ಮುಖಪುಟ /ಸಿನಿಮಾ    

ವೀರಬಾಹು ಚಿತ್ರಕ್ಕೆ ಹಾಡುಗಳ ಚಿತ್ರೀಕರಣ

veerabahu, vijayಸಂದೇಶ್ ಕಂಬೈನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅವರು ನಿರ್ಮಿಸುತ್ತಿರುವ ವೀರಬಾಹು ಚಿತ್ರದ ಹಾಡುಗಳ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ವಿಜಯ್ ಹಾಗೂ ನಿಧಿಸುಬ್ಬಯ್ಯ ಅವರ ಅಭಿನಯದಲ್ಲಿ ಚಿತ್ರದ ಎರಡು ಗೀತೆಗಳಚಿತ್ರೀಕರಣ ಸಕಲೇಶಪುರ, ಶಿವನಸಮುದ್ರ ಹಾಗೂ ಕುಶಾಲನಗರದ ದುಬಾರೆ ಅರಣ್ಯ ಪ್ರದೇಶದಲ್ಲಿ ನಡೆದಿದೆ ಎಂದು ನಿರ್ದೇಶಕ ಎಸ್.ಮಹೇಂದರ್ ತಿಳಿಸಿದ್ದಾರೆ. ಅನಂತ್ ಅರಸ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ.

ದೀಪು ಎಸ್ ಕುಮಾರ್ ಸಂಕಲನ, ಪ್ರಸಾದ್ ಸಹ ನಿರ್ದೇಶನ, ಎಂ.ಎಸ್.ರಮೇಶ್ ಸಂಭಾಷಣೆ ಹಾಗೂ ವಿಜಯಕುಮಾರ್ ನಿರ್ಮಾಣ ನಿರ್ವಹಣೆಯಿರುವ ವೀರಬಾಹು ಚಿತ್ರದ ತಾರಾಬಳಗದಲ್ಲಿ ವಿಜಯ್, ನಿಧಿಸುಬ್ಬಯ್ಯ, ರಂಗಾಯಣರಘು, ರಾಜುತಾಳಿಕೋಟೆ, ಅವಿನಾಶ್, ಎಂ.ಎನ್.ಲಕ್ಷ್ಮೀದೇವಿ, ಎ.ಟಿ.ರಘು, ಅಚ್ಯುತ್‌ಕುಮಾರ್, ರೇಖಾ ಕುಮಾರ್, ಧರ್ಮ, ಕಿಶೋರಿ ಬಲ್ಲಾಳ, ವಿನಯ ಪ್ರಸಾದ್ ಮೊದಲಾದವರಿದ್ದಾರೆ.

ಮುಖಪುಟ /ಸಿನಿಮಾ