ಮುಖಪುಟ /ಲೇಖನಮಾಲೆ 
 

ಗೂಡು ಸೇರಿದ ಉಕ್ಕಿನ ಹಕ್ಕಿಗಳು
ಮೈನವಿರೇಳಿಸಿದ ವೈಮಾನಿಕ ಪ್ರದರ್ಶನ

Aero India 2011, ಏರೋ ಇಂಡಿಯಾ 2011, ವೈಮಾನಿಕ ಪ್ರದರ್ಶನ, ಬೆಂಗಳೂರು, ಟಿ.ಎಂ.ಸತೀಶ್ಟಿ.ಎಂ.ಸತೀಶ್
ಬೆಂಗಳೂರು
, ಫೆ.13: ಕನ್ನಡದಲ್ಲೊಂದು ಗಾದೆಯಿದೆ... ಆಕಾಶ ನೋಡಲು ನೂಕು ನುಗ್ಗಲೇ... ಆದರೆ ಬೆಂಗಳೂರಿನಲ್ಲಿಂದು ಅಕ್ಷರಶಃ ಆಕಾಶ ನೋಡಲೂ ನೂಕು ನುಗ್ಗಲು ಉಂಟಾಗಿತ್ತು., ಬೆಂಗಳೂರು ಹೊರವಲಯ ಯಲಹಂಕದಲ್ಲಿ ನಡೆದ  8ನೇ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ 2011ನ್ನು ಕಣ್ತುಂಬಿಕೊಳ್ಳಲು ಶನಿವಾರ, ಭಾನುವಾರ ಜನಸಾಗರವೇ ಹರಿದುಬಂದಿತ್ತು.

ಬೆಂಗಳೂರು ಸೇರಿದಂತೆ ದೂರದೂರದೂರುಗಳಿಂದ ಬಂದ ಲಕ್ಷಾಂತರ ಜನರು ವಾಯುನೆಲೆಯಲ್ಲಿ ಜಮಾಯಿಸಿ ಎವೆಯಿಕ್ಕದೆ ಮುಗಿಲಿನತ್ತ ಮುಖ ಮಾಡಿ, ಲೋಹದ ಹಕ್ಕಿಗಳ ಚಮತ್ಕಾರಕ ದೃಶ್ಯವನ್ನು ಕಣ್ಣೆಂಬ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿದ್ದ, ಮೆಚ್ಚುಗೆಯ ಕರತಾಡನ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪ್ರತಿ ಎರಡು ವರ್ಷಗಳಿಗೊಮ್ಮೆ ರಕ್ಷಣಾ ಸಚಿವಾಲಯ ಬೆಂಗಳೂರಿನಲ್ಲಿ ಏರ್ಪಡಿಸುವ ಈ ಮನಮೋಹಕ ವೈಮಾನಿಕ ಪ್ರದರ್ಶನ ಅಂತಾರಾಷ್ಟ್ರೀಯ ಖ್ಯಾತ ಪಡೆದಿದ್ದು, ದೇಶೀ ನಿರ್ಮಿತ ತೇಜಸ್ ಲಘು ಯುದ್ಧ ವಿಮಾನ ಸೇರಿದಂತೆ ದೇಶ ವಿದೇಶಗಳ ವಿಮಾನಗಳ ಹಾಗೂ ಅದರ ಚಾಲಕರ ಸಾಹಸಮಯ ಹಾರಾಟ ಎಲ್ಲರ ಮೆಚ್ಚುಗೆಗೆ ಪಾತ್ರವಾಯ್ತು.

ವೈಮಾನಿಕ ಪ್ರದರ್ಶನದಲ್ಲಿ ಮೊಟ್ಟ ಮೊದಲಿಗೆ ಮುಗಿಲಿಗೆ ಹಾರಿದ್ದು ಸೂರ್ಯಕಿರಣ್ ತಂಡ. ಮೂರು ಮೂರು Aero India 2011, ಏರೋ ಇಂಡಿಯಾ 2011, ವೈಮಾನಿಕ ಪ್ರದರ್ಶನ, ಬೆಂಗಳೂರು, ಟಿ.ಎಂ.ಸತೀಶ್ವಿಮಾನಗಳಂತೆ ಒಂದರ ಹಿಂದೊಂದರಂತೆ ಗಗನಕ್ಕೆ ಚಿಮ್ಮಿದ 9 ಸೂರ್ಯಕಿರಣ ವಿಮಾನಗಳು ಆಕಾಶದಲ್ಲಿ ಪಿರಮಿಡ್, ಡೈಮಂಡ್ ಮೊದಲಾದ ಆಕೃತಿಗಳನ್ನು ರಚಿಸುತ್ತಲೇ ಎಲ್ಲವೂ ಒಟ್ಟಾಗಿ ಕೇಸರಿ, ಬಿಳಿ, ಹಸಿರು ಧೂಮ ಉಗುಳುತ್ತಾ ಅಲೆಯೋಪಾದಿಯಲ್ಲಿ ಮೇಲಕ್ಕೂ, ಮೇಲಿನಿಂದ ಕೆಳಕ್ಕೂ ಇಳಿದಾಗಲಂತೂ ಎಲ್ಲರ ಎದೆಯಲ್ಲಿ ಢವಢವ ಜೊತೆಗೆ ರೋಮಾಂಚನ.

ಸುಕಾಯ್ ಭೋರ್ಗರೆಯುತ್ತಾ ಸುಯ್ ಎಂದು ಮುಗಿಲಿಗೆ ಚಿಮ್ಮಿದಾಗ ಲೋಹದ ಹಕ್ಕಿಗಳ ಚಮತ್ಕಾರ ಕಾಣಲು ನೆರೆದಿದ್ದ ಪ್ರೇಕ್ಷಕರು ಓ... ಎನುತ್ತಾ  ಬೆಚ್ಚಿ ಬೆರಗಾಗಿ ಕೇಕೆ  ಹಾಕಿದರೆ, ಪತ್ರಿಕೆಗಳ, ಟಿವಿ ಚಾನೆಲ್‌ಗಳ ಹಾಗೂ ಹವ್ಯಾಸಿ ಛಾಯಾಗ್ರಾಹಕರಂತೂ ಬೆಚ್ಚಿ ಬಿದ್ದು ಫೋಟೋ ತೆಗೆದ ದೃಶ್ಯವೂ ರೋಚಕ.

ಅಬ್ಬರದ ದನಿ ಮಾಡುತ್ತಾ ತಲೆಯ ಮೇಲೆ ಹಾರಿದ ಉಕ್ಕಿನ ಹಕ್ಕಿಗಳ ಚಮತ್ಕಾರದ ರಸಮಯ ಕ್ಷಣಗಳನ್ನು ಸೆರೆ ಹಿಡಿಯಲು ವೃತ್ತಿಪರರು ಯಶಸ್ವಿಯಾದರೆ, ಅಮೆಚೂರ್‌ ಗಳು ವಿಫಲರಾದರು.

Aero India 2011, ಏರೋ ಇಂಡಿಯಾ 2011, ವೈಮಾನಿಕ ಪ್ರದರ್ಶನ, ಬೆಂಗಳೂರು, ಟಿ.ಎಂ.ಸತೀಶ್ನಿಜಕ್ಕೂ ಅದೊಂದು ಅದ್ಭುತ ಪ್ರಪಂಚ. ತ್ರಿವರ್ಣ ಧ್ವಜದ ಬಣ್ಣದ ಹೊಗೆ ಉಗುಳುತ್ತಾ ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ ಹತ್ತಾರು ವಿಮಾನಗಳು ಒಮ್ಮೆಲೆ ವೇಗವಾಗಿ ಬಂದು ವಿವಿಧ ದಿಕ್ಕುಗಳಿಗೆ ತಿರುಗುವ ಮೂಲಕ ನೀಲಾಗಸದಲ್ಲಿ ಸುಂದರ ಚಿತ್ತಾರ ಬರೆದಾಗ ನೆರೆದಿದ್ದ ಪ್ರೇಕ್ಷಕರಿಂದ ಕಿವಿಗಡಚಿಕ್ಕುವ ಕರತಾಡನ.

ದೇಶ ವಿದೇಶಗಳಿಂದ ಆಗಮಿಸಿರುವ ವಿಮಾನಗಳು ತಿಳಿ ನೀಲ ಆಗಸದಿ ತಮ್ಮ ಕಸರತ್ತು ತೋರಿದವು.

೫ನೇ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಪ್ರದರ್ಶನದಲ್ಲಿ ಅಮೆರಿಕಾ, ಬ್ರೆಜಿಲ್, ಇಟಲಿ ಸೇರಿದಂತೆ ೨೯ ದೇಶಗಳ ನೂರಾರು ಸಂಸ್ಥೆಗಳು ಪಾಲ್ಗೊಂಡಿದ್ದು, ಒಂದು ಚಮತ್ಕಾರಕ್ಕೆ ಸವಾಲೆಸೆಯುವಂತೆ ಮತ್ತೊಂದು ಚಮತ್ಕಾರ ಮೆರೆದವು. ವೀಕ್ಷಕರರಂತೂ ಲೋಹದ ಹಕ್ಕಿಗಳ ಈ ಚಿತ್ತಾಕರ್ಷಕ ಚಮತ್ಕಾರ ಕಂಡು ನಿಬ್ಬೆರಗುಗೊಳಿಸಿದವು.

ದಟ್ಟವಾದ ಧೂಮ ಉಗುಳುತ್ತಾ ಬಂದ ೯ ವಿಮಾನಗಳ ಚಮತ್ಕಾರ ಮುಗಿವ ಹೊತ್ತಿಗೆ, ತ್ರಿವರ್ಣ ಧ್ವಜ ಹೊತ್ತ ಹೆಲಿಕಾಪ್ಟರ್‌ಗಳ ಹಾರಾಟ... ಹೆಲಿಕಾಪ್ಟರ್‌ಗಳನು ದಾಟಿ ರಭಸದಿಂದ ಬಂದ ಸುಖೋಯ್‌ನ ಆರ್ಭಟಕ್ಕೆ ಪ್ರದರ್ಶನ ವೀಕ್ಷಿಮತ್ತಾ ನಿಂತಿದ್ದವರ ಎದೆಯಲ್ಲಿ ಢವಢವ. ಅತ್ಯಾಧುನಿಕ ಸೂಪರ್ ಹಾರ್ನೆಟ್ , ರೆಡ್ ಬುಲ್ ತಂಡದ ಸಮರ ವಿಮಾನಗಳು ಬಾನಂಗಳದಿ ಗಿರಿಗಿರಿ ಸುತ್ತಿದಾಗಲಂತೂ ಪ್ರೇಕ್ಷಕರಿಂದ ಮತ್ತೊಮ್ಮೆ ಭಾರೀ ಕರತಾಡನ.

Aero India 2011, ಏರೋ ಇಂಡಿಯಾ 2011, ವೈಮಾನಿಕ ಪ್ರದರ್ಶನ, ಬೆಂಗಳೂರು, ಟಿ.ಎಂ.ಸತೀಶ್ಪ್ರೇಮಿಗಳ ದಿನದ 2 ದಿನಗಳ ಮುನ್ನ ಎರಡು ವಿಮಾನಗಳು ಒಮ್ಮೆಲೆ ಮುಗಿಲಿಗೆ ಹಾರಿ ನಂತರ ವಿರುದ್ಧ ದಿಕ್ಕಿಗೆ ಸಾಗಿ ಹೊಗೆಯಲ್ಲಿ  ಹೃದಯದ ಚಿತ್ರ ಬಿಡಿಸುತ್ತಿದ್ದಂತೆ, ಮತ್ತೊಂದು ವಿಮಾನ ಹೊಗೆಯುಗುಳುತ್ತಾ ಬಾಣದೋಪಾದಿಯಲ್ಲಿ ಹೋದಾಗಲಂತೂ ಪಡ್ಡೆ ಹುಡುಗರು, ಕೇಕೆ ಹಾಕಿ ಸಂಭ್ರಮಿಸಿದರು.

ಹುಣ್ಣಿಮೆ ಸಮೀಪಿಸುತ್ತಿದ್ದ ಹಿನ್ನೆಲೆಯಲ್ಲಿ ಬಾನಿನಲ್ಲಿ ಸಂಜೆ ಮೂಡಿದ್ದ ಚಂದ್ರನಿಗೆ ಮುತ್ತಿಕ್ಕುವಂತೆ ಬಂದ ಸಮರ ವಿಮಾನವಂತೂ ಮುದ ನೀಡಿತು. ಅಂತಿಮವಾಗಿ ಚಮತ್ಕಾರ ಮೆರೆದಿದ್ದು ಭಾರತದ ಸಾರಂಗ್ ಹೆಲಿಕಾಪ್ಟರ್ ಗಳು. ಹಿಂದಿಯಲ್ಲಿ ಸಾರಂಗ್ ಎಂದರೆ ನವಿಲು ಈ ಹೆಲಿಕಾಪ್ಟರ್ ಗಳು ಅಕ್ಷರಶಃ ನವಿಲನಂತೆ ನರ್ತನ ಮಾಡಿ ಎಲ್ಲರ ಗಮನ ಸೆಳೆದವು. ಮತ್ತೆ 2013ರ ಫೆಬ್ರವರಿಯಲ್ಲಿ ನೋಡೋಣ ಎಂದು ಹೇಳುತ್ತಾ ಎಲ್ಲ ವಿಮಾನಗಳೂ ಗೂಡು ಸೇರಿಕೊಂಡವು.

ಮುಖಪುಟ /ಲೇಖನಮಾಲೆ