ಮುಖಪುಟ /ಗಾದೆ

ಗಾದೆ : ಅತಿ ಆಸೆ ಗತಿ ಕೇಡು...

ಇದು ಅತ್ಯಂತ ಜನಪ್ರಿಯ ಗಾದೆ. ಬದುಕಿನಲ್ಲಿ ಒಂದು ಆಸೆ ಇರಬೇಕು. ಆಸೆ ಇಲ್ಲದ ಮನುಷ್ಯನಿಲ್ಲ. ಆದರೆ ಅತಿ ಆಸೆ ಪಟ್ಟರೆ ಅದು ದುಃಖಕ್ಕೆ ಮೂಲವಾಗುತ್ತದೆ. ನಮ್ಮನ್ನೇ ಹಾಳು ಮಾಡುತ್ತದೆ ಎಂಬುದು ಇದರ ಅರ್ಥ.
ಈ ಗಾದೆ ಕೇಳಿದೊಡನೆ ನೆನಪಿಗೆ ಬರುವುದು. ಬಂಗಾರದ ಮೊಟ್ಟೆ ಇಡುವ ಕೋಳಿಯ ಕಥೆ.
ಒಂದೂರಿನಲ್ಲೊಬ್ಬನಿದ್ದ. ಆತನ ಬಳಿ ಒಂದು ಮಹಿಮಾನ್ವಿತ ಕೋಳಿಯಿತ್ತು. ಆ ಕೋಳಿ ದಿನವೂ ಒಂದು ಬಂಗಾರದ ಪುಟ್ಟ ಮೊಟ್ಟೆ ಇಡುತ್ತಿತ್ತು. ಆತ ಅದನ್ನು ಚಿನ್ನಾಬೆಳ್ಳಿ ಅಂಗಡಿಯಲ್ಲಿ ಮಾರಾಟ ಮಾಡಿ ಜೀವನ ಮಾಡುತ್ತಿದ್ದ. ಒಮ್ಮೆ ಅವನಿಗೆ ಅತಿಯಾದ ಆಸೆ ಮೂಡಿತು. ಅಲ್ಲ ದಿನಕ್ಕೆ ಒಂದೇ ಒಂದು ಮೊಟ್ಟೆ ಪಡೆದು, ಮಾರಿದರೆ ಹೊಟ್ಟೆ ಮಾತ್ರ ತುಂಬತ್ತೆ ಅದೇ ಒಂದೇ ಬಾರಿ ಈ ಕೊಳೆಯ ಹೊಟ್ಟೆಯಲ್ಲಿರುವ ಮೊಟ್ಟೆಯನ್ನೆಲ್ಲಾ ತೆಗೆದುಕೊಂಡರೆ, ನಾನು ಶ್ರೀಮಂತನಾಗುತ್ತೇನೆಂದು ಕೋಳಿಯನ್ನು ಕೊಯ್ದ. ಕೋಳಿ ಸತ್ತು ಹೋಯಿತು. ಅದರ ಹೊಟ್ಟೆಯಲ್ಲಿ ಮೊಟ್ಟೆಯೇ ಇರಲಿಲ್ಲ. ಅತಿ ಆಸೆ ಪಟ್ಟಿದ್ದಕ್ಕೆ ಆತ ನಿತ್ಯ ಸಿಗುತ್ತಿದ್ದ ಮೊಟ್ಟೆ ಕಳೆದುಕೊಂಡು ಕಂಗಾಲಾದ.
 


ಮುಖಪುಟ /ಇನ್ನೂ ಹೆಚ್ಚಿನ ಗಾದೆ ಕತೆಗೆ ಕ್ಲಿಕ್ ಮಾಡಿ