ಮುಖಪುಟ /ನಮ್ಮಹಬ್ಬಗಳು 

ಮೈಸೂರು ಒಡೆಯರ ದಸರಾ ಆಚರಣೆ

ದಸರಾ ಮೈಸೂರು ಒಡೆಯರ ಆಚರಣೆ, Mysore wodeyar Srikantadatta narasimha rajaruದಸರಾ ಹಬ್ಬವನ್ನು ಲೋಕಪ್ರಿಯಗೊಳಿಸಿದ್ದೇ ಮೈಸೂರು ಒಡೆಯರು. 2013ರವರೆಗೂ ಮೈಸೂರು ರಾಜ ಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಸಾಂಪ್ರದಾಯಿಕವಾಗಿ 10 ದಿನಗಳ ಕಾಲ ದಸರೆ ಆಚರಿಸುತ್ತಿದ್ದರು..

ಆಶ್ವಯುಜ ಪಾಡ್ಯದ ದಿನ ನಸುಕಿನಲ್ಲೇ ಎದ್ದು ಮಂಗಳ ಸ್ನಾನ ಮಾಡಿ, ಪತ್ನಿಯೊಡಗೂಡಿ ತಾಯಿ ಚಾಮುಂಡೇಶ್ವರಿಯ ಪೂಜಿಸಿ, ನವರಾತ್ರಿಯ ವ್ರತಕ್ಕಾಗಿ ಕಂಕಣ ತೊಡುತ್ತಿದ್ದರು. ಮಹಾಗಣಪತಿ ಪೂಜೆಯೊಂದಿಗೆ ಆರಂಭವಾಗುವ ಈ ವ್ರತದಲ್ಲಿ ಅಷ್ಟದಿಕ್ಪಾಲಕರನ್ನೂ ಪೂಜಿಸುತ್ತಿದ್ದರು. 2014ರಲ್ಲಿ  ಶ್ರೀಕಂಠದತ್ತ ನರಸಿಂಹರಾಜ ಒಡೆಯರು ನಮ್ಮೊಂದಿಗಿರಲಿಲ್ಲ. ಅರಸರಿಲ್ಲದ ಅರಮನೆಯಲ್ಲೂ ರಾಜರ ಅಗಲಿಕೆಯ ದುಃಖದ ನಡುವೆಯೂ ಸಾಂಪ್ರದಾಯಿಕ ಖಾಸಗಿ ದರಬಾರ್  ನಡೆದಿತ್ತು.

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ , ಮೈಸೂರು ರಾಜ ಮನೆತನ, ಮೈಸೂರು ದಸರಈ ಬಾರಿ ಅಂದರೆ 2015ರ ದಸರಾ ಮಹೋತ್ಸವಕ್ಕೆ ಹೊಸ ಕಳೆ ಬಂದಿದೆ. ರಾಣಿ (ರಾಜಮಾತೆ) ಪ್ರಮೋದಾ ದೇವಿ ಅವರು  ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಅಕ್ಕ ಗಾಯತ್ರೀದೇವಿ ರಾಮಚಂದ್ರರಾಜೇ ಅರಸ್ ಅವರ ಮೊಮ್ಮಗ ಯದುವೀರ್ ಅವರನ್ನು ದತ್ತು ಸ್ವೀಕರಿಸುವ ಮೂಲಕ ಮೈಸೂರು ಅರಸು ಮನೆತನಕ್ಕೆ ಯುವರಾಜನನ್ನು ತಂದಿದ್ದಾರೆ. ಫೆ.23ರಂದು ನಡೆದ ಸಮಾರಂಭದಲ್ಲಿ ವಿಧ್ಯುಕ್ತವಾಗಿ ದತ್ತು ಸ್ವೀಕರಿಸಿ, ತಮ್ಮ ಪುತ್ರನಿಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಎಂದು ಪುನರ್ ನಾಮಕರಣ ಮಾಡಿದ್ದಾರೆ.
ಯದುವೀರರ ಪಟ್ಟಾಭಿಷೇಕವೂ ವಿಧ್ಯುಕ್ತವಾಗಿ ನೆರವೇರಿದೆ. ಈ ಬಾರಿಯ ದಸರೆಯಲ್ಲಿ ಅವರೇ ಸಿಂಹಸನಾರೋಹಣ, ಆಯುಧಪೂಜೆ, ಬನ್ನಿಪೂಜೆ ಮಾಡಲಿದ್ದಾರೆ.

ಮೈಸೂರು ದಸರೆಯ ಮತ್ತೊಂದು ಆಕರ್ಷಣೆ ಬೊಂಬೆ ಕೂರಿಸುವುದು. ಅರಮನೆಯಲ್ಲೂ ಬೊಂಬೆಗಳನ್ನು ಕೂರಿಸಲಾಗುತ್ತದೆ. ಖಾಸಗಿ ದರ್ಬಾರ್‌ನಲ್ಲಿ ಮೈಸೂರು ಸಂಪ್ರದಾಯದ ಎಲ್ಲ ಆಚರಣೆಗಳೂ ಈ ಬಾರಿ ನಡೆಯಲಿವೆ.  ಇದೇ ಮಾದರಿಯ ಆಚರಣೆ ಮೈಸೂರು ಕಡೆಯವರ ಹಲವು ಮನೆಯಲ್ಲೂ ವಾಡಿಕೆಗೆ ಬಂದಿದೆ. ಮನೆಯಲ್ಲಿ ಬೊಂಬೆ ಕೂರಿಸಿ, 1೦ ದಿನಗಳ ಕಾಲ ದಸರೆ ಉತ್ಸವ ಆಚರಿಸುವ ಮಂದಿ ಹತ್ತೂ ದಿನವೂ ಹಬ್ಬದಡಿಗೆ ಮಾಡಿ ಸಂಭ್ರಮಿಸುತ್ತಾರೆ.

ಶಾರದೆ ಹಬ್ಬದ ದಿನ ಮನೆಯಲ್ಲಿರುವ ಓಲೆಗರಿ, ಶಾಲಾ ಪುಸ್ತಕಗಳನ್ನು ಒಪ್ಪ ಓರಣವಾಗಿ ಜೋಡಿಸಿಟ್ಟು, ಅದರ ಮೇಲೊಂದು ಕಳಶವಿಟ್ಟು ಸೀರೆ ಉಡಿಸಿ ಪೂಜಿಸಲಾಗುತ್ತದೆ. ದಶಮಿಯ ಆಚರಣೆಗೆ ಪುರಾಣಗಳ ಉಲ್ಲೇಖವೂ ಇದೆ. ದೇವತೆಗಳು ರಾಕ್ಷಸರನ್ನು ಕೊಂದ ವಿಜಯೋತ್ಸವ ಆಚರಿಸಿದ ಸಂಕೇತವಾಗಿ ಈ ಹಬ್ಬ ಆಚರಿಸಲಾಗುತ್ತದೆ. ದಾನವಶಕ್ತಿಯ ದಮನ ಮಾಡಲು ಶಕ್ತಿದೇವತೆಯಾದ ಚಾಮುಂಡೇಶ್ವರಿಯು 9 ದಿನಗಳ ಕಾಲ ಮುಕ್ಕೋಟಿ ದೇವಾನು ದೇವತೆಗಳ ಶಕ್ತಿಯನ್ನು ಧರಿಸಿ, ಸಿಂಹವಾಹಿನಿಯಾಗಿ ಈ ನವರಾತ್ರಿಯ ಕಾಲದಲ್ಲೇ ಮಹಿಷನ ಕೊಂದಿದ್ದು ಹೀಗಾಗಿ ಶಕ್ತಿದೇವತೆಯ ಆರಾಧನೆಗೂ ಈ ಹಬ್ಬದಲ್ಲಿ ವಿಶೇಷ ಮಹತ್ವ.

ಜೊತೆಗೆ ಲಂಕೆಯ ಮೇಲೆ ದಂಡೆತ್ತಿ ಹೋದ ಶ್ರೀರಾಮ ರಾವಣನ ಸಂಹರಿಸಿ, ವಿಜಯ ಸಾಸಿದ್ದೂ ದಶಮಿಯಂದೆ. ಹೀಗಾಗಿ ಈ ಆಶ್ವೀಜದ ಹತ್ತನೇ ದಿನಕ್ಕೆ ವಿಜಯದಶಮಿ ಎಂದೂ ಕರೆಯುತ್ತಾರೆ.

ಬೊಂಬೆ ಹಬ್ಬಈ ಎಲ್ಲವೂ ಬೊಂಬೆಗಳ ಪ್ರದರ್ಶನದಲ್ಲೂ ಪ್ರಕಟ. ಬೊಂಬೆ ಕೂರಿಸುವವರು, ಹನುಮದ್ ಸಮೇತನಾದ ಶ್ರೀರಾಮಚಂದ್ರ, ಲಕ್ಷಣ, ಸೀತೆಯರ ಬೊಂಬೆಗಳ ಜೊತೆ, ಚಾಮುಂಡೇಶ್ವರಿಯ ಬೊಂಬೆಯನ್ನೂ ಇಟ್ಟು ಪೂಜಿಸುತ್ತಾರೆ.

ಯುದ್ಧ ಹಾಗೂ ವಿಜಯವೇ ಈ ಹಬ್ಬದ ಸಡಗರ ಸಂಭ್ರಮಕ್ಕೆ ನಾಂದಿಯಾದ ಕಾರಣ ಬೊಂಬೆಗಳಲ್ಲಿ ಆನೆ, ಕುದುರೆ, ಪದಾದಿಯೇ ಮೊದಲಾದ ಚದುರಂಗ ಬಲವನ್ನು ಇಡುವುದೂ ಮೈಸೂರು ಕಡೆಯಲ್ಲಿ ವಾಡಿಕೆ. ಈ ಹಬ್ಬಗಳ ಸಾಲಿನಲ್ಲಿ ಶಸ್ತ್ರವಾಹನಾದಿಗಳನ್ನು ಪೂಜಿಸಲೆಂದೇ ವಿಶೇಷ ಆಚರಣೆಯಿದೆ.

ಆಯುಧಪೂಜೆಯ ದಿನ ಕರ್ನಾಟಕದಲ್ಲಿ ಬಹುತೇಕ ಎಲ್ಲರೂ ಮನೆಯಲ್ಲಿರುವ ವಾಹನಗಳನ್ನು ತೊಳೆದು, ಪೂಜಿಸಿ, ಬಾಳೆಯ ಕಂದು, ಮಾವಿನಸೊಪ್ಪು ಹಾಗೂ ಹೂವಿನಿಂದ ಅಲಂಕರಿಸುತ್ತಾರೆ.

ಯಂತ್ರ ಹಾಗೂ ಸ್ಪ್ಯಾನರ್ ಸಂಬಂ ಕೆಲಸಗಳು ನಡೆಯುವ ಕಾರ್ಖಾನೆ, ಅಂಗಡಿ, ಗ್ಯಾರೆಜ್‌ಗಳಲ್ಲಿ ಎಲ್ಲ ಯಂತ್ರ, ಸಲಕರಣೆಗಳನ್ನೂ ತೊಳೆದು, ಒರೆಸಿ, ಪೂಜಿಸುತ್ತಾರೆ. ಮನೆಗಳಲ್ಲಿ ಚಾಕು, ಕತ್ತರಿ ಇತ್ಯಾದಿ ಆಯುದ್ಧಗಳ್ನು ತೊಳೆದು ಬೊಂಬೆಗಳ ಪಕ್ಕದಲ್ಲೇ ಇಟ್ಟು ಪೂಜಿಸಲಾಗುತ್ತದೆ.

ರಾಮಾಯಣ ಮಹಾಭಾರತ ಕಾಲದಿಂದಲೂ ಈ ಹಬ್ಬ ಆಚರಣೆಯಲ್ಲಿತ್ತು ಎಂದು ಪುರಾಣಗಳು ಹೇಳುತ್ತವೆ. ಅeತ ವಾಸ ಕಾಲದಲ್ಲಿ ಬೃಹನ್ನಳೆಯ ವೇಷದಲ್ಲಿದ್ದ ಅರ್ಜುನನು ಬನ್ನಿ ಮರವನ್ನು ಪೂಜಿಸಿ ಅದರಲ್ಲಿ ಬಚ್ಚಿಟ್ಟಿದ್ದ ಆಯುಧಗಳನ್ನು ಪೂಜಿಸಿ, ಯುದ್ಧ ಮಾಡಿ ವಿಜಯ ಸಾಸಿದ. ಹೀಗಾಗೆ ವಿಜಯ ದಶಮಿಯ ದಿನ ಬನ್ನಿ ಮರಕ್ಕೆ ಪೂಜಿಸುವ ಮತ್ತುಬನ್ನಿ ಹಂಚುವ ಸಂಪ್ರದಾಯವೂ ಬೆಳೆದಿದೆ.

ದುರ್ಗಾಷ್ಟಮಿಯ ದಿನ ನಾಡದೇವಿ ಚಾಮುಂಡೇಶ್ವರಿಯ ಪ್ರೀತ್ಯರ್ಥ ವಿಶೇಷ ಪೂಜೆ ನಡೆಯುತ್ತದೆ. ಶರನ್ನವರಾತ್ರಿಯ ಒಂಬತ್ತೂ ದಿನ ದುರ್ಗೆಯ ಪೂಜೆ ನಡೆಯುತ್ತದೆ.

ವಿಜಯ ದಶಮಿ ಈ ಹಬ್ಬದ ಕೊನೆಯ ದಿನ. ಅಂದು ಸೀಮೋಲ್ಲಂಘನೆ ಮಾಡಬೇಕು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಹೀಗಾಗೆ ಮೈಸೂರಿನಲ್ಲಿ ಜಂಬೂಸವಾರಿ ಆಚರಣೆಗೆ ಬಂದಿದೆ. ಅಂದು ಮೈಸೂರು ಮಹಾರಾಜರು ತಮ್ಮ ಸೈನ್ಯ ಸಹಿತವಾಗಿ ಚಿನ್ನದಂಬಾರಿಯಲ್ಲಿ ಕುಳಿತು ಬನ್ನಿ ಮಂಟಪಕ್ಕೆ ಹೋಗುತ್ತಿದ್ದರು. ಇಂದು ರಾಜರಿಲ್ಲ. ಆದರೂ ತಾಯಿ ಚಾಮುಂಡೇಶ್ವರಿಯನ್ನೇ ಅಂಬಾರಿಯಲ್ಲಿ ಕೂರಿಸಿ ಜಂಬೂಸವಾರಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಮೈಸೂರು ಒಡೆಯರ ದಸರಾ ಆಚರಣೆ
ಮೈಸೂರು ಒಡೆಯರ, ವಿಜಯನಗರದರಸರ ವೈಭವದ ದಸರಾ
ದಸರಾ ಎಂದರೆ ಮೈಸೂರು ಸೀಮೆಯ ಬೊಂಬೆ ಹಬ್ಬ
ವಿಜಯೋತ್ಸವದ ವಿಜಯದಶಮಿಯ ವಿಚಾರಧಾರೆ

ಮುಖಪುಟ /ನಮ್ಮಹಬ್ಬಗಳು