ಮುಖಪುಟ /ನಮ್ಮಹಬ್ಬಗಳು    

ಮಹಾಶಿವರಾತ್ರಿಯ ಜಾಗರಣೆಯೂ.. ವ್ರತಾಚರಣೆಯೂ..
ಶಿವ ಲಿಂಗರೂಪದಲ್ಲಿ ಆವಿರ್ಭವಿಸಿದ ದಿನವೇ ಮಹಾ ಶಿವರಾತ್ರಿಯಂತೆ


*ಟಿ.ಎಂ. ಸತೀಶ್ (Satish Turuvekere)
Shiva Linga, Maha Shivaratri, Article on Maha Shivaratri, Festivals of Karnataka, T.M. Satish, Satish Turuvekere, Satish, T.M. ಸತೀಶ್ ಟಿ.ಎಂ. ತುರುವೇಕೆರೆ ಸತೀಶ್, ಶಿವರಾತ್ರಿ ಹಬ್ಬ, ಹಬ್ಬಗಳು, ನಮ್ಮ ಹಬ್ಬಗಳು, ಶಿವರಾತ್ರಿ ಜಾಗರಣೆ, ಉಪವಾಸ ..ವಿಷ್ಣುಭಕ್ತರಿಗೆ ವೈಕುಂಠ ಏಕಾದಶಿಯಾದರೆ, ಶಿವಭಕ್ತರಿಗೆ ಮಹಾ ಶಿವರಾತ್ರಿ ಎಂಬುದು ಜನಜನಿತ ಮಾತು. ಪ್ರತಿ ತಿಂಗಳೂ ಬಹುಳ ಚತುರ್ದಶಿಯಂದು ಮಾಸ ಶಿವರಾತ್ರಿ ಆಚರಿಸಲಾಗುತ್ತದೆ. ಆದರೆ ಮಾಘ ಮಾಸದ ಬಹುಳ (ಕೃಷ್ಣ ಪಕ್ಷ) ಚತುರ್ದಶಿಯಂದು ಮಹಾ ಶಿವರಾತ್ರಿ ಎಂದು ಭಕ್ತಿ ಭಾವದಿಂದ ಆಚರಿಸಲಾಗುತ್ತದೆ.
ಮಾಘ ಬಹುಳ ಚತುರ್ದಶಿಯಂದೇ ಮಹಾ ಶಿವರಾತ್ರಿ ಎಂದು ಏಕೆ ಆಚರಿಸುತ್ತಾರೆ ಎಂಬ ಪ್ರಶ್ನೆ. ಸಹಜ. ಈ ಪವಿತ್ರ ದಿನದ ಮಧ್ಯರಾತ್ರಿಯಲ್ಲಿ ಶಿವ ಲಿಂಗರೂಪದಲ್ಲಿ ಆವಿರ್ಭವಿಸಿದನಂತೆ. ಇದನ್ನು ಶಿವಯೋಗ ಎಂದೂ ಕರೆಯಲಾಗುತ್ತದೆ. ಹೀಗಾಗಿಯೇ ಶಿವನನ್ನು ಇಡೀ ರಾತ್ರಿ ಪೂಜಿಸುವ ಆಚರಣೆ ಬಂದಿದೆ.
ಹಿಂದೂಗಳಿಗೆ ಅದರಲ್ಲೂ ಶಿವಭಕ್ತರಿಗೆ ಮಹಾ ಶಿವರಾತ್ರಿ ಉಪವಾಸದ ದಿನವಾದರೂ ಅಂದು ಹಬ್ಬದ ಸಡಗರ ಮನೆ ಮಾಡುತ್ತದೆ. ಅಂದು ಪ್ರಾತಃಕಾಲದಲ್ಲಿಯೇ ಎದ್ದು, ಸ್ನಾನ ಮಾಡಿ, ಮಡಿ ವಸ್ತ್ರ ತೊಟ್ಟು, ಉಪವಾಸವಿದ್ದು, ಶಿವದೇವಾಲಯಗಳಿಗೆ ತೆರಳಿ, ಶಿವಾರ್ಚನೆ ಮಾಡಿದರೆ ಮತ್ತು ರಾತ್ರಿಯಿಡೀ ಜಾಗರಣೆ ಮಾಡಿ, ಎಲ್ಲ ಜಾವ(ಯಾಮ)ದಲ್ಲೂ ಶಿವ ದೇವಾಲಯದಲ್ಲಿ ಆಗಲೀ ಇಲ್ಲವೇ ಸ್ವಗೃಹದಲ್ಲಿಯೇ ಆಗಲಿ ಶಿವನ ಪೂಜೆ ಮಾಡಿದರೆ ಎಲ್ಲ ಕಷ್ಟುಗಳೂ ಪರಿಹಾರವಾಗಿ ಸುಖ, ಶಾಂತಿ, ಸಂಪತ್ತು ಲಭಿಸುತ್ತದೆ, ಮಿಗಿಲಾಗಿ ಸಪ್ತಜನ್ಮಗಳಲ್ಲಿ ಮಾಡಿದ ಪಾಪ ಪರಿಹಾರವಾಗುತ್ತದೆ ಎಂಬುದು ಪ್ರತೀತಿ.
Shiva Linga, Maha Shivaratri, Article on Maha Shivaratri, Festivals of Karnataka, T.M. Satish, Satish Turuvekere, Satish, T.M. ಸತೀಶ್ ಟಿ.ಎಂ. ತುರುವೇಕೆರೆ ಸತೀಶ್, ಶಿವರಾತ್ರಿ ಹಬ್ಬ, ಹಬ್ಬಗಳು, ನಮ್ಮ ಹಬ್ಬಗಳು, ಶಿವರಾತ್ರಿ ಜಾಗರಣೆ, ಉಪವಾಸ ..ಶಿವನಿಗೆ ಭಕ್ತವತ್ಸಲ ಎಂಬ ಬಿರುದಿದೆ. ಕೇವಲ ಜಲ ಮಾತ್ರದಿಂದ ಅಭಿಷೇಕ ಮಾಡಿದರೂ ಶಿವ ಒಲಿಯುತ್ತಾನೆ ಹೀಗಾಗಿಯೇ ಶಿವನಿಗೆ ಅಭಿಷೇಕಪ್ರಿಯ ಎಂಬ ಹೆಸರೂ ಇದೆ. ಇನ್ನು ಪವಿತ್ರ ಪಂಚಾಕ್ಷರಿ ಮಂತ್ರ (ನಮಃ ಶಿವಾಯ) ಅಥವಾ ಷಡಕ್ಷರಿ ಮಂತ್ರ (ಓಂ ನಮಃಶಿವಾಯ) ಎಂದು ಭಕ್ತಿಯಿಂದು ಜಪಿಸಿದರೂ ಸಾಕು ಶಿವ ಪ್ರತ್ಯಕ್ಷನಾಗಿ ಕೇಳಿದ ವರವನ್ನು ದಯಪಾಲಿಸುತ್ತಾನೆ ಎಂದು ಪುರಾಣಗಳು ಹೇಳುತ್ತವೆ.
ಶಿವ ಬೇಡಿದ್ದನ್ನು ನೀಡುವ ಕರುಣಾಮಯಿ. ರಾವಣನ ಭಕ್ತಿಗೆ ಮೆಚ್ಚಿ ಮೊದಲಿಗೆ ತನ್ನ ಮಡದಿ ಪಾರ್ವತಿಯನ್ನು ನಂತರ ತನ್ನ ಆತ್ಮಲಿಂಗವನ್ನೇ ಕೊಟ್ಟ ಶಿವ, ಅಲ್ಪಾಯುವಾದ ಮಾರ್ಕಂಡೇಯನ ಭಕ್ತಿಗೆ ಮೆಚ್ಚಿ, ಯಮನನ್ನೂ ಯಮ ನಿಯಮವನ್ನೂ ಧಿಕ್ಕರಿಸಿ ಚಿರಂಜೀವಿಯಾಗಿ ಮಾಡಿದ.
ನಾದ, ವೇದ, ಪೂಜೆ, ತಂತ್ರ, ಮಂತ್ರ ಇದಾವುದೂ ಶಿವನಿಗೆ ಬೇಡ. ಭಕ್ತಿಗಷ್ಟೇ ಶಿವ ಪರವಶವಾಗುತ್ತಾನೆ ಎಂಬುದಕ್ಕೆ ಬೇಡರ ಕಣ್ಣಪ್ಪನ ಕಥೆಯೇ ಸಾಕ್ಷಿ. ಇನ್ನು ಕೋಳೂರ ಕೊಡಗೂಸು ಭಕ್ತಿಯಿಂದ ನೀಡಿದ ನೈವೇದ್ಯವನ್ನೇ ತಿಂದವ ಶಿವ. ಶಿವಭಕ್ತ ಸಿರಿಯಾಳನಿಗೂ ಒಲಿದ ಶಿವ ತನ್ನ ಭಕ್ತರನ್ನು ಹೆಚ್ಚು ಸತಾಯಿಸದೆ, ಅನುಗ್ರಹ ಮಾಡುತ್ತಾನೆ ಹೀಗಾಗಿಯೇ ಶಿವ ಭಕ್ತ ಪರಾಧೀನ ಎಂದೂ ಹೇಳುತ್ತಾರೆ.
ಹೀಗಾಗಿಯೇ ಶಿವನಿಗೆ ಪರಮ ಪವಿತ್ರವಾದ ಮಹಾ ಶಿವರಾತ್ರಿಯ ದಿನದಂದು ಉಪಾಸವಿದ್ದು, ಜಾಗರಣೆ ಮಾಡಿ ನಾಲ್ಕೂ ಯಾಮಗಳಲ್ಲಿ ಶಿವಪಾರಾಯಣ ಮಾಡಿ ಶಿವನಿಗೆ ಅಭಿಷೇಕ ಮಾಡಬೇಕು ಎಂದು ಶಿವರಾತ್ರಿಯ ವ್ರತಾಚರಣೆಯಲ್ಲಿ ತಿಳಿಸಲಾಗಿದೆ.
Shiva Linga, Maha Shivaratri, Article on Maha Shivaratri, Festivals of Karnataka, T.M. Satish, Satish Turuvekere, Satish, T.M. ಸತೀಶ್ ಟಿ.ಎಂ. ತುರುವೇಕೆರೆ ಸತೀಶ್, ಶಿವರಾತ್ರಿ ಹಬ್ಬ, ಹಬ್ಬಗಳು, ನಮ್ಮ ಹಬ್ಬಗಳು, ಶಿವರಾತ್ರಿ ಜಾಗರಣೆ, ಉಪವಾಸ ..ಶಿವರಾತ್ರಿಯನ್ನು ವ್ರತರೂಪದಲ್ಲಿ ಆಚರಿಸುವ ಸಂಪ್ರದಾಯವೂ ಇದೆ. ಅಂದು ಸೂರ್ಯಾಸ್ತದ ಬಳಿಕ ಮಾರನೇ ಬೆಳಗ್ಗೆ ಸೂರ್ಯೋದಯದವರೆಗೆ ನಾಲ್ಕು ಯಾಮದಲ್ಲಿ ಅಂದರೆ, ರಾತ್ರಿ 6ರಿಂದ 9ಗಂಟೆಗೆ ವರೆಗೆ ಮೊದಲ ಯಾಮವೆಂದೂ, ರಾತ್ರಿ 11ರಿಂದ ಮಧ್ಯರಾತ್ರಿ 12.30ರವರೆಗೆ ಎರಡನೇ ಯಾಮವೆಂದೂ, ನಸುಕಿನ 2.30ರಿಂದ 3.30ರವರೆಗೆ 3ನೇ ಯಾಮವೆಂದೂ, ಬೆಳಗಿನ ಜಾವ 4.30ರಿಂದ 6ಗಂಟೆಯತನಕ ನಾಲ್ಕನೇ ಯಾಮವೆಂದೂ ಹೇಳಲಾಗುತ್ತದೆ.
ಈ ನಾಲ್ಕೂ ಯಾಮಗಳ ಪೈಕಿ ಮೊದಲ ಯಾಮದಲ್ಲಿ ಶಿವ ಎಂಬ ಹೆಸರಿನಿಂದಲೂ, ಎರಡನೇ ಯಾಮದಲ್ಲಿ ಶಂಕರ ಎಂಬ ನಾಮದಿಂದಲೂ, ಮೂರನೇ ಯಾಮದಲ್ಲಿ ಮಹೇಶ್ವರ ಎಂಬ ನಾಮಾಂಕಿತದಿಂದಲೂ ಹಾಗೂ ಕೊನೆಯ ಹಾಗೂ ನಾಲ್ಕನೇ ಯಾಮದಲ್ಲಿ ರುದ್ರ ಎಂಬ ಹೆಸರಿನಿಂದಲೂ ಪರಮ ಪವಿತ್ರವಾದ ಶಿವಲಿಂಗವನ್ನು ಅಭಿಷೇಕ, ಅಲಂಕಾರ, ಧೂಪ ದೀಪಗಳಿಂದ ಪೂಜಿಸಿ, ಬೆಳಗ್ಗೆ ಸೂರ್ಯೋದಯ ಕಾಲದಲ್ಲಿ ಎಂದಿನಂತೆ ಅರ್ಘ್ಯ ಪ್ರದಾನ ಮಾಡಲಾಗುತ್ತದೆ.
ಶಿವರಾತ್ರಿ ಅಲಂಕಾರ Shiva Linga, Maha Shivaratri, Article on Maha Shivaratri, Festivals of Karnataka, T.M. Satish, Satish Turuvekere, Satish, T.M. ಸತೀಶ್ ಟಿ.ಎಂ. ತುರುವೇಕೆರೆ ಸತೀಶ್, ಶಿವರಾತ್ರಿ ಹಬ್ಬ, ಹಬ್ಬಗಳು, ನಮ್ಮ ಹಬ್ಬಗಳು, ಶಿವರಾತ್ರಿ ಜಾಗರಣೆ, ಉಪವಾಸ ..ಶಿವರಾತ್ರಿಯಂದು ಉಪವಾಸವಿದ್ದು ವ್ರತಾಚರಣೆ ಮಾಡಿದರೆ, ಒಂದು ಸಾವಿರ ಏಕಾದಶಿ ಉಪವಾಸದ ಫಲ ದೊರಕುತ್ತದೆ ಎಂದೂ ಹೇಳಲಾಗುತ್ತದೆ. ಹೀಗಾಗಿಯೇ ಅಂದು ಕಥಾ ಕಾಲಕ್ಷೇಪ, ಶಿವಪುರಾಣ ಪಾರಾಯಣವೇ ಮೊದಲಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಎಲ್ಲ ಶಿವ ದೇವಾಲಯಗಳಲ್ಲೂ ಅಂದು ರಾತ್ರಿಯಿಡೀ ಗಂಗಾಜಲಾಭಿಷೇಕ, ಪಂಚಾಮೃತ ಅಭಿಷೇಕ ನಡೆಯುತ್ತದೆ, ಗೋರೋಚನ, ವಿಭೂತಿ ಹಾಗೂ ರುದ್ರಾಕ್ಷಿ ಮಾಲೆಯಿಂದ ಶಿವಲಿಂಗವನ್ನು ಅಲಂಕರಿಸಲಾಗುತ್ತದೆ. ಪುಷ್ಪಗಳಿಂದ ಹಾಗೂ ಬಿಲ್ವಪತ್ರೆಯಿಂದ ವಿಶೇಷ ಅಲಂಕಾರದೊಂದಿಗೆ, ಪೂಜಾ ಕೈಂಕರ್ಯಗಳು ನಡೆಯುತ್ತವೆ. ಮಹಾ ಶಿವರಾತ್ರಿಯಂದು ಬಿಲ್ವಪತ್ರೆಯನ್ನು ಶಿವಲಿಂಗದ ಮೇಲಿಟ್ಟು ಪೂಜಿಸಿದರೆ, ಯಾಗ ಮಾಡಿದ ಫಲ ದೊರೆಯುತ್ತದೆ ಎಂದೂ ಹಿರಿಯರು ಹೇಳುತ್ತಾರೆ.
ಮಾಘ ಬಹುಳ ಚತುರ್ದಶಿಯ ರಾತ್ರಿಯೇ ಶಿವ ಪಾರ್ವತಿಯನ್ನು ವರಿಸಿದ್ದಂತೆ. ಹೀಗಾಗಿ ಅಂದು ರಾತ್ರಿ ದೇವಾನು ದೇವತೆಗಳೆಲ್ಲರೂ ಜಾಗರಣೆ ಮಾಡಿ, ಗಿರಿಜಾ ಕಲ್ಯಾಣ ವೀಕ್ಷಿಸಿ, ಶಿವಪಾರ್ವತಿಯರಿಬ್ಬರನ್ನೂ ಪೂಜಿಸಿದರಂತೆ. ಹೀಗಾಗಿಯೇ ಜಾಗರಣೆ ಪದ್ಧತಿ ಆಚರಣೆಗೆ ಬಂದಿದೆ ಎಂದೂ ಪರಮ ಭಕ್ತನಾದ ಬೇಡರ ಕಣ್ಣಪ್ಪ ಅಂದು ರಾತ್ರಿಯಿಡೀ ಬಿಲ್ವಪತ್ರೆಯ ಮರದ ಮೇಲೆ ಕುಳಿತು ಕಾಲ ಕಳೆಯಲು ಮರದಿಂದ ಒಂದೊಂದೆ ಬಿಲ್ವಪತ್ರೆಯ ದಳಗಳನ್ನು ಕಿತ್ತು ಎಸೆಯುತ್ತಿದ್ದನಂತೆ. ಅದು ಅವನಿಗೆ ಅರಿವಿಲ್ಲದೆಯೇ ಮರದ ಕೆಳಗೆ ಇದ್ದ ಶಿವಲಿಂಗಕ್ಕೆ ಬಂದು ಬಿದ್ದಿದಂತೆ. ರಾತ್ರಿಯಿಡೀ ಪವಿತ್ರ ಬಿಲ್ವಪತ್ರೆಯಿಂದ ತನ್ನನ್ನು ಪೂಜಿಸಿದ ಬೇಡರ ಕಣ್ಣಪ್ಪನಿಗೆ ಶಿವ ಮೋಕ್ಷವನ್ನೇ ಕರುಣಿಸಿದ. ಹೀಗಾಗಿ ಜಾಗರಣೆಯ ಪದ್ಧತಿ ರೂಢಿಗೆ ಬಂದಿದೆ ಎಂದೂ ಹೇಳಲಾಗುತ್ತದೆ.
Shiva Linga, Maha Shivaratri, Article on Maha Shivaratri, Festivals of Karnataka, T.M. Satish, Satish Turuvekere, Satish, T.M. ಸತೀಶ್ ಟಿ.ಎಂ. ತುರುವೇಕೆರೆ ಸತೀಶ್, ಶಿವರಾತ್ರಿ ಹಬ್ಬ, ಹಬ್ಬಗಳು, ನಮ್ಮ ಹಬ್ಬಗಳು, ಶಿವರಾತ್ರಿ ಜಾಗರಣೆ, ಉಪವಾಸ ..ಆದರೆ ಇಂದು ಜಾಗರಣೆ ಎಂಬುದು ಒಂದು ಮೋಜಾಗಿ ಹೋಗಿದೆ. ಕೆಲವರು ಜಾಗರಣೆ ಹೆಸರಲ್ಲಿ ಹೊನಲು ಬೆಳಕಿನ ಆಟೋಟ ಪಂದ್ಯಗಳನ್ನು ಏರ್ಪಡಿಸಿದರೆ, ಮತ್ತೆ ಕೆಲವರು ರಾತ್ರಿಯಿಡೀ ಇಸ್ಪೀಟ್ ಆಡಿ ಕಾಲ ಕಳೆಯುತ್ತಾರೆ. ಇನ್ನು ಕೆಲವು ಸಂಘ ಸಂಸ್ಥೆಗಳು ನಗೆ ಜಾಗರಣೆ, ಸಂಗೀತ ರಸಮಂಜರಿ ಇತ್ಯಾದಿ ಕಾರ್ಯಕ್ರಮ ಏರ್ಪಡಿಸುತ್ತವೆ. ಧಾರ್ಮಿಕ ಆಚರಣೆಯಾಗಿದ್ದ ಶಿವರಾತ್ರಿ ಇಂದು ಲೌಕಿಕದ ಸುಳಿಗೆ ಸಿಕ್ಕಿ ಮೋಜಿನ ಆಚರಣೆ ಆಗಿರುವುದು ನಿಜಕ್ಕೂ ಎಲ್ಲರೂ ಚಿಂತಿಸಬೇಕಾದ ವಿಚಾರ. 
(© Kannadaratna)

ಮುಖಪುಟ /ನಮ್ಮಹಬ್ಬಗಳು