ಮುಖಪುಟ /ಸಿನಿಮಾ   

ಗಾಯಕಿಯಾಗಲು ಬಂದು ನಾಯಕಿಯಾದ ಭಾರತಿ
ಪಂಚಭಾಷಾ ತಾರೆ ಭಾರತಿ
, ಕನ್ನಡ ಚಿತ್ರರಂಗದ ಕೀರುತಿ

*ಟಿ.ಎಂ.ಸತೀಶ್

bharathi, Kannada film actress, ಭಾರತಿ ವಿಷ್ಣುವರ್ಧನ್, ಚಿತ್ರನಟಿ, ಕನ್ನಡದ ಮೇರು ನಟಿಸೊಬಗಿನ ಶರೀರ, ಸೊಗಸಾದ ಶಾರೀರದ ಮೂಲಕ ಕನ್ನಡ ಚಿತ್ರರಸಿಕರ ಮನಗೆದ್ದ ಮೇರುನಟಿ ಭಾರತಿ.1966ರಲ್ಲಿ ಲವ್ ಇನ್ ಬೆಂಗಳೂರು ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಭಾರತಿ, ಮೂಲತಃ ಮಹಾರಾಷ್ಟ್ರದವರು. ಆಗಸ್ಟ್ 15ರಂದು ಹುಟ್ಟಿದ ಕಾರಣ ಇವರಿಗೆ ತಂದೆ ತಾಯಿಗಳು ಭಾರತಿ ಎಂದೇ ನಾಮಕರಣ ಮಾಡಿದರು.

ಗಾಯಕಿಯಾಗಬೇಕೆಂಬ ಕನಸುಕಟ್ಟಿಕೊಂಡು ಚಿತ್ರರಂಗಕ್ಕೆ ಬಂದ ಭಾರತಿ ಆದದ್ದು ಗಾಯಕಿಯಲ್ಲ ಬದಲಾಗಿ ನಾಯಕಿ. ಬಳುಕುವ ಮೈಕಟ್ಟಿನ ಆಕರ್ಷಕ ಸುಂದರ ಮೊಗದ ಭಾರತಿ ಬಹುಬೇಗ ಪಂಚಭಾಷಾ ತಾರೆಯಾದರು. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿಯೂ ನಟಿಸಿದರು.

bharathi, Kannada film actress, ಭಾರತಿ ವಿಷ್ಣುವರ್ಧನ್, ಚಿತ್ರನಟಿ, ಕನ್ನಡದ ಮೇರು ನಟಿ70ರ ದಶಕದಲ್ಲೇ ಶತಚಿತ್ರನಟಿ ಎಂಬ ಖ್ಯಾತಿಗೆ ಪಾತ್ರರಾದ ಭಾರತಿ ಅವರು ಅಭಿನಯಿಸಿದ ನೂರನೇ ಚಿತ್ರ ಭಾಗ್ಯಜ್ಯೋತಿ. ಭಲೇಜೋಡಿ, ಬಾಳುಬೆಳಗಿತು, ಶ್ರೀಕೃಷ್ಣದೇವರಾಯ, ದೂರದಬೆಟ್ಟ, ನಮ್ಮ ಸಂಸಾರ, ಬಿಡುಗಡೆ, ಬಾಳೊಂದು ಉಯ್ಯಾಲೆ, ಬಂಗಾರದ ಮನುಷ್ಯ, ಸಂಧ್ಯಾರಾಗ, ಮನೆ ಬೆಳಗಿದ ಸೊಸೆ, ಮಕ್ಕಳಭಾಗ್ಯ, ಯುದ್ಧಕಾಂಡ, ಬಣ್ಣದ ಗೆಜ್ಜೆ ಮೊದಲಾದ ಚಿತ್ರಗಳಲ್ಲಿ ನಟಿಸಿದ ಭಾರತಿ 1975ರಲ್ಲಿ ಖ್ಯಾತ ಚಿತ್ರನಟ ವಿಷ್ಣುವರ್ಧನ್ ಅವರನ್ನು ವರಿಸಿದರು. ಕನ್ನಡ ಟಿ.ವಿ. ಧಾರಾವಾಹಿಗಳಲ್ಲೂ ಕಾಣಿಸಿಕೊಂಡ ಭಾರತಿ ಅವರು ದೂರದರ್ಶನದಲ್ಲಿ ಪ್ರಸಾರವಾದ ಮೆಗಾ ಧಾರಾವಾಹಿ ಜನನಿಯಲ್ಲಿ ಮತ್ತೆ ಜನಪ್ರಿಯರಾದರು.

ದೀರ್ಘಕಾಲದ ವಿಶ್ರಾಂತಿಯ ಬಳಿಕ ಮತ್ತೆ ಚಿತ್ರರಂಗಕ್ಕೆ ಬಂದ ಅವರು ಪ್ರೀತಿ ಪ್ರೇಮ ಪ್ರಣಯ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದರು.

ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ವರ್ಷದಲ್ಲೇ ಅಭಿನಯಿಸಿದ ಸಂಧ್ಯಾರಾಗಾ ಚಿತ್ರದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದರು. 1970 ಬಿಡುಗಡೆಯಾದ ಶ್ರೀಕೃಷ್ಣದೇವರಾಯ ಚಿತ್ರದ ಚಿನ್ನಾದೇವಿಯ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ದೊರಕಿತ್ತು.

ಮುಖಪುಟ /ಸಿನಿಮಾ