರಂಗಾಭರಣ ಸಾವಿರಾರು ವಿದ್ಯಾರ್ಥಿಗಳ ಪ್ರತಿಭೆಯ ಪ್ರಕಾಶಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಹೆಮ್ಮರವಾಗಿ ಬೆಳೆದ ಸಂಸ್ಥೆಯ ಮೂಲ ಬೇರು ದೊಡ್ಡಬಳ್ಳಾಪುರದಲ್ಲಿ ಸುಭದ್ರವಾಗಿದೆ. ಈಗ ಬಿಳಿಲುಗಳನ್ನೂ ಬಿಟ್ಟು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ.

ಕರ್ನಾಟಕ ಸರ್ಕಾರದಿಂದ ಮಾನ್ಯತೆ  ಪಡೆದ  ಮತ್ತು  ನೊಂದಾಯಿತವಾದ  ರಂಗಾಭರಣ ಕಲಾಕೇಂದ್ರ  ಪ್ರದರ್ಶಕ ಹಾಗೂ ಚಿತ್ರಕಲಾಶಾಲೆಯಾಗಿದ್ದು, ಅಭಿನಯಕಲೆ, ರಂಗಕಲೆ, ತಾಂತ್ರಿಕ ನೈಪುಣ್ಯತೆ, ಗಾಯನ, ವಾದ್ಯ ಸಂಗೀತವೇ  ಮೊದಲಾದ  ಕ್ಷೇತ್ರಗಳಲ್ಲಿ ತರಬೇತಿ  ನೀಡುತ್ತಿದೆ.

ಅಭಿನಯ ಕಲೆಯನ್ನು ಜನಪ್ರಿಯಗೊಳಿಸಲು ರಂಗಾಭರಣ ಕಲಾತಂಡಗಳಿಂದ ರಾಜ್ಯಾದ್ಯಂತ ತಿರುಗಾಟ - ಬೀದಿ ನಾಟಕ ಪ್ರದರ್ಶನವನ್ನೂ ನೀಡುತ್ತಿದೆ.

ಪ್ರಸ್ತುತ ರಂಗಾಭರಣದ ಕಾರ್ಯದರ್ಶಿಯಾಗಿರುವ ಎ.ಎಸ್. ಮಹೇಶ್ವರಿ ಅವರು ರಂಗಾಭರಣದ ಉದ್ದೇಶಗಳನ್ನು ಈಡೇರಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಕಾರ್ಯದಲ್ಲಿ ಇತರ ಪದಾಧಿಕಾರಿಗಳು ಹಾಗೂ ರಂಗಮಿತ್ರರು ಒತ್ತಾಸೆಯಾಗಿ ನಿಂತಿದ್ದಾರೆ.

ಬೆಂಗಳೂರಿನ ಆರ್.ಟಿ. ನಗರ ಬಡಾವಣೆಯಲ್ಲಿ ರಂಗಾಭರಣ ಕಲಾಸಂಸ್ಥೆ ಒಂದೂವರೆ ದಶಕದಿಂದ ಕಲಾಸೇವೆ ಮಾಡುತ್ತಲಿದೆ. ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಈ ಸಂಸ್ಥೆ ದೃಶ್ಯ, ಶ್ರವ್ಯ, ಜನಪದ ಹಾಗೂ ಪ್ರದರ್ಶಕ ಕಲೆಗಳಲ್ಲಿ ತರಬೇತಿ ನೀಡುತ್ತಿದೆ. ಸುಸಜ್ಜಿತ ರಂಗಮಂದಿರ ಹಾಗೂ ಉಪಕರಗಳನ್ನು ಹೊಂದಿದ ರಂಗಾಭರಣ ಹಲವಾರು ಕಲಾವಿದರನ್ನು ರಂಗಭೂಮಿಗೆ ಪರಿಚಯಿಸಿದೆ. ಇಲ್ಲಿ ಕಲಿತ ಹಲವರು ಚಲನಚಿತ್ರರಂಗದಲ್ಲೂ ಮಿಂಚಿದ್ದಾರೆ. ಮಿಂಚುತ್ತಿದ್ದಾರೆ. ವಿವಿಧ ಕಲೆಗಳಲ್ಲಿ ನೈಪುಣ್ಯತೆ ಹೊಂದಿದ ಹಲವಾಮ ಕಲಾವಿದರೆ ರಂಗಾಭರಣದ ಆಸ್ತಿ. ಸ್ವಂತ ಸಂಪನ್ಮೂಲದಿಂದ ಬೆಳೆದ ರಂಗಾಭರಣ ಸಂಗೀತಾಸಕ್ತರಿಗಾಗಿ ರಾಗಾಭರಣ ಎಂಬ ಸಂಗೀತ ವಿಭಾಗ ಹೊಂದಿದ್ದು ಹಲವಾರು ಹಿನ್ನೆಲೆ ಗಾಯಕರನ್ನು, ಸಂಗೀತಗಾರರನ್ನು ಹಾಗೂ ಸಂಗೀತ ನಿರ್ದೇಶಕರನ್ನು ಸಂಗೀತ ಲೋಕಕ್ಕೆ ಪರಿಚಯಿಸಿದೆ.

ರಂಗಾಭರಣವು ತನ್ನದೇ ಆದ ಸುಸಜ್ಜಿತ ಚಂದ್ರಪ್ರಿಯ ರಂಗಮಂದಿರವಮ್ನ ಕೆ..ಬಿ. ಬಡಾವಣೆ, ಸಂಜಯನಗರದಲ್ಲಿ ಹೊಂದಿದ್ದು ಇನ್ನೂರು ಆಸನಗಳ ವ್ಯವಸ್ಥೆ ಹೊಂದಿದೆ. ಇಲ್ಲಿ ಸಂಗೀತ  ಪ್ರದರ್ಶನ, ನೃತ್ಯ  ಪ್ರದರ್ಶನ ಹಾಗೂ ರಂಗ ಪ್ರದರ್ಶನ ನೀಡಲು ಸಕಲ ಅನುಕೂಲತೆ ಇದೆ. ಈ ಭಾಗದ  ಪ್ರೇಕ್ಷಕರಿಗೆ ಕಲಾವಿದರಿಗೆ ಉತ್ತೇಜನ ನೀಡಿ, ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಈ ರಂಗ ಮಂದಿರ ನಿರ್ಮಾಣವಾಗಿದೆ. ಈ ರಂಗಮಂದಿರದ ಕಟ್ಟಡವನ್ನು ಶ್ರೀ ಭವಾನಿ ಟ್ರಸ್ಟ್, ಬೆಂಗಳೂರು ಇವರು ಪ್ರಾಯೋಜಿಸಿದ್ದಾರೆ.

ರಂಗಾಭರಣ ಪ್ರಶಸ್ತಿ

ಪ್ರಶಸ್ತಿ ಪ್ರದಾನಕಲೆಯಲ್ಲಿ ಆಸಕ್ತಿ ಹೊಂದಿದವರಿಗೆ ತರಬೇತಿ ನೀಡುವುದಲ್ಲದೆ, ಕಲೆಯಲ್ಲಿ ಸಿದ್ಧಿಪಡೆದವರಿಗೆ ಸನ್ಮಾನಿಸುವ ಅಪೂರ್ವ ಪದ್ಧತಿಯನ್ನು ರಂಗಾಭರಣ ರೂಢಿಸಿಕೊಂಡಿದ್ದು, ಈವರೆಗೆ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಾದ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್, ಕೆ.ವಿ. ಕೃಷ್ಣಯ್ಯ, ಬಿ.ಎಲ್.ಎಸ್. ಮೂರ್ತಿ, ವಾಸುದೇವಮೂರ್ತಿ, ವೇಮಗಲ್ ನಾರಾಯಣ ಸ್ವಾಮಿ, ನ್ಯಾಯಮೂರ್ತಿ ಶಿವಲಿಂಗಯ್ಯ, ಎಂ.ವಿ.ಸಿ. ಹನುಮಂತಯ್ಯ ಸೇರಿದಂತೆ ೧೫೦ಕ್ಕೂ  ಹೆಚ್ಚು ಕಲಾವಿದರನ್ನು ಸನ್ಮಾನಿಸಿ ಗೌರವಿಸಿ ಅವರ ಕಲೆಗೆ ಉತ್ತೇಜನ ನೀಡಿದೆ. ಜೊತೆಯಲ್ಲಿ ಪ್ರತಿವರ್ಷ ಕಲಾಭರಣ ಪ್ರಶಸ್ತಿಯನ್ನು ಅರ್ಹ ಕಲಾಕಾರಿಗೆ ನೀಡಲಾಗುತ್ತಿದೆ.

ರಂಗಾಭರಣ ಕೇವಲ ತರಬೇತಿ ಕೇಂದ್ರವಾಗಿರದೆ, ಕಲಾವಿದರ ಪ್ರತಿಭಾ ಪ್ರದರ್ಶನದ ತಾಣವೂ ಆಗಿದೆ. ಇಲ್ಲಿ ತರಬೇತಿ ಹೊಂದಿದ ಹಲವಾರು ಕಲಾವಿದರು ರಾಜ್ಯದ ವಿವಿಧೆಡೆಯಲ್ಲಷ್ಟೇ ಅಲ್ಲ ಹೊರ ರಾಜ್ಯಗಳಲ್ಲೂ ಪ್ರದರ್ಶನ ನೀಡಿದ್ದಾರೆ. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ರಾಗಾಭರಣ ಸಂಗೀತ ವಿಭಾಗ ರಾಜ್ಯದ ಎಲ್ಲೆಡೆಯೂ ಸಂಗೀತ ಸಂಜೆಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿ ಜನಮನ್ನಣೆಗೆ ಪಾತ್ರವಾಗಿದೆ. ಕರ್ನಾಟಕ ಸರಕಾರದ ಮಾನ್ಯತೆ ಪಡೆದ ಒಂದು ವರ್ಷದ ನಾಟಕ ಡಿಪ್ಲೊಮಾ ಕೋರ್ಸ್ ಅನ್ನು ರಂಗಾಭರಣ ಆರಂಭಿಸಲು ಉದ್ದೇಶಿಸಿದೆ. ಎಸ್ಸೆಸ್ಸೆಲ್ಸಿ ಪಾಸಾದ ಹಾಗೂ  ರಂಗಕಲೆಯಲ್ಲಿ ಆಸಕ್ತಿಹೊಂದಿದ  ಯಾವುದೇ ವಿದ್ಯಾರ್ಥಿ ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶ ಪಡೆಯಬಹುದಾಗಿದೆ. ೨೦೦೮ರ ಫೆಬ್ರವರಿ ೯ರಂದು ಆರಂಭವಾದ ಅಭಿನಯ ತರಗತಿಗಳಿಗೆ ಉತ್ತಮ ಸ್ಪಂದನವೂ ದೊರೆತಿದೆ.

 

ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ್ ಅವರ ಪರಿಚಯ

ವೃತ್ತಿಯಲ್ಲಿ ಎಂಜಿನಿಯರ್ ಆದ ಶ್ರೀ ಲಕ್ಷ್ಮಣ್ ಅವರು ಪ್ರವೃತ್ತಿಯಲ್ಲಿ ಕಲಾ ಪೋಷಕರು. ಅನುಪಮ ಸ್ನೇಹಜೀವಿ. ಕಟ್ಟಡ ನಿರ್ಮಾಣ ಗುತ್ತಿಗೆದಾರರಾದ ಲಕ್ಷ್ಮಣ್ ಕಟ್ಟುವ ಮನೆಗಳು ಕೇವಲ ಕಟ್ಟಡವಾಗಿರದೆ ಮನಸ್ಸಿಗೆ ನೆಮ್ಮದಿ ನೀಡುವ ತಾಣಗಳಾಗಿವೆ. ಸಮುಚ್ಚಯಗಳು ಪ್ರೀತಿ, ವಿಶ್ವಾಸದ ದೇಗುಲಗಳಾಗಿವೆ. ಒಳ್ಳೆಯ ಮನಸ್ಸಿನವರು ಮಾಡುವ ಎಲ್ಲ ಕಾರ್ಯಗಳೂ ಉತ್ತಮವಾಗೇ ಇರುತ್ತವೆ ಎಂಬುದಕ್ಕೆ ಲಕ್ಷ್ಮಣ್ ಅವರೇ ಜ್ವಲಂತ ಉದಾಹರಣೆ. ವಿದ್ಯಾರ್ಥಿ ದೆಶೆಯಿಂದಲೇ ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಅಪಾರ ಒಲವು ಮೂಡಿಸಿಕೊಂಡಿದ್ದ ಲಕ್ಷ್ಮಣ್ ಅವರು ಸ್ವತಃ ಕಲಾವಿದರಲ್ಲದಿದ್ದರೂ, ಕಲೆಗೆ ಉತ್ತೇಜನ ನೀಡುತ್ತಾ ಬಂದವರು. ಇವರು ತಮ್ಮ ಮಿತ್ರ ಎಂ.ಎಸ್. ಗುಣಶೀಲನ್ ಜೊತೆಗೂಡಿ ರಂಗಾಭರಣದ ಉನ್ನತಿಗೆ ಶ್ರಮಿಸುತ್ತಿದ್ದಾರೆ.

ಕಲಾಸೇವೆಯ ಜೊತೆಗೆ ಲಕ್ಷ್ಮಣ್ ಅವರು ಬಡ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರನೀಡುತ್ತಿರುವುದೇ ಅಲ್ಲದೆ, ನೂರಾರು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನೂ ಒದಗಿಸುತ್ತಿದ್ದಾರೆ. ಹಲವು ಬಡ, ಅನಾಥ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.

ಏಡ್ಸ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಆಸ್ಪತ್ರೆ ನಿರ್ಮಾಣ, ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಮಾಡಿರುವ ಲಕ್ಷ್ಮಣ್ ಅವರು, ಆರ್ಥಿಕವಾಗಿ ಹಿಂದುಳಿದವರಿಗಾಗಿ ಹಲವು ಸಾಮೂಹಿಕ ವಿವಾಹ ಮಹೋತ್ಸವಗಳನ್ನೂ ಏರ್ಪಡಿಸಿದ್ದಾರೆ. ದಾನಶೀಲರೂ, ಸ್ನೇಹಪರರೂ ಆದ ಲಕ್ಷ್ಮಣ್ ಸರಳ, ಸಜ್ಜನಿಕೆಯ ಸಾಕಾರಮೂರ್ತಿ.

ಇಂಥ ಶಿಖರಪ್ರಾಯ ಸಮಾಜಸೇವಕರು, ಆದರ್ಶಪ್ರಾಯರಾದ ಲಕ್ಷ್ಮಣ್ ಅವರು ರಂಗಾಭರಣ ಕಲಾಕೇಂದ್ರದ ಅಧ್ಯಕ್ಷರಾಗಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ. ಲಕ್ಷ್ಮಣ್ ಅವರು, ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಚಾರಕ್ಕೆ ಬಾರದೆ ಎಲೆ ಮರೆಯ ಕಾಯಿಯಂತೆ ಸಮಾಜ ಸೇವೆಗೆ ತಮ್ಮ ಬದುಕು ಮುಡುಪಾಗಿಟ್ಟಿದ್ದಾರೆ.

ಶ್ರೀ ಲಕ್ಷ್ಮಣ್ ಅವರು, ರಂಗಾಭರಣ ಕಲಾಕೇಂದ್ರದ ಅಧ್ಯಕ್ಷರಾಗಿ ಸಂಜಯನಗರದ ಕೆ..ಬಿ. ಬಡಾವಣೆಯಲ್ಲಿರುವ ರಂಗಾಭರಣಕ್ಕಾಗಿಯೇ ಸುಂದರ ಸುಸಜ್ಜಿತವಾದ ಚಂದ್ರಪ್ರಿಯ ರಂಗಮಂದಿರವನ್ನೂ ನಿರ್ಮಿಸಿಕೊಟ್ಟಿದ್ದಾರೆ. ಈ ರಂಗಮಂದಿರ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಅವರೊಬ್ಬರೇ ಭರಿಸಿದ್ದಾರೆಂದರೆ ಅವರ ದೊಡ್ಡತನ ಹಾಗೂ ಕಲಾಪೋಷಣೆ ಎಂಥದ್ದು ಎಂಬುದು ವೇದ್ಯವಾಗುತ್ತದೆ.

ಪ್ರತಿಯೊಬ್ಬರಲ್ಲೂ ಒಬ್ಬ ಕಲಾವಿದ ಇರುತ್ತಾನೆ. ಆ ಕಲೆಗೆ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ. ಸುಪ್ತ ಪ್ರತಿಭೆಯ ಪ್ರಕಾಶಕ್ಕೆ ಅವಕಾಶ ನೀಡಿ, ಕಗ್ಗಲ್ಲನ್ನು ಸುಂದರ ಮೂರ್ತಿ ಮಾಡಿದ ತೃಪ್ತಿ ತಮಗಾದರೆ ಸಾಕು ಎಂದು ಹೇಳುವ ಲಕ್ಷ್ಮಣ್ ಹಾಗೂ ಅವರಿಗೆ ಅವರ ಧರ್ಮಪತ್ನಿ ಶ್ರೀಮತಿ ಚಂದ್ರಕಲಾ ಅವರು ಒತ್ತಾಸೆಯಾಗಿ ನಿಂತಿದ್ದಾರೆ.

ಹಸನ್ಮುಖಿಗಳೂ, ಸಮಾಜಮುಖಿಗಳೂ ಆದ ಶ್ರೀಲಕ್ಷ್ಮಣ್ ಹಾಗೂ ಚಂದ್ರಕಲಾ ಲಕ್ಷ್ಮಣ್ ಅವರ ಮಾರ್ಗದರ್ಶನದಲ್ಲಿ ರಂಗಾಭರಣ ಕಲಾಕೇಂದ್ರ ಎತ್ತರ ಎತ್ತರ ತಲುಪುವುದರಲ್ಲಿ ಸಂದೇಹವೇ ಇಲ್ಲ.

 

ರಂಗಾಭರಣ ಸಂಸ್ಥಾಪಕ - ಎಂ.ಎಸ್. ಗುಣಶೀಲನ್ ಪರಿಚಯ

ಎಂ.ಎಸ್. ಗುಣಶೀಲನ್ರಂಗಾಭರಣದ ಮೂಲ ಬೇರು ಇರುವುದೇ ದೊಡ್ಡಬಳ್ಳಾಪುರದಲ್ಲಿ. ಈ ಸಂಸ್ಥೆ ಹುಟ್ಟುಹಾಕಿದ ಎಂ.ಎಸ್. ಗುಣಶೀಲನ್ ದೊಡ್ಡಬಳ್ಳಾಪುರದ ಗ್ರಾಮೀಣ ಪ್ರತಿಭೆ. ಜನಪದ, ರಂಗಸಂಘಟನೆಯ ಜೊತೆಯಲ್ಲಿ ರಂಗನಟರಾಗಿ, ನಿರ್ದೇಶಕರಾಗಿ, ಬೆಳಕು, ಪ್ರಸಾದನ, ರಂಗ ಸಜ್ಜಿಕೆಯಲ್ಲಿ ಪರಿಣತಿ ಹೊಂದಿದ ಗುಣಶೀಲನ್ ಅವರು, ಮೊದಲಿಗೆ ದೊಡ್ಡಬಳ್ಳಾಪುರದಲ್ಲಿ ನಟಗಂಗೋತ್ರಿ ಎಂಬ ನಾಟಕ ತಂಡ ಕಟ್ಟಿದರು. ನಾಡಿನಾದ್ಯಂತ ನೂರಾರು ರಂಗಪ್ರಯೋಗ ನಡೆಸಿ ಜನಮೆಚ್ಚುಗೆಗೆ ಪಾತ್ರರಾದರು. ಸಂಘಟನಾ ಕೌಶಲ್ಯವನ್ನು ಮೈಗೂಡಿಸಿಕೊಂಡಿದ್ದ ಗುಣಶೀಲನ್ ಅವರು, ಬೆಂಗಳೂರಿಗೆ ಬಂದು ನೆಲೆಸಿದ ಬಳಿಕ ಆರ್.ಟಿ.ನಗರ ಹಾಗೂ ಸಂಜಯನಗರದಲ್ಲಿ ರಂಗಾಭರಣ ಕಲಾಕೇಂದ್ರದ ತರಬೇತಿ ಶಾಲೆ ಕಟ್ಟಿ, ಸಂಗೀತ, ನೃತ್ಯ, ವಾದ್ಯಸಂಗೀತ, ಅಭಿನಯ, ಚಿತ್ರಕಲೆ ಸೇರಿದಂತೆ ವಿವಿಧ ಕಲಾ ಪ್ರಕಾರಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಉತ್ತರ ಬೆಂಗಳೂರು ಭಾಗದಲ್ಲಿ ಅದರಲ್ಲೂ ಸಂಜಯನಗರ ಪ್ರದೇಶದಲ್ಲಿ ಕಲಾಮಂದಿರಗಳಿಲ್ಲ ಎಂಬ ಕೊರತೆ ನೀಗಲು ಗುಣಶೀಲನ್ ಅವರ  ಕೊಡುಗೆ ಅಪಾರ. ದಾನಿಗಳ ನೆರವಿನಿಂದ ಅವರು ಸಂಜಯನಗರದ ಕೆಇಬಿ ಬಡಾವಣೆಯಲ್ಲಿ ಚಂದ್ರಪ್ರಿಯ ರಂಗಮಂದಿರ ತಲೆಎತ್ತಲು ಕಾರಣೀಭೂತರಾಗಿದ್ದಾರೆ.

ಗುಣಶೀಲನ್ ಅವರು ಕಲಾರಂಗಕ್ಕೆ ನೀಡಿರುವ ಕೊಡುಗೆಯನ್ನು ಗೌರವಿಸಿ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಇವರ ೩೦ ವರ್ಷಗಳ ಕಲಾಸೇವೆಗೆ ಬೆಂಗಳೂರು ನಗರಪಾಲಿಕೆ ಕೊಡಮಾಡುವ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ, ಹಲವು ಸಂಘ ಸಂಸ್ಥೆಗಳ ನಾಗರಿಕ ಪುರಸ್ಕಾರಗಳು ಲಭಿಸಿವೆ. ಬೆಂಗಳೂರು ದೂರದರ್ಶನಕ್ಕಾಗಿ ಗುಣಶೀಲನ್ ಅವರು ನಿರ್ಮಿಸಿದ ವಿಶೇಷ ನೃತ್ಯ ಕಾರ್ಯಕ್ರಮ ರಾಷ್ಟ್ರೀಯ ದೂರದರ್ಶನ ಪ್ರಶಸ್ತಿಗೂ ಭಾಜನವಾಗಿದೆ.

ರಂಗಭೂಮಿಯಲ್ಲಿ ಹಾಸ್ಯನಟರಾಗಿ ಗುರುತಿಸಿಕೊಂಡಿರುವ ಗುಣಶೀಲನ್ ೪೦೦ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರವಹಿದ್ದಾರೆ. ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಇವರ ನಿರ್ದೇಶನದ ಹತ್ತು ಹಲವು ನಾಟಕಗಳು ರಾಜ್ಯ ಪ್ರಶಸ್ತಿಗೂ ಪಾತ್ರವಾಗಿವೆ. ಇವರ ನಿರ್ದೇಶನದ ಬಂಕಾಪುರದ ಬಯಲಾಟ, ಸುಳಿಯಲ್ಲಿ ಸಿಕ್ಕವರು, ನಂಸಂಗಪ್ಪ, ಸಮಯಕ್ಕೊಂದು ಸುಳ್ಳು, ಇದು ಸಮಾಜ, ಜುಗ್ಗಾ ಸ್ವಾಮಿ ಜುಗ್ಗಾ ಮೊದಲಾದ ನಾಟಕಗಳನ್ನು ರಂಗಪ್ರಿಯರು ಇಂದಿಗೂ ಸ್ಮರಿಸುತ್ತಾರೆ.  

ಕಾರ್ಯದರ್ಶಿಯವರ ಲೇಖನಿಯಿಂದ

ನಾಟ್ಯರಂಗಾಭರಣ ಕಲಾಕೇಂದ್ರ ಬೆಂಗಳೂರಿನಲ್ಲಿ ಹೆಮ್ಮರವಾಗಿ ಬೆಳೆದುನಿಂತು ಆಸಕ್ತ ಕಲಾವಿದರಿಗೆ ಮಾರ್ಗದರ್ಶನ ಉತ್ತೇಜನ ತರಬೇತಿ ನೀಡುತ್ತಿದೆ. ಕಳೆದ ೩ ದಶಕಗಳ ಹಿಂದೆ ಜನ್ಮತಳೆದ ರಂಗಾಭರಣ ಕಲಾಕೇಂದ್ರ ಕಳೆದ ಎರಡು ದಶಕಗಳಿಂದ ಬೆಂಗಳೂರು ಮಹಾನಗರದಲ್ಲಿ ಸಾವಿರಾರು ವಿದ್ಯಾರ್ಥಿಗಳ ಪ್ರತಿಭೆಯ ಪ್ರಕಾಶಕ್ಕೆ ಕಾರಣವಾಗಿದೆ. ದೊಡ್ಡಬಳ್ಳಾಪುರದಲ್ಲಿ ತನ್ನ ಮೂಲ ಬೇರು ಹೊಂದಿರುವ ರಂಗಾಭರಣ, ಗ್ರಾಮೀಣ ಹಿನ್ನೆಲೆಯಿಂದ ಗಟ್ಟಿಮುಟ್ಟಾಗಿದೆ. ವರ್ಷವಿಡೀ ಕ್ರಿಯಾಶೀಲವಾಗಿ ಕಲಾಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ರಂಗಾಭರಣದ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಶ್ರೀ..ಪಿ. ಶಂಕರ್ ಅವರು ಆರ್.ಟಿ.ನಗರದಲ್ಲಿ ನಿವೇಶನ ನೀಡಿದ್ದಲ್ಲದೆ, ಧನಸಹಾಯ ಮಾಡಿ ಕೊಠಡಿಯೊಂದನ್ನೂ ಕಟ್ಟಿಸಿಕೊಟ್ಟರು. ಈ ನೆಲೆಯಿಂದ ಪ್ರಗತಿ ಕಂಡ ರಂಗಾಭರಣ ಭರತನಾಟ್ಯ, ಕೂಚುಪುಡಿ ನೃತ್ಯ, ಚಲನಚಿತ್ರ ಗೀತ ನೃತ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ಚಿತ್ರಕಲೆ, ವಾದ್ಯ ಸಂಗೀತ -ಡ್ರಂಸ್, ಕೀಬೋರ್ಡ್, ಹಾರ್ಮೋನಿಯಂ, ವೀಣೆ, ವಾಯೋಲಿನ್, ತಬಲ, ಮೃದಂಗ, ಗಿಟಾರ್, ಕರಾಟೆಏರೋಬಿಕ್ಸ್

ಥಾಯ್ ಫಿಟ್‌ನೆಸ್, ಭಾನುವಾರದ ಅಭಿನಯ ತರಗತಿ ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ತರಬೇತಿ ನೀಡುತ್ತಿದೆ. ರಂಗಾಭರಣ ಬೆಳೆದಂತೆ ಅದರ ವಲಯವೂ ವಿಸ್ತಾರವಾಗಿದೆ. ಬೆಂಗಳೂರಿನ ಆರ್.ಟಿ. ನಗರಕ್ಕಷ್ಟೇ ಸೀಮಿತವಾಗಿದ್ದ ರಂಗಾಭರಣ ಈಗ ಸಂಜಯನಗರದ ಕೆ..ಬಿ. ಬಡಾವಣೆಯಲ್ಲಿ ಸ್ವಂತ ಕಟ್ಟಡವನ್ನು ಹೊಂದಿದ್ದು ಈ ಪ್ರದೇಶದಲ್ಲೂ ಕಲಾಸೇವೆ ಮಾಡುತ್ತಿದೆ. ದಾನಿಗಳೂ ಹಾಗೂ ರಂಗಾಭರಣದ ಅಧ್ಯಕ್ಷರೂ  ಆದ ಶ್ರೀ ಲಕ್ಷ್ಮಣ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಚಂದ್ರಕಲಾ ಅವರ ಆರ್ಥಿಕ ನೆರವಿನಿಂದ ಸಂಜಯನಗರದಲ್ಲಿ ಚಂದ್ರಪ್ರಿಯಾ ಕಲಾಮಂದಿರ ನಿರ್ಮಿಸುವ ಮೂಲಕ ಬೆಂಗಳೂರಿನ ಉತ್ತರ ಭಾಗದಲ್ಲಿನ ರಂಗಮಂದಿರದ ಕೊರತೆಯನ್ನೂ ನೀಗಿಸಿದೆ.

ರಂಗಾಭರಣದ ಕಲಾಸೇವೆಗೆ ಒತ್ತಾಸೆಯಾಗಿ ನಿಂತ ಮಹನೀಯರಾದ ಶ್ರೀಯುತರಾದ ಸರ್ವಶ್ರೀ ಲಕ್ಷ್ಮಣ್, ಎಂ.ವಿ. ಹನುಮಂತಯ್ಯ, ಶ್ರೀನಿವಾಸ ರೆಡ್ಡಿ, ಕೆ.ವಿ.ಆರ್. ಠ್ಯಾಗೂರ್, ಶಿವಲಿಂಗಯ್ಯ ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಮ್ಮ ಏಳಿಗೆಗೆ ಕಾರಣರಾದ ಎಲ್ಲರಿಗೂ ರಂಗಾಭರಣ ಋಣಿಯಾಗಿದೆ.

ರಂಗಾಭರಣಕ್ಕೆ ಚೈತನ್ಯದ ಚಿಲುಮೆಯಾಗಿ, ರಂಗಾಭರಣದ ಸಕಲ ಏಳಿಗೆಯ ಹಿಂದಿರುವ ಸ್ಫೂರ್ತಿಯ ಸೆಲೆ ಎಂ.ಎಸ್. ಗುಣಶೀಲನ್ ಸಂಸ್ಥೆಯ ಏಳಿಗೆಗೆ ಹಗಲಿರುಳು ದುಡಿಯುತ್ತಿದ್ದಾರೆ. ಎಲ್ಲರಿಗೂ ಕೃತಜ್ಞತೆ ಅರ್ಪಿಸುವುದು ನನ್ನ ಕರ್ತವ್ಯವಾಗಿದೆ.

ಕಲಾಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ರಂಗಾಭರಣಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ. ನಿಮ್ಮೆಲ್ಲರ ಸಹಕಾರವೇ ನಮಗೆ ಶ್ರೀರಕ್ಷೆ.  

ಮುಖಪುಟ /ಲೇಖನಮಾಲೆ