ಮುಖಪುಟ /ಸಿನಿಮಾ   

ದೀಪಿಕಾ ಪಡುಕೋಣೆ

Deepika Padukone, ದೀಪಿಕಾ ಪಡುಕೋಣೆಐಶ್ವರ್ಯ ಕನ್ನಡ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ, ಬಾಲಿವುಡ್ ನಲ್ಲಿ ಭಾರೀ ಬೇಡಿಕೆಯ ನಟಿಯಾಗಿರುವ  ಕುಂದಾಪುರದ ಬೆಡಗಿ ದೀಪಿಕಾ ಪಡುಕೋಣೆ ಭಾರತೀಯ ಮೂಲದ ಡೆನ್ಮಾರ್ಕ್ ಸಂಜಾತೆ.

ಉಪೇಂದ್ರ ಜೊತೆ ಮೊದಲ ಬಾರಿಗೆ ಬಿಗ್ ಸ್ಕೀನ್ ನಲ್ಲಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆಗೆ ಬ್ರೇಕ್ ನೀಡಿದ್ದು ಶಾರುಖ್ ಖಾನ್ ಅಭಿನಯದ ಓಂ ಶಾಂತಿ ಓಂ. ನಂತರ  ಚಾಂದನಿ ಚೌಕ್ ಟು ಚೀನಾ, ಬಚನಾ ಏ ಹಸೀನೋ. ಹಿಂದಿ ಚಿತ್ರಗಳ ಮೂಲಕ ಜನಮನಗೆದ್ದಿರುವ ದೀಪಿಕಾ ಚಿತ್ರರಂಗಕ್ಕೆ ಕಾಲಿಟ್ಟಾಗಿಲಿಂದ ಗಾಸಿಪ್ ಕಾಲಂಗೆ ಆಹಾರವಾಗಿದ್ದಾರೆ.

ಕ್ರಿಕೆಟಿಗರಾದ ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ ಹಾಗೂ ಚಿತ್ರನಟ ರಣಭೀರ್ ಕಪೂರ್ ಅವರೊಂದಿಗಿನ ಅಫೇರ್ ಸುದ್ದಿಗಳು ಮಾಧ್ಯಮಗಳಲ್ಲಿ ರಾರಾಜಿಸಿವೆ. ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಕರಾವಳಿಯ ಶ್ವೇತ ಸುಂದರಿ ತಮ್ಮ ಯಶಸ್ಸಿನ ನಾಗಾಲೋಟ ಮುಂದುವರಿಸಿದ್ದಾರೆ.

ದೀಪಿಕಾ ಪಡುಕೋಣೆ, ಖ್ಯಾತ ಬ್ಯಾಂಡ್ಮಿಂಟನ್ ಪಟು ಪ್ರಕಾಶ್ ಪಡುಕೋಣೆ ಅವರ ಪುತ್ರಿ. 1986ರ ಜನವರಿ 5ರಂದು ಡೆನ್ಮಾರ್ಕ್ ನಲ್ಲಿ ಜನಿಸಿದ ದೀಪಿಕಾ ಮೊದಲಿಗೆ  ತಂದೆಯ ಹಾದಿಯಲ್ಲಿ ಸಾಗಿ ಬ್ಯಾಡ್ಮಿಂಟನ್ ರಾಕೆಟ್ ಹಿಡಿದರಾದರೂ ನಂತರ ಮಾಡಲಿಂಗ್ ನತ್ತ ಆಕರ್ಷಿತರಾದರು. ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಬಾಲಿವುಡ್ ತಲುಪುವ ಪಾಸ್ ಪೋರ್ಟ್ ಆಯ್ತು. ಈಗ ದೀಪಿಕಾ ಪಡುಕೋಣೆ ಹೆಸರು ದೇಶಾದ್ಯಂತ ಮನೆ ಮಾತು.

ಮುಖಪುಟ /ಸಿನಿಮಾ