ಮುಖಪುಟ /ಲೇಖನಮಾಲೆ 
 

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಮಾರ್ಟಿನ್ ಲೂಥರ್ ಶಾಲೆಯ ಯಶೋಗಾಥೆ

MLPS Girinagar, Public School in Bangalore, Girinagar, CBSE, ICSE schools in Bangaloreಬೆಂಗಳೂರು: ಹನುಮಂತನಗರ, ಗಿರಿನಗರ ಮಧ್ಯೆ ಇರುವ ನಾಗೇಂದ್ರ ಬ್ಲಾಕ್‌ನಲ್ಲಿ  ೧೯೯೨ರಲ್ಲಿ ಚಿಕ್ಕದೊಂದು ಕಟ್ಟಡದ ನಾಲ್ಕೇ ನಾಲ್ಕು ಕೊಠಡಿಗಳಲ್ಲಿ ೪೦ ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ ಮಾರ್ಟಿನ್‌ಲೂಥರ್ ಇಂಗ್ಲಿಷ್ ಶಾಲೆ ಹಾಗೂ ಪಬ್ಲಿಕ್ ಶಾಲೆ ಇಂದು ಬೃಹದಾಕಾರವಾಗಿ ಬೆಳೆದಿದೆ. ಶಾಲೆಗೆ ಸುಸಜ್ಜಿತವಾದ ಎರಡು ಭವ್ಯ ಕಟ್ಟಡಗಳಿವೆ. ೧೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಶಿಸ್ತು, ಸಮಯಪಾಲನೆ, ಓದಿನಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸುವ ವಿನೂತನ ಕ್ರಮದಿಂದಾಗಿ ಶಾಲೆ ಪ್ರತಿ ವರ್ಷ ಉತ್ತಮ ಫಲಿತಾಂಶವನ್ನೂ ಗಳಿಸುತ್ತಿದೆ. ಎಸ್.ಎಸ್.ಎಲ್.ಸಿ. ಆರಂಭಗೊಂಡ ಮೊದಲ ವರ್ಷ ೯೮-೯೯ರಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದ ಶಾಲೆ, ಆನಂತರದ ವರ್ಷಗಳಲ್ಲೂ ತನ್ನ ದಾಖಲೆಯ ಓಟ ಮುಂದುವರಿಸಿದೆ.

MLES Bangalore, Buildingಅನುಭವದಿಂದ ಕಲಿಕೆ ಸಾಧ್ಯ ಎಂಬ ಧ್ಯೇಯವಾಕ್ಯದೊಂದಿಗೆ ಜಾತಿ, ಮತ, ಧರ್ಮದ ಭೇದವಿಲ್ಲದೆ, ಮೇಲು ಕೀಳೆಂಬ ತಾರತಮ್ಯವಿಲ್ಲದೆ, ಬಡವ - ಬಲ್ಲಿದರೆಲ್ಲರಿಗೂ ಸಮಾನ ಶಿಕ್ಷಣ ನೀಡುವ ಗುರಿಯಿಂದ ಕಾರ್ಯನಿರ್ವಹಿಸುತ್ತಿರುವ ಗಿರಿನಗರ ಎಜುಕೇಷನಲ್ ಟ್ರಸ್ಟ್, ತನ್ನ ಮಾರ್ಟಿನ್ ಲೂಥರ್ ಶಾಲೆಯಲ್ಲಿ ಸ್ಟೇಟ್ ಸಿಲಬಸ್ ಮತ್ತು ಕೇಂದ್ರೀಯ ಶಿಕ್ಷಣ ಪದ್ಧತಿಯ ಐ.ಸಿ.ಎಸ್.ಸಿ. ಮಾನ್ಯತೆ ಪಡೆದ ಪಬ್ಲಿಕ್ ಶಾಲೆಗಳೆರನ್ನೂ ಯಶಸ್ವಿಯಾಗಿ ನಡೆಸುತ್ತಿದೆ.

ಸಾಧನೆ

Anugraha Ded, Bed buildingಸ್ಕೌಟ್ಸ್, ಗೈಡ್ಸ್ ಹಾಗೂ ಶಾಲೆಯ ಬ್ಯಾಂಡ್‌ಸೆಟ್ ತಂಡಕ್ಕೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲೂ ಹೆಸರಿದೆ. ವಿವಿಧ ಉತ್ಸವಗಳಲ್ಲಿ ಪಾಲ್ಗೊಂಡ ಮಾರ್ಟಿನ್‌ಲೂಥರ್ ಶಾಲೆಯ ಮಕ್ಕಳು ಹಲವಾರು ಪ್ರಶಸ್ತಿ ಪಾರಿತೋಷಕ ಬಾಚಿಕೊಂಡಿದ್ದಾರೆ. ೨೦೦೨ರಲ್ಲಿ ಛತ್ತೀಸಘಡದಲ್ಲಿ ನಡೆದ ಜಾಂಬೂರಿಯಲ್ಲೂ ಈ ಶಾಲೆಯ ಬ್ಯಾಂಡ್‌ಸೆಟ್ ತಂಡ ಪಾಲ್ಗೊಂಡು ಪ್ರಶಸ್ತಿಯನ್ನು ಬಗಲಿಗೆ ಹಾಕಿಕೊಂಡಿದೆ.

೭೦ ಮಂದಿ ಶಿಕ್ಷಕರು ಹಾಗೂ ಉಪನ್ಯಾಸಕರು ಮತ್ತು ೨೫ಕ್ಕೂ ಹೆಚ್ಚು ಶಿಕ್ಷಕೇತರ ಸಿಬ್ಬಂದಿ ಹೊಂದಿರುವ ಸಂಸ್ಥೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದೇ ತನ್ನ ಪರಮ ಧ್ಯೇಯ ಎಂದು ತಿಳಿದಿದೆ.

MLPS computer labಸುಸಜ್ಜಿತ ೨ ಶಾಲಾ ಬಸ್ ಸೇರಿದಂತೆ ಒಟ್ಟು ಆರು ಶಾಲಾ ವಾಹನ, ಭವ್ಯವಾದ ಬೃಹತ್ ಸಭಾಂಗಣ, ವಿಶಾಲವಾದ ಕಂಪ್ಯೂಟರ್ ಕೊಠಡಿ, ಅತ್ಯಾಧುನಿಕ ಉಪಕರಣಗಳಿಂದ ಕೂಡಿದ ಪ್ರಯೋಗಶಾಲೆ, ಅತ್ಯಮೂಲ್ಯ ಕೃತಿಗಳನ್ನೊಳಗೊಂಡ ಗ್ರಂಥಾಲಯವೇ ಮೊದಲಾದ ಮೂಲಭೂತ ಸೌಲಭ್ಯಗಳಿಂದ ಮಿಗಿಲಾಗಿ ಉತ್ತಮ ಗುಣಮಟ್ಟದ ಶಿಕ್ಷಣದಿಂದ ಈ ಸ್ಪರ್ಧಾಯುಗದಲ್ಲಿ ಎಲ್ಲರ ಮೆಚ್ಚುಗೆಗೆ ಶಾಲೆ ಪಾತ್ರವಾಗಿದೆ.

ಗಿರಿನಗರ, ಶ್ರೀನಗರ, ನಾಗೇಂದ್ರಬ್ಲಾಕ್, ಬ್ಯಾಂಕ್‌ಕಾಲೋನಿ ಭಾಗಗಳಲ್ಲಿ ಉತ್ತಮವಾದ ಪಬ್ಲಿಕ್ ಶಾಲೆ ಇರಲಿಲ್ಲ ಎಂಬ ಕೊರತೆಯನ್ನು ಮಾರ್ಟಿನ್ ಲೂಥರ್ ಶಾಲೆ ನೀಗಿಸಿದೆ. ಈಗ ಕೆಂಗೇರಿ ಹೋಬಳಿಯ ಭೀಮನಕುಪ್ಪೆ ಪ್ರದೇಶದಲ್ಲಿ ಅತ್ಯಾಧುನಿಕ ಸೌಲಭ್ಯದ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಅತ್ಯುತ್ತಮ ಶಾಲೆ ತೆರೆಯಲು ಸಂಸ್ಥೆ ಮುಂದಾಗಿದೆ. MLPS Games Roomಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳೂ ವಿದ್ಯಾರ್ಥಿಯ ವೈಯಕ್ತಿಕ ವ್ಯಕ್ತಿತ್ವದ ವಿಕಾಸಕ್ಕೆ ಅತ್ಯಗತ್ಯ ಎಂಬುದನು ಮನಗಂಡಿರುವ ಶಾಲೆ, ಚರ್ಚಾಸ್ಪರ್ಧೆ, ಭಾಷಣಸ್ಪರ್ಧೆ, ಆಶುಭಾಷಣಸ್ಪರ್ಧೆ, ನಾಟಕ, ಕ್ವಿಜ್, ಸಂಗೀತ ಸ್ಪರ್ಧೆ ಏರ್ಪಡಿಸುತ್ತಾ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯ ಪ್ರಕಾಶಕ್ಕೆ ನೆರವಾಗಿದೆ.

ಹೆಣ್ಣು ಮಕ್ಕಳಿಗಾಗಿ ಕಸೂತಿ, ಹೊಲಿಗೆ ತರಬೇತಿ ಮೊದಲಾದ ವೃತ್ತಿ ತರಬೇತಿಯನ್ನೂ ಶಿಕ್ಷಣದ ಜೊತೆಜೊತೆಗೇ ನೀಡಲಾಗುತ್ತಿದೆ. ಭಗವದ್ಗೀತೆಯನ್ನೂ ಮಕ್ಕಳಿಗೆ ಈ ಶಾಲೆಯಲ್ಲಿ ಕಲಿಸಲಾಗುತ್ತಿದೆ. ಸಮುದಾಯ ಆರೋಗ್ಯ, ದೈಹಿಕ ಶಿಕ್ಷಣಕ್ಕೆ ಶಾಲೆ ವಿಶೇಷ ಒತ್ತು ನೀಡಿದೆ. ಶಾಲೆಯ ಈ ಸಾಧನೆಗೆ ಕಾರಣರಾದ ಸ್ಥಾಪಕ ಟ್ರಸ್ಟಿ ಸಿ. ಸುನಿಲ್ ಕುಮಾರ್ ಅವರಿಗೆ ನೂರಾರು ಪ್ರಶಸ್ತಿಗಳು ಲಭಿಸಿವೆ.

 ಸಾಧಕ ಡಾ.ಸಿ. ಸುನಿಲ್ ಕುಮಾರ್

Dr. Sunil Kumarತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಸೀಗೆಪಾಳ್ಯದವರಾದ ಸಿ. ಸುನಿಲ್ ಕುಮಾರ್ ಅವರು, ಮೂಲತಃ ಕೃಷಿಕ ಕುಟುಂಬದಿಂದ ಬಂದವರು. ಕಷ್ಟಕಾರ್ಪಣ್ಯಗಳ ನಡುವೆಯೂ ಕಷ್ಟಪಟ್ಟು ಓದಿ ಬಿ.ಎಸ್ಸಿ. ಬಿ.ಎಡ್. ಪಿ.ಜಿ. ಡಿ.ಪಿ.ಎಂ. ಪದವಿ ಪಡೆದ ಸುನಿಲ್ ಕುಮಾರ್ ಅವರು, ಮೊದಲಿಗೆ ಬೆಂಗಳೂರಿನ ಅನುದಾನಿತ  ಶಾಲೆಯೊಂದರಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದರು.

ಬಾಲ್ಯದಿಂದಲೂ ಸಾಹಸ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದ ಸುನಿಲ್ ಕುಮಾರ್ ಅವರಿಗೆ, ಇನ್ನೊಬ್ಬರ ಕೈಕೆಳಗೆ, ಹತ್ತು ಜನರಲ್ಲಿ ಒಬ್ಬರಾಗಿ ದುಡಿಯುವುದು ಒಗ್ಗಿ ಬರಲಿಲ್ಲ. ತಮ್ಮದೇ ಆದ ಸ್ವಂತ ಸಂಸ್ಥೆ ಕಟ್ಟಬೇಕು. ತಾವೂ ಒಂದು ಶಾಲೆ ತೆರೆದು ಅತ್ಯಂತ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉತ್ಕೃಷ್ಟ ಶಿಕ್ಷಣ ಸಂಸ್ಥೆ ಸ್ಥಾಪಿಸಬೇಕು ಎಂದು ಕನಸು ಕಟ್ಟಿದರು.

ತಮ್ಮ ಕನಸನ್ನು ನನಸಾಗಿಸಲು ಹಗಲಿರುಳು ದುಡಿದರು.  ತಮ್ಮ ಆಸ್ತಿ ಪಾಸ್ತಿ ಮಾರಿ ಹಣ ಹೊಂದಿಸಿ ಬೆಂಗಳೂರಿನ ಗಿರಿನಗರದಲ್ಲಿ ಕೇವಲ ೪೦ ವಿದ್ಯಾರ್ಥಿಗಳಿಂದ ಶಾಲೆ ಆರಂಭಿಸಿದರು. ಇಂದು ಗಿರಿನಗರ ಸುತ್ತಮುತ್ತಲ ಪ್ರದೇಶಗಳಲ್ಲಿರುವ ಅತ್ಯುತ್ತಮ ಶಾಲೆಗಳಲ್ಲಿ ಮಾರ್ಟಿನ್ ಲೂಥರ್ ಒಂದೆಂದು ಖ್ಯಾತಿ ಪಡೆಯಲು ಕಾರಣರಾದರು. ಮಾತೃಭಾಷೆಯಲ್ಲಿ ನೀಡುವ ಶಿಕ್ಷಣ ಮಕ್ಕಳ ಮನದಲ್ಲಿ ಹೆಚ್ಚುಕಾಲ ನಿಲ್ಲುತ್ತದೆ. ಎಂದು ಪ್ರತಿಪಾದಿಸುವ ಸುನಿಲ್‌ಕುಮಾರ್ ಪ್ರಸಕ್ತ ಜಾಗತಿಕ ಸ್ಪರ್ಧೆಯನ್ನು ಎದುರಿಸಲು ಇಂಗ್ಲಿಷ್ ಮಾಧ್ಯಮದ ಅನಿವಾರ್ಯತೆಯನ್ನೂ ಅರಿತರು. ಹೀಗಾಗೇ ಐ.ಸಿ.ಎಸ್.ಸಿ., ಸಿ.ಬಿ.ಎಸ್.ಇ. ಮಂಡಳಿ ಅನುಮತಿ ಪಡೆದು ಪಬ್ಲಿಕ್ ಶಾಲೆ ಆರಂಭಿಸಿದರು. ಆದರೂ ಮಕ್ಕಳಿಗೆ ಕನ್ನಡ ವಾತಾವರಣ ಮರೆಯದಂತೆ ಹಾಗೂ ಮಾತೃಭಾಷೆಯ ಬಗ್ಗೆ ಗೌರವ ಇರುವಂತೆ ಮಾಡುವಲ್ಲಿ ಯಶಸ್ವಿಯಾದರು. ಇವರ ಈ ಉತ್ತಮ ಪ್ರಯತ್ನದ ಫಲವಾಗಿ ಮಾರ್ಟಿನ್ ಲೂಥರ್ ಶಾಲೆಯ ಮಕ್ಕಳು ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳೆರಡರಲ್ಲೂ ಸಮಾನ ಪ್ರಭುತ್ವ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

sunilkumar receiving Kempegowda award from H.D.kumaraswamyನಂತರ ತಮ್ಮ ಬಡಾವಣೆಯಲ್ಲಿ ಡಿ.ಎಡ್. ಕಾಲೇಜಿಲ್ಲ ಎಂಬುದನ್ನು ಮನಗಂಡ ಸುನಿಲ್ ಕುಮಾರ್ ಅವರು ಅನುಗ್ರಹ ಡಿ.ಎಡ್. ಕಾಲೇಜು ಆರಂಭಿಸಿದರು. ಬಿ.ಎಡ್. ವ್ಯಾಸಂಗ ಮಾಡ ಬಯಸುವ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವ ಸಲುವಾಗಿ ಎಸ್.ವಿ.ಎಸ್. ಬಿ.ಎಡ್. ಕಾಲೇಜು ತೆರೆದರು.

ಬೆಂಗಳೂರು ನಗರ ಐ.ಟಿ., ಬಿ.ಟಿ. ನಗರಿಯಾಗಿ ತಂತ್ರಜ್ಞಾನದಲ್ಲಿ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಹಿಂದೆ ಬೀಳಬಾರದೆಂದು ಅತ್ಯಂತ ಸುಸಜ್ಜಿತ ಹಾಗೂ ೪೦ ಕಂಪ್ಯೂಟರ್‌ಗಳಿರುವ ಬೃಹತ್ ಕಂಪ್ಯೂಟರ್ ಪ್ರಯೋಗಾಲಯವನ್ನು ತಮ್ಮ ಶಾಲೆಯಲ್ಲಿ ನಿರ್ಮಿಸಿದರು. ನುರಿತ ಕಂಪ್ಯೂಟರ್ ಶಿಕ್ಷಕರಿಂದ ತಮ್ಮ ಶಾಲೆಯ ಮಕ್ಕಳಿಗೆ ಕಂಪ್ಯೂಟರ್ ಕಲಿಸಲು ಆರಂಭಿಸಿದರು. ತಮ್ಮ ಶಿಕ್ಷಣ ಸಂಸ್ಥೆಯ ಅಂತರ್ಜಾಲ ತಾಣವನ್ನೇ ಆರಂಭಿಸಿ ಒಂದರಿಂದ ೧೦ನೇ ತರಗತಿವರೆಗಿನ ಪರೀಕ್ಷಾ ಫಲಿತಾಂಶವನ್ನೇ ಇಂಟರ್‌ನೆಟ್‌ನಲ್ಲಿ ನೀಡುವ ಯೋಜನೆ ರೂಪಿಸಿದರು.

ಪ್ರಸ್ತುತ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಸರಿಯಾಗಿ ಶಾಲೆಗೆ ಬರುತ್ತಿದ್ದಾರೆಯೇ, ತಿಂಗಳಲ್ಲಿ ಎಷ್ಟು ದಿನ ಗೈರು ಹಾಜರಾಗಿದ್ದರು, ಅವರು ಪ್ರತಿ ಟೆಸ್ಟ್‌ನಲ್ಲಿ ಪಡೆದಿರುವ ಅಂಕಗಳೆಷ್ಟು ಇತ್ಯಾದಿ ಮಾಹಿತಿಯನ್ನು ಎಸ್.ಎಂ.ಎಸ್. ಮೂಲಕ ವಿದ್ಯಾರ್ಥಿಗಳ ಪಾಲಕರಿಗೆ ರವಾನಿಸುವ ನೂತನ ಯೋಜನೆಯನ್ನು ಹೊಂದಿದ್ದಾರೆ.

ತಮ್ಮ ಶಾಲೆಯ ಮಕ್ಕಳು ಆಧುನಿಕತೆಯ ನೆರಳಲ್ಲಿ ನಮ್ಮ ಸಂಪ್ರದಾಯವನ್ನು ಮರೆಯದಂತೆ ಸುಸಂಸ್ಕೃತರಾಗಿ ಬೆಳೆಯಬೇಕು. ಭವ್ಯ ಭಾರತದ ಭವಿಷ್ಯವಾಗಬೇಕು ಎಂದು ಕನಸು ಕಂಡಿದ್ದಾರೆ. ಶಾಲೆಯಲ್ಲಿ ಓದಿದ ಹಲವು ವಿದ್ಯಾರ್ಥಿಗಳು ಇಂದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಸ್ಥಾನ ಅಲಂಕರಿಸಿ ಇವರ ಕನಸು Dr. Sunilkumar felicitaion by Ananthkumar ನನಸು ಮಾಡುತ್ತಿದ್ದಾರೆ. ಡಾ. ಸುನಿಲ್ ಕುಮಾರ್ ಅವರ ಈ ಎಲ್ಲ ಸಾಧನೆಗಳು ಫಲ ನೀಡಿವೆ. ಬೆಂಗಳೂರಿನ ಅಷ್ಟೇಕೆ ರಾಜ್ಯದ ಹಾಗೂ ರಾಷ್ಟ್ರದ ಹಲವು ಪ್ರತಿಷ್ಠಿತ ಸಂಸ್ಥೆಗಳು ಸುನಿಲ್ ಕುಮಾರ್ ಅವರ ಸಾಧನೆ ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ.

ಪ್ರಶಸ್ತಿ ಹಾರ

ಶಿಕ್ಷಣ ಕ್ಷೇತ್ರದಲ್ಲಿ ನೀಡಿರುವ ಅನುಪಮ ಸಾಧನೆಗಾಗಿ ಡಾ. ಸುನಿಲ್ ಕುಮಾರ್ ಅವರು, ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕರ್ನಾಟಕರತ್ನಶ್ರೀ ಪ್ರಶಸ್ತಿ, ಸೂರ್ಯೋದಯ ಪ್ರತಿಷ್ಠಾನ ಪ್ರಶಸ್ತಿ, ಪ್ರಜ್ಞಾಪೀಠ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಕುವೆಂಪು ಅನಿಕೇತನ ಪ್ರಶಸ್ತಿ, ವಿದ್ಯಾರತ್ನ ಪ್ರಶಸ್ತಿ, ಜ್ಞಾನಶ್ರೀ ಪ್ರಶಸ್ತಿ, ಕರ್ನಾಟಕ ಪದ್ಮಭೂಷಣ ಪ್ರಶಸ್ತಿ, ರಾಷ್ಟ್ರೀಯ ರತ್ನ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ಭಾರತ ಜ್ಯೋತಿ ಪ್ರಶಸ್ತಿಜಮ್ ಆಫ್ ಇಂಡಿಯಾ ಪ್ರಶಸ್ತಿ, ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್, ಮದರ್ ಥೆರೇಸಾ ಪ್ರಶಸ್ತಿಯೇ ಮೊದಲಾದ ಹಲವು ಹತ್ತು ಪ್ರಶಸ್ತಿಗಳನ್ನು ಪಡೆದಿದ್ದಾರೆ.
Web Site: http://www.mlpsbangalore.org

ಮುಖಪುಟ /ಲೇಖನಮಾಲೆ