Smile..Smile..Smile..
ಮುಖಪುಟ --> ಜೋಕು ಜೋಕಾಲಿ
ನಗುನಗುತಾ ನಲಿ ನಲಿ ಏನೇ ಆಗಲಿ...

ಗುಂಡನ ಲಾಜಿಕ್ಕು... 

ಗುಂಡ ಕನ್ನಡಕದಂಗಡಿಗೆ ಹೋದ. ಅಂಗಡಿಯವ ಹೇಳಿದ. ನೋಡಿ ಈ ಕನ್ನಡಕ ಹಾಕ್ಕೊಳ್ಳಿ ನೀವು ಏನು ಬೇಕಾದರೂ ಓದಬಹುದು. ಗುಂಡ ಕೇಳಿದ ಈ ಕನ್ನಡಕ ಹಾಕ್ಕೊಂಡ್ರೆ ಇಂಗ್ಲಿಷ್ ಓದಬಹುದಾ? ಅಂಗಡಿಯವ ಹೇಳಿದ, ಇಂಗ್ಲಿಷೇನು, ತೆಲುಗು, ತಮಿಳು, ಕನ್ನಡ ಯಾವ ಭಾಷೆ ಬೇಕಾದ್ರೂ ಓದಬಹುದು. ಗುಂಡ ಹೇಳಿದ ಅಯ್ಯೋ ದೇವ್ರೆ... ಈ ಕನ್ನಡಕ ಹಾಕ್ಕೊಂಡ್ರೆ ಅಷ್ಟೊಂದು ಭಾಷೆ ಓದಬಹುದಾ? ಹಾಗಾದ್ರೆ ನನಗೆ 6 ಕನ್ನಡಕ ಕೊಡಿ, ನಮ್ಮನೇಲಿ ಯಾರಿಗೂ ಓದಕ್ಕೆ, ಬರೆಯಕ್ಕೆ ಬರಕ್ಕಿಲ್ಲ.... 

ನಗಲು ಅವಕಾಶವನ್ನೇ ಕೊಡಲ್ಲ

ಮೀನಳಿಗೆ ಮದುವೆ ಫಿಕ್ಸ್ ಆಗಿತ್ತು. ಆಕೆಯ ಗೆಳತಿ ಹೇಳಿದಳು. ಹುಡುಗ ಚೆನ್ನಾಗೇನೋ ಇದ್ದಾನೆ ಕಣೆ. ಆದರೆ, ಅವನು ನಕ್ಕರೆ ಮಾತ್ರ ಆ ಉಬ್ಬಹಲ್ಲು ಕೆಟ್ಟದಾಗಿ ಕಾಣತ್ತೆ. ಮೀನ ಹೇಳಿದ್ಲು. ಪರ್ವಾಗಿಲ್ಲ ಬಿಡು ಮದುವೆ ಆದ್‌ ಮೇಲೆ ನಾನು ಅವನಿಗೆ ನಗಲು ಅವಕಾಶವನ್ನೇ ನೀಡಲ್ಲ.

ಕಪ್ಪಗೆ ಮಾಡು...

ಎಪ್ಪತ್ತು ವರ್ಷದ ಬೊಕ್ಕುತಲೆಯ ಬೋಡ ತೈಲ ಕಂಪನಿಯೊಂದರ ಹೊಸ ಕೇಶತೈಲ ಬಳಸಿದ. ಆತನ ತಲೆಯಲ್ಲಿ ನಾಲ್ಕು ಬಿಳಿ ಕೂದಲು ಮೊಳೆತೇ ಬಿಟ್ಟವು. ಬಹಳ ಸಂತೋಷದಿಂದ ನಾಲ್ಕು ಕೂದಲಿನ ಬೋಡ.. ಕಟ್ಟಿಂಗ್‌ಷಾಪ್‌ಗೆ ಹೋದ. ಈ ಬೋಡನ ನೋಡಿ ನಗು ತಡೆಯಲಾರದ ಕಟಿಂಗ್‌ಷಾಪ್ ಮಾಲಿಕ ಕೇಳ್ದ. ಏನ್ ತಾತಾ ನಾನು ಕೂದಲು ಎಣಿಸಬೇಕೋ ಅಥವಾ ಹೇರ್ ಸೆಟ್ಟಿಂಗ್ ಮಾಡಬೇಕೋ... ತಾತ ಹೇಳಿದ... ಎರಡೂ ಬೇಡ.. ನನ್ನ ಕೂದಲಿಗೆ ಡೈ ಮಾಡು.

ರೋಗಿಗಳ ಬಳಿಯೆಲ್ಲಾ ಒಂದೇ ಕಾದಂಬರಿ..

ಸಾಹಿತಿಯೊಬ್ಬರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿದರು. ವಾರ್ಡಿನಲ್ಲಿ ಎಲ್ಲ ರೋಗಿಗಳ ಪಕ್ಕದಲ್ಲೂ ಇವರು ಬರೆದ ಕಾದಂಬರಿ ಇತ್ತು. ಇದನ್ನು ನೋಡಿ, ತೀವ್ರ ಆನಂದಗೊಂಡ ಸಾಹಿತಿ ವೈದ್ಯರನ್ನು ಕೇಳಿದರು. ಏನ್‌ಸಾರ್ ಈ ಆಸ್ಪತ್ರೇಲಿ ಎಲ್ಲರಿಗೂ ಇದೇ ಕಾದಂಬರಿ ಕೊಟ್ಟಿದ್ದೀರಲ್ಲ. ಇದು ಅಷ್ಟು ಚೆನ್ನಾಗಿದೆಯೇ.. ವೈದ್ಯರು ಹೇಳಿದರು. ಅದರ ಗುಟ್ಟೇ ಬೇರೆ. ಇವರೆಲ್ಲಾ ನಿದ್ದೇ ಬಾರದಿರೋ ರೋಗಿಗಳು. ಎಷ್ಟೇ ಸ್ಲೀಪಿಂಗ್ ಟ್ಯಾಬ್‌ಲೆಟ್ ಕೊಟ್ರು ಇವರಿಗೆ ನಿದ್ದೇನೆ ಬರ್ತಿರಲಿಲ್ಲ. ಈ ಕಾದಂಬರಿ ಕೊಟ್ವಿ ನೋಡಿ ಎಲ್ಲರೂ ಐದೇ ನಿಮಿಷಕ್ಕೆ ನಿದ್ದೇ ಮಾಡ್ತಾರೆ...

ವೆರಿ ಅಕೇಶನಲಿ

ಹೈಫೈ ಹುಡುಗಿಯೊಬ್ಬಳು ಕಾಲೇಜಿಗೆ ಸೇರಲು ಅಪ್ಲಿಕೇಷನ್ ಭರ್ತಿ ಮಾಡುತ್ತಿದ್ದಳು. ನೇಮ್, ಅಡ್ರೆಸ್ ಫಿಲ್ ಮಾಡಿದ ಬಳಿಕ sex ಎಂದಿದ್ದ ಕಾಲಂನಲ್ಲಿ ಏನು ಬರೆಯಬೇಕು ಎಂದು ಯೋಚಿಸಿ, ಯೋಚಿಸಿ ಕೊನೆಗೆ ಹೀಗೆ ಬರೆದಳು. ವೆರಿ ಅಕೇಶನಲಿ.

ಅಭ್ಯಾಸಬಲ

ಬಿಟಿಎಸ್ ಬಸ್ ಡ್ರೈವರ್ ಆಗಿದ್ದ ಗುಂಡ, ಕಷ್ಟ ಪಟ್ಟು ಟ್ರೈನಿಂಗ್ ಮಾಡಿ ಫೈಲಟ್ ಆಗೇ ಬಿಟ್ಟ. ಒಂದು ದಿನ ವಿಮಾನ ಓಡಿಸುತ್ತಿರುವ ಇದ್ದಕ್ಕಿದ್ದ ಹಾಗೆ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತು.

ಕೂಡಲೇ ಅಭ್ಯಾಸ ಬಲದಂತೆ ಗುಂಡ ಹೇಳ್ದ, ರೀ ಎಲ್ಲ  ಕೆಳಗೆ ಇಳಿದು  ಸ್ವಲ್ಪ ದೂರ ತಳ್ಳಿ..  ಎಂಜಿನ್ ಆಫ್ ಆಗಿದೆ

ಪೆದ್ದ ಗುಂಡನ ತರ್ಕ

ಪೆದ್ದ ಗುಂಡ ಸ್ಟ್ರೀಟ್ ಲೈಟ್ ಕೆಳಗೆ ಏನೋ ಹುಡುಕುತ್ತಿದ್ದ. ಅದನ್ನು ನೋಡಿದ ಪಾದಚಾರಿಯೊಬ್ಬರು ಕೇಳಿದರು. ಏನು ಸ್ವಾಮಿ ಏನು ಹುಡುಕುತ್ತಿದ್ದೀರಿ. ಗುಂಡ ಹೇಳಿದ ಪಕ್ಕದ ಬೀದೀಲಿ ನನ್ನ ಪರ್ಸ್ ಬಿದ್ದು ಹೋಯ್ತು ಅದನ್ನು ಇಲ್ಲಿ ಹುಡುಕುತ್ತಿದ್ದೇನೆ.

ಪಾದಚಾರಿ ಹೇಳಿದ್ರು. ಅಲ್ರೀ ಪಕ್ಕದ ಬೀದಿಲಿ ಪರ್ಸ್‌ಬಿದ್ರೆ. ಇಲ್ಲಿ ಹುಡುಕುದ್ರೆ ಸಿಗತ್ತಾ... ಗುಂಡ ಹೇಳ್ದ ನನ್ನನ್ನೇನು ಅಷ್ಟು ದಡ್ಡ ಅಂದುಕಂಡ್ರ. ಪಕ್ಕದ ಬೀದಿಲಿ ಕರೆಂಟೇ ಇಲ್ಲ. ಕತ್ತಲಲ್ಲಿ ಬಿದ್ದಿರೋದು ಸಿಗತ್ತಾ... ಅದಕ್ಕೆ ಲೈಟ್ ಇರೋಕಡೆ ಹುಡುಕುತ್ತಿದ್ದೇನೆ.


ಮತ್ತಷ್ಟು ಜೋಕುಗಳಿಗೆ ಕ್ಲಿಕ್ ಮಾಡಿ