ಮುಖಪುಟ /ಗಾದೆ

ವೇದ ಸುಳ್ಳಾದರೂ ಗಾದೆ ಸುಳ್ಳಾಗಲ್ಲ..

ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಅಂತಾರೆ. ಮಾತಿನ ಮಧ್ಯೆ ಗಾದೆ ಸೇರಿಸಿ ಮಾತನಾಡಿದರೆ ಅದರ ಗಮ್ಮತ್ತೇ ಬೇರೆ. ಕೆಲವರಿಗೆ ಗಾದೆ ಬಳಸದೆ ಮಾತನಾಡುವುದಕ್ಕೆ ಬರುವುದಿಲ್ಲ. ಸೂಕ್ತವಾದ ಗಾದೆ ನೆನಪಾಗದಿದ್ದಾಗ ಅದೇನೋ ಹೇಳ್ತಾರಲ್ಲ ಹಾಗೆ ಅನ್ನುವ ಸಾರ್ವಕಾಲಿಕ ಗಾದೆ ಬಳಸುತ್ತಾರೆ.
ಗಾದೆಗಳು ಅನುಭವದಿಂದ ಹುಟ್ಟಿದವು. ಹೀಗಾಗಿ ಅವು ಬದುಕಿಗೆ ತುಂಬಾ ಹತ್ತಿರವಾಗಿರುತ್ತವೆ. ಒಂದೊಂದು ಗಾದೆಗೂ ಒಂದು ಅರ್ಥವಿದ್ದರೆ, ಅದರಲ್ಲಿ ಗೂಡಾರ್ಥವೂ ಅಡಗಿರುತ್ತದೆ. ನೂರಾರು ಸಾವಿರಾರು ಪ್ರಸಂಗಗಳಲ್ಲಿ ಒಂದೇ ಗಾದೆ ಬಳಕೆಗೆ ಬರುತ್ತದೆ. ಸಾವಿರ ಪದಗಳಲ್ಲಿ ವರ್ಣಿಸಲಾಗದ್ದನ್ನು ಕೇವಲ ಒಂದೇ ಒಂದು ಗಾದೆ ಬಿಂಬಿಸಿಬಿಡುತ್ತದೆ.
ಈ ಅಂಕಣದಲ್ಲಿ  ಗಾದೆ. ಆ ಗಾದೆಯ ಅರ್ಥ ಅದಕ್ಕೊಂದು ರಸವತ್ತಾದ ಪ್ರಸಂಗ.. ಅದು ನಿಮಗಾಗಿ...


ಅಜ್ಜಿ ಕೋಳಿ ಕೂಗಿದ್ರೇನೇ ಬೆಳಗಾಗೋದಂತೆ...
ಕಳೆದ ಹೋದ ಹೊತ್ತು, ಒಡೆದ ಮುತ್ತು ಮರಳಿ ಬಾರದು
ಕೂತು ತಿನ್ನುವವನಿಗೆ ಕುಡಿಕೆ ಹೊನ್ನೂ ಸಾಲದು
ಅತಿ ಆಸೆ ಗತಿ ಕೇಡು - ಚಿನ್ನದ ಮೊಟ್ಟೆ ಇಡುವ ಕೋಳಿ..
 


ಮುಖಪುಟ /ಗಾದೆ