ಮುಖಪುಟ /ನಮ್ಮಹಬ್ಬಗಳು    

ಶಿವರಾತ್ರಿಗೆ ದೀಕ್ಷಿತರ ಕೊಡುಗೆ ಕನ್ನಡ ಕಾಲಭೈರವಾಷ್ಟಕಂ
 
ಶ್ರೀ ಆದಿ ಶಂಕರಾಚಾರ್ಯ ವಿರಚಿತ ಶ್ರೀಕಾಲಭೈರವಾಷ್ಟಕಂ ಎಂಬ ಪಂಚಾಮೃತವನ್ನು ಶಿವರಾತ್ರಿಯ ಸಂದರ್ಭದಲ್ಲಿ ವಿಶ್ವೇಶ್ವರ ದೀಕ್ಷಿತರು ಕನ್ನಡದಲ್ಲಿ ಉಣಬಡಿಸಿದ್ದಾರೆ.

ಶ್ರೀ ಕಾಲಭೈರವಾಷ್ಟಕಂ
*ಶ್ರೀ ಶಂಕರಾಚಾರ್ಯ

ದೇವರಾಜಸೇವ್ಯಮಾನಪಾವನಾಂಘ್ರಿಪಂಕಜಂ
ವ್ಯಾಲಯಜ್ಞಸೂತ್ರಮಿಂದುಶೇಖರಂ ಕೃಪಾಕರಮ್
ನಾರದಾದಿಯೋಗಿವೃಂದವಂದಿತಂ ದಿಗಂಬರಂ
ಕಾಶಿಕಾಪುರಾನಾಥಕಾಲಭೈರವಂ ಭಜೇ        (೧)
ಭಾನುಕೋಟಿಭಾಸ್ವರಂ ಭವಾಬ್ಧಿತಾರಕಂ ಪರಂ
ನೀಲಕಂಠಮೀಪ್ಸಿತಾರ್ಥದಾಯಕಂ ತ್ರಿಲೋಚನಮ್
ಕಾಲಕಾಲಮಂಬುಜಾಕ್ಷಮಕ್ಷಶೂಲಮಕ್ಷರಂ
ಕಾಶಿಕಾಪುರಾನಾಥಕಾಲಭೈರವಂ ಭಜೇ        (೨)
ಶೂಲಟಂಕಪಾಶದಂಡಪಾಣಿಮಾದಿಕಾರಣಂ

ಶ್ಯಾಮಕಾಯಮಾದಿದೇವಮಕ್ಷರಂ ನಿರಾಮಯಮ್
ಭೀಮವಿಕ್ರಮಂ ಪ್ರಭುಂ ವಿಚಿತ್ರತಾಂಡವಪ್ರಿಯಂ
ಕಾಶಿಕಾಪುರಾನಾಥಕಾಲಭೈರವಂ ಭಜೇ        (೩)
ಭುಕ್ತಿಮುಕ್ತಿದಾಯಕಂ ಪ್ರಶಸ್ತಚಾರುವಿಗ್ರಹಂ
ಭಕ್ತವತ್ಸಲಂ ಸ್ಥಿತಂ ಸಮಸ್ತಲೋಕವಿಗ್ರಹಮ್
ನಿಕ್ವಣನ್ಮನೋಜ್ಞಹೇಮಕಿಂಕಿಣೀಲಸತ್ಕಟಿಂ
ಕಾಶಿಕಾಪುರಾನಾಥಕಾಲಭೈರವಂ ಭಜೇ        (೪)
ಧರ್ಮಸೇತುಪಾಲಕಂ ತ್ವಧರ್ಮಮಾರ್ಗನಾಶನಂ
ಕರ್ಮಪಾಶಮೋಚಕಂ ಸುಶರ್ಮದಾಯಕಂ ವಿಭುಮ್
ಸ್ವರ್ಣವರ್ಣಶೇಷಪಾಶಶೋಭಿತಾಂಗಮಂಡಲಮ್
ಕಾಶಿಕಾಪುರಾನಾಥಕಾಲಭೈರವಂ ಭಜೇ        (೫)
ರತ್ನಪಾದುಕಾಪ್ರಭಾಭಿರಾಮಪಾದಯುಗ್ಮಕಂ
ನಿತ್ಯಮದ್ವಿತೀಯಮಿಷ್ಟದೈವತಂ ನಿರಂಜನಮ್
ಮೃತ್ಯುದರ್ಪನಾಶನಂ ಕರಾಲದಂಷ್ಟ್ರಮೋಕ್ಷಣಂ
ಕಾಶಿಕಾಪುರಾನಾಥಕಾಲಭೈರವಂ ಭಜೇ        (೬)
ಅಟ್ಟಹಾಸಭಿನ್ನಪದ್ಮಜಾಂಡಕೋಶಸಂತತಿಂ
ದೃಷ್ಟಿಪಾತ್ತನಷ್ಟಪಾಪಜಾಲಮುಗ್ರಶಾಸನಮ್
ಅಷ್ಟಸಿದ್ಧಿದಾಯಕಂ ಕಪಾಲಮಾಲಿಕಾಧರಂ
ಕಾಶಿಕಾಪುರಾನಾಥಕಾಲಭೈರವಂ ಭಜೇ        (೭)
ಭೂತಸಂಘನಾಯಕಂ ವಿಶಾಲಕೀರ್ತಿದಾಯಕಂ
ಕಾಶಿವಾಸಲೋಕಪುಣ್ಯಪಾಪಶೋಧಕಂ ವಿಭುಮ್
ನೀತಿಮಾರ್ಗಕೋವಿದಂ ಪುರಾತನಂ ಜಗತ್ಪತಿಂ
ಕಾಶಿಕಾಪುರಾನಾಥಕಾಲಭೈರವಂ ಭಜೇ        (೮)

ಶ್ರೀ ಕಾಲ ಭೈರವ
*(ಕನ್ನಡಕ್ಕೆ ವಿಶ್ವೇಶ್ವರ ದೀಕ್ಷಿತ)
ಇಂದ್ರ ನಮಿಪ ಪುಣ್ಯ ಈವ ಪಾದ ಕಮಲ ನಿನ್ನವಲ್ತೆ
?
ಹಾವುರಾಯ ಜನ್ನಿವಾರ
, ಎಂಟು ದಿಕ್ಕು ನಿನ್ನ ಬಟ್ಟೆ!
ಚಂದ್ರ ಹೊಳೆವ ಜಡೆಯ ಮುಡಿಯ
, ಅಳವು ಇರದ ಕರುಣೆ ಎರೆವ,
ಕಾಶಿ ಪುರದ ಎರೆಯ ಭಜಿಪೆ ನಿನ್ನ
, ಕಾಲ ಭೈರವ.     (೧)
ಬಾಳ ಕಡಲು ಪಾರುಗೊಳಿಪ
, ಕೋಟಿ ದಿನಪ ಹೊಳಪಿನವನೆ,
ಬಯಕೆಗಳನು ಪೂರ್ತಿಗೊಳಿಪ
, ಗರಳಕೊರಳ, ಮೂರು ಕಣ್ಣ,
ತಿಸುಳ ಹಿಡಿದ
, ಕಮಲ ಕಣ್ಣ, ಅಳಿವು ಇರದ, ಯಮಗೆ ಯಮನೆ,
ಕಾಶಿ ಪುರದ ಎರೆಯ
, ಭಜಿಪೆ ನಿನ್ನ, ಕಾಲ ಭೈರವ.     (೨)
ಈಟಿ
, ಹಗ್ಗ, ಕೋಲು, ಕೊಡಲಿ ಹಿಡಿದ ನೀನು ಮೊದಲ ನೆರನು;
ಕಸರು ಇರದ
, ಕಪ್ಪು ಮೆಯ, ಅಳಿವು ಇರದ, ಮೊದಲ ದೇವ,
ಅಳುಕುಗೊಳಿಪ ಅಣ್ಮು ನಿನಗೆ
; ತಾಂಡವಾದಿ ನಿನ್ನ ಕುಣಿತ; ಒಡೆಯ,
ಕಾಶಿ ಪುರದ ಎರೆಯ
, ಭಜಿಪೆ ನಿನ್ನ, ಕಾಲ ಭೈರವ.     (೩)
ಬಿಡುಗೆ ಸೊಗಗಳನ್ನು ಕೊಡುವ
, ಮಿಗಿಲು ಚೆಲುವ ಒಳಿತು ಮೆಯ,
ಭಕುತರಲ್ಲಿ ಒಲುಮೆ ಇರುವ
, ನಿತ್ಯ, ಜಗವೆ ನಿನ್ನ ಕಾಯ;
ಮನಸು ಸೆಳೆವ ಸೊಂಟದಲ್ಲಿ ಇನಿದು ರವದ ಗೆಜ್ಜೆಪಟ್ಟಿ
;
ಕಾಶಿ ಪುರದ ಎರೆಯ
, ಭಜಿಪೆ ನಿನ್ನ, ಕಾಲ ಭೈರವ.     (೪)
ಧರ್ಮಸೆತುವನ್ನು ಕಾವ
, ಧರ್ಮವಲ್ಲದನ್ನು ಅಳಿವ,
ಕರ್ಮ ಕಟ್ಟು ಕಡಿದು
, ಒಡೆಯ, ಒಳಿತು ಸೊಗವನಿವ ದೇವ,
ಹೊನ್ನ ಬಣ್ಣ ಹಾವು ಬಿದ್ದು ಹೊಳೆಯುತಿರುವ ಚೆಲುವ ಮೆಯ
,
ಕಾಶಿ ಪುರದ ಎರೆಯ
, ಭಜಿಪೆ ನಿನ್ನ, ಕಾಲ ಭೈರವ.     (೫)
ರನ್ನ ಮೆಟ್ಟು ಹೊಳಪಿನಲ್ಲಿ ಮಿನುಗಿ ಮನಸು ಸೆಳೆವ ಪಾದ
;
ಮೊದಲು ಮುಗಿವು ಬೇರೆ ಇರದ ಒಬ್ಬ
, ಅಚ್ಚ, ಮೆಚ್ಚು ದೆವ,
ಸಾವ ಸೊಕ್ಕು ಇಳಿಸಿ ಅಳುಕು ದವಡೆಯಿಂದ ಉಳಿಸುವ್ವನೆ
,
ಕಾಶಿ ಪುರದ ಎರೆಯ
, ಭಜಿಪೆ ನಿನ್ನ, ಕಾಲ ಭೈರವ.     (೬)
ಗಟ್ಟಿ ವಿಕಟ ನಗುವಿನಿಂದ ಬೊಮ್ಮ ಮೊಟ್ಟೆಗಳನು ಒಡೆವ
,
ರುಂಡ ಮಾಲೆ ಧರಿಸಿಕೊಂಡ
, ದಿಟ್ಟಿ ಬಿಟ್ಟು ಕೆಡಕು ಕಳೆವ,
ಕರಣಗಳನು ಹಿಡಿದ ಯೋಗಿ
, ಎಂಟು ಸಿದ್ಧಿಗಳನು ಕೊಡುವ,
ಕಾಶಿ ಪುರದ ಎರೆಯ
, ಭಜಿಪೆ ನಿನ್ನ, ಕಾಲ ಭೈರವ.     (೭)
ಜೀವ ರಾಶಿಗಳಿಗೆ ಒಡೆಯ
, ಹಿರಿದು ಹೆಸರು ಹಸರುಗೊಳಿಪ,
ಕಾಶಿ ವಾಸಿ ಜನರ ಒಳಿತು-ಕೆಡಕುಗಳನು ಹಸನುಗೊಳಿಪ
,
ಒಳಿತು ನಡತೆ ತೋರುತಿರುವ
, ಹಳಬ, ಜಗದ ಒಡೆಯ, ದೇವ,
ಕಾಶಿ ಪುರದ ಎರೆಯ
, ಭಜಿಪೆ ನಿನ್ನ,
ಕಾಲ ಭೈರವ.     (೮)

 

ಮುಖಪುಟ /ನಮ್ಮಹಬ್ಬಗಳು