ಮುಖಪುಟ /ಸಿನಿಮಾ    

ನಟ, ನಾಟಕಕಾರ ರಾಜಾನಂದ್ ಒಂದು ನೆನಪು

Rajanandನ್ನಡ ಚಿತ್ರರಂಗ ಕಂಡ ಅತ್ಯುತ್ತಮ ಪೋಷಕ ನಟರ ಪೈಕಿ ರಾಜಾನಂದ್ ಸಹ ಒಬ್ಬರು. ತಮ್ಮ 73ನೇ ವಯಸ್ಸಿನಲ್ಲಿ  (2004ರ ಆಗಸ್ಟ್ 25ರಂದು) ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ ರಾಜಾನಂದ್ ನೆನಪು ಮಾತ್ರ ಸದಾ ಹರಿಸು.

ಚಕ್ರತೀರ್ಥ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ರಾಜಾನಂದ್ ಅಭಿನಯಿಸಿದ ಕೊನೆಯ ಚಿತ್ರ ಬಯಲುದೀಪ. ಗುರುಶಿಷ್ಯರು, ಮಯೂರ ಸೇರಿದಂತೆ 318ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು.

ಹಾರನಹಳ್ಳಿ ಇವರ ಹುಟ್ಟೂರಾದರೆ, ರಂಗಭೂಮಿಗೆ ಬರುವ ಮುನ್ನ ಇದ್ದ ಹೆಸರು ವೆಂಕಟರಾಜು. ಚಿಕ್ಕವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ ಅವರು ಉದರ ಪೋಷಣೆಗಾಗಿ ಆಯ್ಕೆ ಮಾಡಿಕೊಂಡಿದ್ದು ರಂಗಭೂಮಿಯನ್ನು. ಪ್ರಹ್ಲಾದ ಚರಿತ್ರೆ ಮೂಲಕ ರಂಗಪ್ರವೇಶ ಮಾಡಿದ ವೆಂಕಟರಾಜು ಹಿಂತಿರುಗಿ ನೋಡಲೇ ಇಲ್ಲ.

ಗುಬ್ಬಿ ವೀರಣ್ಣ ಅವರ ಕಂಪನಿಗೆ ಸೇರಿದ ಬಳಿಕ ವೆಂಕಟರಾಜು, ರಾಜಾನಂದರಾದರು. ಗುಬ್ಬಿ ವೀರಣ್ಣನವರ ಕಂಪನಿಯಿಂದ, ನಟರತ್ನಾಕರ ಹಿರಣ್ಣಯ್ಯ ಅವರ ಕಂಪನಿ ಸೇರಿದಂತೆ ಹಲವು ನಾಟಕ ಕಂಪನಿಗಳಲ್ಲಿ ಅಭಿನಯಿಸಿದ ರಾಜಾನಂದ್ ನಂತರ ತಮ್ಮದೇ ಆದ ರಂಗವೈಭವ ಎಂಬ ಸಂಸ್ಥೆಯನ್ನೂ ಕಟ್ಟಿದರು. ತಾವೇ ರಚಿಸಿದ ಹಲವು ನಾಟಕಗಳನ್ನು ರಂಗದ ಮೇಲೆ ತಂದರು.

Rajanandಧನಪಿಶಾಚಿ ಇವರು ನಟಿಸಿದ ಮೊದಲ ಚಿತ್ರವಾದರೂ, ಬಿಡುಗಡೆಯಾದ ಮೊದಲ ಚಿತ್ರ ಚಕ್ರತೀರ್ಥ. ರಂಗನಾಯಕಿ ಚಿತ್ರದಲ್ಲಿ ನಾಟಕ ಕಂಪನಿ ಮಾಲಿಕರಾಗಿ ಅವರ ಅಭಿನಯ ಮನೋಜ್ಞ. ಮಯೂರ ಚಿತ್ರದಲ್ಲಿ ಪಲ್ಲವ ದೊರೆಯಾಗಿ, ಎರಡು ಕನಸು ಚಿತ್ರದಲ್ಲಿ ಖಳನಾಯಕನಾಗಿ, ರಾಜಾ ನನ್ನ ರಾಜಾ ಚಿತ್ರದಲ್ಲಿ 200 ವರ್ಷಗಳ ಹಿಂದಿನ ಕಥೆಯಲ್ಲಿ ರಾಜನಾಗಿ, ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಚೋಳರ ದೊರೆಯಾಗಿ, ಗುರುಶಿಷ್ಯರು ಚಿತ್ರದಲ್ಲಿ ಪೆದ್ದ ಶಿಷ್ಯರ ಗುರುವಾಗಿ ಇವರ ಅಭಿನಯ ಮರೆಯುವಂತೆಯೇ ಇಲ್ಲ.

ತಮಗೆ ಸಿಕ್ಕ ಚಿಕ್ಕ ಪಾತ್ರವನ್ನೂ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದ ರಾಜಾನಂದ್, ಸಾಹಿತ್ಯದ ಗೀಳೂ ಅಂಟಿಸಿಕೊಂಡಿದ್ದರು. ತಾವೇ ರಚಿಸಿ, ನಿರ್ದೇಶಿಸಿ ನಾಟಕವನ್ನೂ ಆಡಿಸುತ್ತಿದ್ದರು. ಇವರು ಬರೆದ ನಾಟಕಗಳ ಸಂಖ್ಯೆ 200ಕ್ಕೂ ಹೆಚ್ಚು ಎಂದರೆ ಅಚ್ಚರಿ ಎನಿಸದಿದರು.ಇದಲ್ಲದೆ ಸಾವಿರಾರು ವಚನ, ಕವನಗಳನ್ನೂ ಅವರು ರಚಿಸಿದ್ದರು.

ಮುಖಪುಟ; /ಸಿನಿಮಾ