Smile..Smile..Smile..
ಮುಖಪುಟ --> ಜೋಕು ಜೋಕಾಲಿ
ನಗುನಗುತಾ ನಲಿ ನಲಿ ಏನೇ ಆಗಲಿ...

 

ಯಾರು ಬುದ್ಧಿವಂತರು..

ಇದು ವಾಟ್ಸ್ ಅಪ್ ನಲ್ಲಿ ಇಂಗ್ಲಿಷ್ ನಲ್ಲಿ ಬಂದ (ಜೋಕ್) ಸಂದೇಶ ಕನ್ನಡದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಓದಿ.. ಒಬ್ಬರೇ ನಗಬೇಡಿ. ಚೆನ್ನಾಗಿದ್ದರೆ ಶೇರ್ ಮಾಡಿ..
ಜಪಾನ್ ನ ಸೋಪು ತಯಾರಿಕಾ ಕಾರ್ಖಾನೆಯಲ್ಲಿ ಸೋಪು ತಯಾರಾದ ಬಳಿಕ ಅದನ್ನು ಒಂದು ಯಂತ್ರ ಪ್ಲಾಸ್ಟಿಕ್ ಹಾಳೆಯಲ್ಲಿ ಸುತ್ತಿ ಸೀಲ್ ಮಾಡುತ್ತಿತ್ತು, ಬಳಿಕ ಮತ್ತೊಂದು ಯಂತ್ರ ಅದನ್ನು ದಪ್ಪ ಹಾಳೆಯ ಪೊಟ್ಟಣದಲ್ಲಿ ಹಾಕಿ ಅಂಟಿಸಿ, ಸಾಲಾಗಿ ಜೋಡಿಸುತ್ತಿತ್ತು.
ಈ ಪ್ರಕ್ರಿಯೆಯಲ್ಲಿ ಕೆಲವು ಬಾರಿ ಸೋಪೇ ಇಲ್ಲದ ಒಂದೆರೆಡು ಖಾಲಿ ಕವರ್ ಗಳು ಪೊಟ್ಟಣ ಸೇರಿ ಬಿಡುತ್ತಿದ್ದವು. ಇದರ ವಿರುದ್ಧ ಗ್ರಾಹಕರು ಗ್ರಾಹಕ ನ್ಯಾಯಾಲಯಗಳಲ್ಲಿ ದೂರು ಸಲ್ಲಿಸಿ ಪರಿಹಾರ ಪಡೆದರು. ಇದು ಸೋಪು ಕಾರ್ಖಾನೆಯ ಪ್ರತಿಷ್ಠೆಗೂ ಕುಂದು ತರುತ್ತಿತ್ತು. ಹೀಗಾಗಿ ಸೋಪೇ ಇಲ್ಲದ ಖಾಲಿ ಕವರ್ ಪತ್ತೆಗೆ ಜಪಾನ್ ನ ಆ ಸೋಪು ಕಾರ್ಖಾನೆ ಲಕ್ಷಾಂತರ ಯೆನ್ ಖರ್ಚು ಮಾಡಿ ಯಂತ್ರ ರೂಪಿಸಿತು. ಅದು ಸೋಪ್ ಇಲ್ಲದ ಖಾಲಿ ಪೊಟ್ಟಣಗಳನ್ನು ಯಶಸ್ವಿಯಾಗಿ ಬೇರ್ಪಡಿಸುತ್ತಿತ್ತು. ಇದರಿಂದ ಸಂಸ್ಥೆಯ ಪ್ರತಿಷ್ಠೆ ಉಳಿಯಿತು.
ಇದೇ ರೀತಿಯ ಸಮಸ್ಯೆ ಭಾರತದ ಸೋಪು ತಯಾರಿಕಾ ಕಾರ್ಖಾನೆಗಳಲ್ಲೂ ಆಗುತ್ತಿತ್ತು. ಆದರೆ ಅದಕ್ಕೆ ಭಾರತೀಯ ಕಾರ್ಖಾನೆಗಳು ತಂದ ಯಂತ್ರ ಯಾವುದು ಗೊತ್ತೆ. 1000 ರೂಪಾಯಿಯ ಒಂದು ಟೇಬಲ್ ಫ್ಯಾನ್. ಸೋಪಿನ ಪೊಟ್ಟಣ ಆಗುವ ಜಾಗದಲ್ಲಿ ಈ ಫ್ಯಾನ್ ಇಟ್ಟಿತು. ಜೋರಾಗಿ ಬೀಸುವ ಗಾಳಿಗೆ ಸೋಪ್ ಇಲ್ಲದ ಹಗುರವಾದ ಖಾಲಿ ಪೊಟ್ಟಣ ಹಾರಿ ಹೋಗುತ್ತಿತ್ತು. ಸೋಪು ಇರುವ ಪೊಟ್ಟಣ ಮಾತ್ರ ಸಾಲಾಗಿ ಬಾಕ್ಸ್ ಸೇರುತ್ತಿತ್ತು. ಹೇಗಿದೆ ಐಡಿಯಾ... ಯಾರು ಬುದ್ಧಿವಂತರು ನೀವೇ ನಿರ್ಧರಿಸಿ.

ಸೆಂಡ್ ಆಫ್ ಕಮಿಟಿ... ರಿಸೆಪ್ಷನ್ ಕಮಿಟಿ ಆದಾಗ...

ಖ್ಯಾತ ಶಿಕ್ಷಣ ತಜ್ಞ, ವಿಚಾರವಾದಿ ಡಾ. ಎಚ್. ನರಸಿಂಹಯ್ಯ ಅವರು, ತಮ್ಮ ಸಾವಿನ ಬಳಿಕ ತಮ್ಮ ಅಂತ್ಯಕ್ರಿಯೆ ಹೇಗೆ ನಡೆಯಬೇಕು, ತಮ್ಮ ಅಂಗಾಂಗಗಳನ್ನು ಹೇಗೆ ದಾನ ಮಾಡಬೇಕು ಎಂಬಿತ್ಯಾದಿ ವಿಷಯಗಳನ್ನು ತಾವೇ ನಿರ್ಧರಿಸಿ ತಮ್ಮ ಆತ್ಮೀಯರನ್ನು ಒಳಗೊಂಡ ಸಮಿತಿಯೊಂದನ್ನು ಮಾಡಿದ್ದರು.

ಆದರೆ, ಡಾ.ಎಚ್.ನರಸಿಂಹಯ್ಯ ಅವರಿಗೆ ಮೊದಲೇ ಸಮಿತಿಯಲ್ಲಿದ್ದ ಇಬ್ಬರು ಸಾವನ್ನಪ್ಪಿದರು. ಆಗ ಎಚ್.ಎನ್. ಹೇಳಿದ್ದು ಏನು ಗೊತ್ತೆ... ಅಲ್ಲ ಇವರನ್ನು ಸೆಂಡ್‌ಆಫ್ ಕಮಿಟಿಗೆ ಮೆಂಬರ್ ಮಾಡಿದ್ರೆ, ನನಗಿಂತ ಮೊದಲೇ ಮೇಲೆ ಹೋಗಿ, ರಿಸೆಪ್‌ಷನ್ ಕಮಿಟಿ ರಚನೆ ಮಾಡಿದ್ದಾರೆ...

(ಈ ಘಟನೆ ಸ್ಮರಿಸಿಕೊಂಡವರು, ಡಾ. ಮಹೇಶ್ ಜೋಶಿ, ಹಿರಿಯ ನಿರ್ದೇಶಕರು, ದೂರದರ್ಶನ ಕೇಂದ್ರ, ಬೆಂಗಳೂರು)

ಜೋಕಿನ ಜೋಕು

ಗುಂಡನ ಬಾಸ್ ಗೆ ಜೋಕು ಹೇಳುವ ಚಪಲ. ಆದರೆ ಅವರಿಗೆ ಗೊತ್ತಿದ್ದು ಒಂದೇ ಒಂದು ಕೆಟ್ಟ ಜೋಕು. ಪದೇಪದೇ ಅದನ್ನೇ ಹೇಳುತ್ತಿದ್ದರು. ಆದರೂ ಗುಂಡ ಗಹಗಹಿಸಿ ನಗುತ್ತಿದ್ದ. ಇದನ್ನು ನೋಡಿದ ವ್ಯಕ್ತಿಯೊಬ್ಬರು, ಗುಂಡನನ್ನು  ಪಕ್ಕಕ್ಕೆ ಕರೆದು ಕೇಳಿದ್ರು. ಎನ್ ಸಾರ್  ಅಷ್ಟು ಜೋರಾಗಿ ನಕ್ತಾ ಇದ್ದೀರಿ. ಆ ಜೋಕು ಕೇಳಿದ್ರೆ ನಗೂನೇ ಬರಲ್ಲ? ಜೊತೆಗೆ ಅವನು ಹೇಳಿದ ಜೋಕೇ ಹೇಳ್ತಾ ಇದ್ದಾನೆ ಆದ್ರೂ  ನೀವು ನಕ್ತಾನೇ ಇದ್ದೀರಿ ಏಕೆ ಎಂದು ಪ್ರಶ್ನಿಸಿದರು.

ಗುಂಡ ಹೇಳಿದ ಏನ್ ಮಾಡ್ಲಿ ಸ್ವಾಮಿ, ಅವರು ನನ್ನ ಬಾಸ್. ನಾನು ಈಗ ನಗದೇ ಇದ್ರೆ ಅವರು ಮತ್ತೆ ಅದೇ ಜೋಕನ್ನು ಇನ್ನೂ ನಾಲ್ಕಾರು ಸಾರಿ ಹೇಳ್ತಾರೆ ಅದಕ್ಕೆ ವಿಧಿ ಇಲ್ಲದೆ ನಕ್ತಾನೇ ಇರ್ತೀನಿ.

ಪುಸ್ತಕ ಓದಿ ಸೊಸೆ ಮಾಡಿದ ಅಡುಗೆ...

ಮದುವೆಯಾಗಿ ಮನೆ ತುಂಬಿಸಿಕೊಂಡ ಸಾಫ್ಟ್‌ವೇರ್ ಸೊಸೆಗೆ ಅಡಿಗೆ ಮಾಡಕ್ಕೆ ಬರಲ್ಲ ಅಂತ ಅತ್ತೆ ದಿನಾ ದೂರುತ್ತಿದ್ರು. ಕೊನೆಗೊಂಡು ದಿನ ಸೊಸೆ ಒಂದು ಅಡುಗೆ ಪುಸ್ತಕ ತಂದು. ಅಡುಗೆ ಮಾಡಲು ಆರಂಭಿಸಿದಳು. ಚಪಾತಿ ಹಿಟ್ಟು ಕಲೆಸಿ, ಅದರ ಮೇಲೆ ದೇವರ ಗೂಡಲ್ಲಿದ್ದ ಗಂಟೆ ತೆಗೆದು ಇಟ್ಟಳು.

ಇದರಿಂದ ಸಿಡಿಮಿಡಿಗೊಂಡ ಅತ್ತೆ ಕೇಳಿದ್ರು. ಏನಮ್ಮ ದೇವರ ಪೂಜೆಗೆ ಬಾರಿಸೋ ಗಂಟೆನ ತೆಗೆದು ಚಪಾತಿ ಹಿಟ್ಟಿನ ಮೇಲೆಕೆ ಇಟ್ಟೆ. ನಿಮಗೆ ಒಂಚೂರೂ ಮಡಿ, ಮೈಲಿಗೆ ಇಲ್ಲ.

ಸೊಸೆ ಅಷ್ಟೇ ನಯವಾಗಿ ಉತ್ತರಕೊಟ್ಲು. ಪುಸ್ತಕದಲ್ಲಿ ಚಪಾತಿ ಹಿಟ್ಟು ಕಲೆಸಿ ಒಂದು ಗಂಟೆ ಇಡಿ ಅಂತ ಬರೆದಿದ್ದಾರೆ ಗೊತ್ತಾ....

ಅದಕ್ಕೆಲ್ಲಾ ಹೆದರಲ್ಲ

೭೫ ವರ್ಷದ ವೃದ್ಧ ನಾಲ್ಕನೇ ಮದುವೆ ಸಿದ್ಧತೆ ನಡೆಸಿದ್ದ. ತಾತನ ಈ ನಿರ್ಧಾರದಿಂದ ಬೇಸತ್ತ ಮೊಮ್ಮಗ ಧೈರ್ಯ ಮಾಡಿ ಹೇಳಿದ. ತಾತಾ ನೀವು ಮದುವೆ ಆಗ್ತಿರೋ ಹುಡುಗೀಗೆ ಕೇವಲ ೨೧ ವರ್ಷ. ಈ ವಯಸ್ಸಿನಲ್ಲಿ ನೀವು ಮದುವೆ ಆಗೋದು ತರವಲ್ಲ.

ನಿಮ್ಮ ದಾಂಪತ್ಯ ದುರಂತದಲ್ಲಿ ಕೊನೆಯಾಗಬಹುದು ಎಚ್ಚರ!!! ತಾತ ಉತ್ತರ ಕೊಟ್ಟ ನಾನು ಅದಕ್ಕೆಲ್ಲಾ ಹೆದರಲ್ಲ. ಅವಳು ಸತ್ತರೆ ಮತ್ತೊಂದು ಮದುವೆ ಆಗೇ ಆಕ್ತೀನಿ.

ಅಮ್ಮನಿಗೆ ಮಗಳ ಸಜೆಷನ್

ಖ್ಯಾತ ಚಿತ್ರನಟಿಯೊಬ್ಬಳು ಸತತ ಹದಿನೆಂಟನೇ ಬಾರಿ ತನ್ನ ೧೮ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಳು. ಈ ಶುಭ ಸಂದರ್ಭದಲ್ಲಿ ಆಕೆಯ ೧೮ ವರ್ಷದ ಮಗಳೊಂದು ಸಜೆಷನ್ ಕೊಟ್ಲು. ಮಮ್ಮಿ ಆಟ್‌ಲೀಸ್ಟ್ ನನಗಿಂತ ಒಂಬತ್ತು ತಿಂಗಳಾದ್ರೂ ನಿನ್ನ ವಯಸ್ಸು ಜಾಸ್ತಿ ಹೇಳು....

ಅರೇಂಜ್ ಲೋಕಲಿ...

ಅದೊಂದು ಹಳ್ಳಿಯ ಬ್ಯಾಂಕ್, ಸ್ಟಾಫ್ ಸಂಖ್ಯೆ ಕಡಿಮೆ. ಯಾರಾದರೂ ರಜೆ ಹೋದರೆ, ಬದಲಿ ವ್ಯವಸ್ಥೆ ಮಾಡುವುದು ವಾಡಿಕೆ. ಒಮ್ಮೆ ಒಬ್ಬ ಉದ್ಯೋಗಿಯ ಹೆಂಡತಿ ಕಾಯಿಲೆ ಮಲಗಿದರು. ಇಂಗ್ಲಿಷ್ ಅಷ್ಟಾಗಿ ಬಾರದ ಆತ ಕೂಡಲೆ ಹೆಡ್ ಆಫೀಸ್‌ಗೆ ಹೀಗೆ ಟೆಲಿಗ್ರಾಂ ಕೊಟ್ಟ... ಸಾರ್ ಮೈ ವೈಫ್ ಈಸ್ ಇಲ್. ಪ್ಲೀಸ್ ಅರೇಂಜ್ ಸಬ್‌ಸ್ಟಿಟ್ಯೂಟ್.. ಹೆಡ್ ಆಫೀಸ್‌ನಿಂದ ಟೆಲಿಗ್ರಾಂ ರಿಪ್ಲೆ ಬಂತು... ಅದರಲ್ಲಿ ಹೀಗೆ ಬರೆದಿತ್ತು... ಸಾರಿ... ಯು.. ಪ್ಲೀಸ್ ಅರೇಂಜ್ ಲೋಕಲಿ...

ಎಲ್ಲಾ ಬಿಡ್ತೀನಿ

ಗುಂಡಾ ಒಂದೇ ಹುಡುಗೀನ ೫ ವರ್ಷದಿಂದ ಪ್ರೀತಿಸ್ತಾ ಇದ್ದ. ಕೊನೆಗೂ ಇಬ್ರೂ ಮದುವೆ ಆಗೋ ನಿರ್ಧಾರ ಮಾಡಿದ್ರು. ಆ ಹುಡುಗಿ ಕೇಳಿದ್ಲು. ನಾನು ನಿನ್ನ ಮದುವೆ ಆಗಕ್ಕೆ ಸಿದ್ಧ ಆದರೆ ನೀನು ಸಿಗರೇಟ್ ಸೇದೋದು ಬಿಡ್ತೀಯಾ? ಗುಂಡ ಓಕೆ ಎಂದ. ಕುಡಿಯೋದೂ ಬಿಡ್ತಾಯಾ ? ಗುಂಡ ವಿ ಇಲ್ಲದೆ ಸರಿ ಎಂದ. ಇಸ್ಪೀಟ್ ಆಡೋದು? ಖಂಡಿತಾ ಬಿಡ್ತೀನಿ ಅಂದ ಗುಂಡ. ಹುಡುಗಿ ಮತ್ತೆ ಕೇಳಿದ್ಲು ನನ್ನ ಮದುವೆ ಆಗಕ್ಕೆ ನೀನು ಇನ್ನೂ ಏನೇನು ಬಿಡ್ತೀಯಾ ? ಗುಂಡ ಹೇಳ್ದ ಮದ್ವೆ ಆಗೋ ಯೋಚನೇನೇ ಬಿಟ್ಟು ಬಡ್ತೀನಿ.

ಮಾರಾಟ

ಒಬ್ಬಾಕೆ. ತನ್ನ ಮೃತ ಪತಿಯ ಬೆನ್ಜ್ ಕಾರನ್ನು ಕೇವಲ ೧ ರುಪಾಯಿಗೆ ಮಾರಾಟ ಮಾಡುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಿದಳು. ಇದನ್ನು ನೋಡಿದ ಹಿತೈಷಿಗಳು ಕೇಳಿದರು. ಅಲ್ಲಾ ಮೇಡಂ ಈ ಕಾರನ್ನು ಕಳ್ಳನಿಗೆ ಕೊಟ್ಟರೂ ಒಂದು ಲಕ್ಷಾಂತರ ರುಪಾಯಿ ಕೊಡ್ತಾನೆ. ಅಂತಹುದರಲ್ಲಿ ಬರಿ ೧ ರುಪಾಯಿಗೆ ಏಕೆ ಮಾರುತ್ತಾ ಇದ್ದೀರಿ?

ಆಕೆ ಉತ್ತರಿಸಿದಳು: ಏನು ಮಾಡ್ಲೀ ಹೇಳಿ. ನನ್ನ ಗಂಡ ವಿಲ್‌ನಲ್ಲಿ ಈ ಕಾರನ್ನು ಮಾರಿ, ಬರುವ ಹಣವನ್ನು ಅವರ ಲೇಡಿ ಸೆಕ್ರೇಟರಿಗೆ ಕೊಡಲು ಹೇಳಿದ್ದಾರೆ.

ಈಗೆಷ್ಟೋ ಪರವಾಗಿಲ್ಲ

ಏಕೋಪಾಧ್ಯಾಯ ಶಾಲೆಗೆ ಇನ್‌ಸ್ಪೆಕ್ಟರ್ ಬಂದಿದ್ರು. ಆಗ ಆರನೇ ಕ್ಲಾಸಲ್ಲಿ ಗಣಿತ ಪಾಠ ನಡೀತಿತ್ತು. ಇನ್‌ಸ್ಪೆಕ್ಟರ್ ಕೇಳಿದ್ರು ಏನ್ರೀ ಮೇಸ್ಟ್ರೇ ಹೇಗೆ ಪಾಠ ಮಾಡಿದ್ದೀರಿ. ಮೇಸ್ಟ್ರಂದ್ರು ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀನಿ ಸಾರ್. ಬೇಕಾದ್ರೆ ನೀವೇ ಪರೀಕ್ಷೆ ಮಾಡಿ..

ಓಕೆ. ಎಂದ ಇನ್‌ಸ್ಪೆಕ್ಟರ್ ಒಬ್ಬ ಹುಡುಗನ್ನ ಕೇಳಿದ್ರು ನಾಲ್ಕ ನಾಲ್ಕಿ ಎಷ್ಟು.? ಹುಡುಗ ಹೇಳಿದ ೧೬೦೦ ಸಾರ್. ಗಾಬರಿ ಆದ ಇನ್‌ಸ್ಪೆಕ್ಟರ್ ಮತ್ತೊಬ್ಬ ಹುಡುಗನ್ನ ಕೇಳಿದ್ರು ಎಂಟೆಂಟ್ನಿ ಎಷ್ಟೋ ? ಅವ ಹೇಳ್ದ ೬೪,೦೦೦ ಸಾರ್. ಸಿಟ್ಟಾದ ಇನ್‌ಸ್ಪೆಕ್ಟರ್ ಕೇಳಿದ್ರು ಇದೇ ಏನ್ರೀ ಮೇಸ್ಟ್ರೇ ನೀವು ಮಕ್ಳಿಗೆ ಹೇಳಿಕೊಟ್ಟಿರೋದು. ಎಲ್ಲಾ ಸಾವಿರಗಟ್ಲೇ ಹೇಳ್ತಾರಲ್ರೀ.

ಸಮಾಧಾನದಿಂದ ಮೇಸ್ಟ್ರು ಹೇಳಿದ್ರು. ಈಗೆಷ್ಟೋ ಪರವಾಗಿಲ್ಲ ಸಾರ್ ನಾನು ಬಂದ ಹೊಸದ್ರಲ್ಲಿ ಲಕ್ಷಗಟ್ಲೆ ಹೇಳ್ತಿದ್ರು. ನಾನು ಸಾವಿರಕ್ಕೆ ಇಳ್ಸಿದೀನಿ.

ನಾಟಕಕ್ಕೆ ಬರಲು ಕಾರಣ

ಕಲಾಕ್ಷೇತ್ರವೊಂದರಲ್ಲಿ ನಾಟಕ ನಡೆಯುತ್ತಿತ್ತು. ಪ್ರವೇಶ ಉಚಿತ. ಕಾರ್ಯಕ್ರಮ ಸಂಯೋಜಕರು ಹೊರಗೆ ಒಂದು ಪುಸ್ತಕ ಇಟ್ಟು ನೀವು ಈ ನಾಟಕಕ್ಕೆ ಬರಲು ಕಾರಣ ಏನು? ಎಂಬ ಪ್ರಶ್ನೆ ಕೇಳಿ ವೀಕ್ಷಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದರು.  ಮಹಿಳೆಯೊಬ್ಬರು ಆ ಪ್ರಶ್ನೆಗೆ ಹೀಗೆ ಉತ್ತರ ಬರೆದಿದ್ದರು. ಹೊರಗೆ ಜೋರು ಮಳೆ ಬರುತ್ತಿತ್ತು. ಹೀಗಾಗಿ ವಿಧಿ ಇಲ್ಲದೆ ಒಳಗೆ ಬಂದೆ.


ಮತ್ತಷ್ಟು ಜೋಕುಗಳಿಗೆ ಕ್ಲಿಕ್ ಮಾಡಿ