ಮುಖಪುಟ /ಲೇಖನಮಾಲೆ 
 

ಸಾಹಸ ಕ್ರೀಡೆಗಳು ಶ್ರೀಮಂತರ ಸ್ವತ್ತಲ್ಲ...
ಸಾಹಸಕ್ರೀಡೆಗೆ ಕೇವಲ 5೦೦ ರೂ. ಸಾಕು..

*ಟಿ.ಎಂ.ಸತೀಶ್

Adventure sport ತಿಮ್ಮಯ್ಯ ಸಾಹಸ ಅಕಾಡಮಿ, ಬೆಂಗಳೂರು.ಬೆಂಗಳೂರು: ಭೋರ್ಗರೆಯುತ್ತಾ ರಭಸದಿಂದ ಹರಿಯುವ ನದಿಯಲ್ಲಿ ಮೀನಿನಂತೆ ಈಜಬೇಕು, ಉಕ್ಕಿ ಹರಿಯುವ ಸಮುದ್ರದ ಅಲೆಗಳ ಮಧ್ಯೆ ತೇಲಬೇಕು, ಮೌಂಟ್ ಎವರೆಸ್ಟ್‌ನೊಮ್ಮೆ ಏರಿಬಿಡಬೇಕು, ಬೃಹತ್ ಬಲೂನ್, ಪ್ಯಾರಾಚ್ಯೂಟ್‌ನಲ್ಲಿ ಆಗಸದಲ್ಲಿ ಹಕ್ಕಿಯಂತೆ ಹಾರಬೇಕು ಎಂಬ ಆಸೆ ಸಾಹಸಪ್ರಿಯರಲ್ಲಿ ಇದ್ದೇ ಇರುತ್ತದೆ. ಟಿ.ವಿ.ಗಳಲ್ಲಿ ಇಂಥ ದೃಶ್ಯಗಳನ್ನು ಕಂಡಾಗ ಆ ಆಸೆ ಉತ್ತಂಗಕ್ಕೇರುತ್ತದೆ.

ಸಾಹಸ ಕ್ರೀಡೆ: ಹಿಮಚ್ಛಾದಿತ ಪರ್ವತ ಶ್ರೇಣಿಗಳಿಲ್ಲ ಎಂಬುದೊಂದೇ ಕೊರಗು ಬಿಟ್ಟರೆ ಕರ್ನಾಟಕ ಭೌಗೋಳಿಕವಾಗಿ ಸಾಹಸಿಗರಿಗೆ ಹೇಳಿ ಮಾಡಿಸಿದ ತಾಣ. ಸಮೃದ್ಧ ವನಸಿರಿ, ಎತ್ತರವಾದ ಹೆಬ್ಬಂಡೆಗಳು, ಕಡಿದಾದ ಗಿರಿಪ್ರದೇಶ, ಧುಮ್ಮಿಕ್ಕುವ ಜಲಧಾರೆ, ಉಕ್ಕಿ ಹರಿಯುವ ನದಿ ಸಾಗರ ಸಾಹಸ ಕ್ರೀಡೆಗಳಿಗೆ ಅಗತ್ಯವಾದ ಎಲ್ಲ ಅನುಕೂಲತೆಗಳನ್ನು ಹೊಂದಿದೆ.

, ಶಿಲಾರೋಹಣ, ಪರ್ವತಾರೋಹಣ, ಹಾಯಿದೋಣಿ, ಯಾಚಿಂಗ್, ಕ್ಯಾನೋಯಿಂಗ್, ವಿಂಡ್ ಸರ್ಫಿಂಗ್, ಸಮುದ್ರ ಯಾನ, ಪ್ಯಾರಾ ಸೈಲಿಂಗ್ ಮೊದಲಾದ ಸಾಹಸ ಕ್ರೀಡಾ ಶಿಬಿರಗಳಲ್ಲಿ ಕೇವಲ 500-6೦೦ ರುಪಾಯಿ ನೀಡಿ ಪಾಲ್ಗೊಳ್ಳಬಹುದು.

Adventure sport ತಿಮ್ಮಯ್ಯ ಸಾಹಸ ಅಕಾಡಮಿ, ಬೆಂಗಳೂರು.ಪ್ರಚಾರದ ಕೊರತೆ: ಇಷ್ಟೆಲ್ಲಾ ಅವಕಾಶ ಇದ್ದರೂ ಇನ್ನೂ ರಾಜ್ಯದಲ್ಲಿ ಸಾಹಸ ಕ್ರೀಡೆಗಳು ಹೆಚ್ಚು ಜನಪ್ರಿಯವಾಗದಿರಲು ಕಾರಣವೇನು? ಉತ್ತರ ಸ್ಪಷ್ಟ. ರಾಜ್ಯದಲ್ಲಿ ಇಂಥದ್ದೊಂದು ಸಾಹಸ ಅಕಾಡಮಿ ಇದೆ. ಇಲ್ಲಿ ಹೆಚ್ಚು ಖರ್ಚಿಲ್ಲದೆ ಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳಬಹುದು ಎಂಬ ಕಲ್ಪನೆಯೇ ಹಲವರಿಗಿಲ್ಲ. ಇದಕ್ಕೆ ಪ್ರಚಾರದ ಕೊರತೆಯೇ ಕಾರಣ. ಇನ್ನು ಸಾಹಸ ಕ್ರೀಡೆಗಳ ಬಗ್ಗೆ ಇರುವ ತಪ್ಪು ತಿಳಿವಳಿಕೆ ಇದಕ್ಕೆ ಮತ್ತಷ್ಟು ಇಂಬು ನೀಡಿದೆ.

ರಾಮನಗರ, ಮಲ್ಪೆ, ಕಾರವಾರ, ಕೊಡಚಾದ್ರಿ, ಕೆಮ್ಮಣ್ಣುಗುಂಡಿ, ಕುದುರೆಮುಖ, ಯಾಣ, ಕೃಷ್ಣ, ಕಾವೇರಿ, ಕಿಲ್ಲಾಕೆರೆ, ಜನಿವಾರ ಕೆರೆ, ಸೀತಾ, ಕೆಂಪುಹೊಳೆ, ಜಕ್ಕೂರು, ಮೈಸೂರು, ಭದ್ರಾವತಿ, ಬೀದರ್ ಮೊಲಾದೆಡೆ ಅಕಾಡಮಿ ಭೂಸಾಹಸ, ಜಲಸಾಹಸ ಹಾಗೂ ವಾಯು ಸಾಹಸ ಕ್ರೀಡಾ ಶಿಬಿರ ನಡೆಸುತ್ತದೆ. ತರಬೇತಿಯ ಕಾಲದಲ್ಲಿ ಸುರಕ್ಷತೆಯ ಸಾಧನಗಳನ್ನು ಅಕಾಡಮಿಯೇ ಒದಗಿಸುತ್ತದೆ. ತರಬೇತಿ ಮುಗಿದ ಬಳಿಕ ಪ್ರಶಸ್ತಿಪತ್ರವನ್ನೂ ನೀಡುತ್ತದೆ.

ಜೊತೆಗೆ ಡಾರ್ಜಿಲಿಂಗ್, ಮನಾಲಿ, ಉತ್ತರಕಾಶಿಯಲ್ಲಿ ಪರ್ವತಾರೋಹಣ ಬೇಸಿಕ್ ಹಾಗೂ ಅಡ್ವಾನ್ಸ್ ಕೋರ್ಸ್‌ಗಳಲ್ಲಿ ಶಿಬಿರಾರ್ಥಿಗಳು ಎ ದರ್ಜೆಯಲ್ಲಿ ಉತ್ತೀರ್ಣರಾದರೆ, ಅವರು ತರಬೇತಿಗಾಗಿ ನೀಡಿದ ಹಣವನ್ನು ಅಕಾಡಮಿ ಮರು ಪಾವತಿಸುತ್ತದೆ. ಮುಕ್ತಿನಾಥ, ಹಿಮಾಲಯ ಮೊದಲಾದ ಪರ್ವತಾರೋಹಣ ತಂಡಗಳಿಗೂ ಆರ್ಥಿಕ ನೆರವು ನೀಡುತ್ತಿದೆ.

ಪ್ರತಿವರ್ಷ ಸೆಪ್ಟೆಂಬರ್ ಅಕ್ಟೋಬರ್‌ನಲ್ಲಿ ನಡೆಯುವ ಸ್ಪೀಡ್‌ಕ್ಲೈಂಬಿಂಗ್, ಡಿಫಿಕಲ್ಟ್ ಕ್ಲೈಂಬಿಂಗ್ ಸ್ಪರ್ಧೆಗಳಲ್ಲಿ ವಿಜೇತರಾಗಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ೩೨ ಮಂದಿಯ ಪ್ರಯಾಣವೆಚ್ಚ ಇತ್ಯಾದಿ ಖರ್ಚನ್ನು ಅಕಾಡಮಿ ನೋಡಿಕೊಳ್ಳುತ್ತದೆ.

ಪ್ರತಿ ತಿಂಗಳು 16ರಿಂದ 35 ವರ್ಷ ವಯೋಮಾನದವರಿಗಾಗಿ ಜಲ ಹಾಗೂ ವಾಯು ಸಾಹಸ ಶಿಬಿರ ನಡೆಸುತ್ತದೆ. ಹೆಚ್ಚಿನ ವಿವರಗಳಿಗೆ ಜನರಲ್ ತಿಮ್ಮಯ್ಯ ಅಕಾಡಮಿ, ಯವನಿಕಾ, ನೃಪತುಂಗಾರಸ್ತೆ, ಬೆಂಗಳೂರು ಫೋನ್ 080-22215602 ಸಂಪರ್ಕಿಸಬಹುದು..

ಮುಖಪುಟ /ಲೇಖನಮಾಲೆ