ಮುಖಪುಟ /ಸಿನಿಮಾ    

ರಮ್ಯಗೆ 28ನೇ ವಸಂತದ ಸಂಭ್ರಮ

ಬೆಂಗಳೂರು, ನ.೨೯ - ಕನ್ನಡ ಚಿತ್ರರಂಗದ ಖ್ಯಾತ ನಟಿ ಬೆಳ್ಳಿಬೆಡಗಿ ರಮ್ಯ ಅವರಿಗಿಂದು ೨೮ನೇ ಹುಟ್ಟುಹಬ್ಬದ ಸಂಭ್ರಮ. ಕಳೆದ ೮ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಅನಭಿಷಿಕ್ತ ಸಾಮ್ರಾಜ್ಞಿಯಾಗಿ ಶೋಭಿಸುತ್ತಿರುವ ರಮ್ಯ ಹಲವು ಹಗರಣಗಳ ನಡುವೆಯೇ ತಮ್ಮ ವರ್ಚಸ್ಸು ಕಾಯ್ದುಕೊಂಡು ಬಂದಿದ್ದಾರೆ.

೨೮ ವಸಂತ ಪೂರೈಸಿದ ರಮ್ಯ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಇಂದು ಹುಟ್ಟು ಹಬ್ಬ ಆಚರಿಸಿಕೊಂಡರು. ಚಿತ್ರರಂಗದ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು.

ರಮ್ಯ ಗೃಹಸ್ಥಾಶ್ರಮಕ್ಕೆ ಕಾಲಿಡುವ ಸುಳಿವೂ ನೀಡಿದ್ದು, ಹಿರಿಯರು ತಮಗೆ ಗಂಡು ಹುಡುಕುತ್ತಿರುವುದಾಗಿ ಹೇಳಿದ್ದಾರೆ. ಸಂಜು ವೆಡ್ಸ್ ಗೀತ, ದಂಡಂ ದಶಗುಣಂ ಚಿತ್ರದಲ್ಲಿ ಅವರು ನಟಿಸುತ್ತಿದ್ದು ಈ ಚಿತ್ರಗಳು ಇನ್ನೂ ಬಿಡುಗಡೆ ಆಗಬೇಕಿದೆ.

ಮುಖಪುಟ /ಸಿನಿಮಾ