ಮುಖಪುಟ /ಸಿನಿಮಾ    

ಪ್ರಿನ್ಸ್ ಗೆ ಮೈಸೂರಿನಲ್ಲಿ ಚಿತ್ರೀಕರಣ

Darshan, Jannifar, Nikitha, Princeಸಂದೇಶ್ ಕಂಬೈನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಪ್ರಿನ್ಸ್ ಚಿತ್ರಕ್ಕೆ ಎರಡು ಭರ್ಜರಿ ಸಾಹಸ ಸನ್ನಿವೇಶಗಳ ಚಿತ್ರೀಕರಣ ನಡೆದಿದೆ. ದರ್ಶನ್ ಆದಿಲೋಕೇಶ್ ಹಾಗೂ ದರ್ಶನ್ - ಅವಿನಾಶ್ ಅವರ ಅಭಿನಯದಲ್ಲಿ ಮೈಸೂರಿನ ಗರುಡಮಾಲ್, ಇ ಎಸ್ ಐ ಆಸ್ಪತ್ರೆಯಲ್ಲಿ ನಡೆದ ಈ ಸಾಹಸ ಸನ್ನಿವೇಶಗಳಿಗೆ ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ ಎಂದು ಚಿತ್ರದ ನಿರ್ದೇಶಕ ಓಂಪ್ರಕಾಶ್‌ರಾವ್‌ ತಿಳಿಸಿದ್ದಾರೆ.

ಚಿತ್ರದ ಹಚ್ಚಿನ ಭಾಗದ ಚಿತ್ರೀಕರಣ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ನಡೆದಿದೆ. ಎಂ.ಎಸ್.ರಮೇಶ್ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. ವೀನಸ್‌ಮೂರ್ತಿ ಛಾಯಾಗ್ರಹಣ, ಲಕ್ಷ್ಮಣ್‌ರೆಡ್ಡಿ ಸಂಕಲನ, ಪಳನಿರಾಜ್‌ ಮತ್ತು ರವಿವರ್ಮ ಸಾಹಸ ನಿರ್ದೆಶನವಿರುವ ಪ್ರಿನ್ಸ್ ಚಿತ್ರದ ತಾರಾಬಳಗದಲ್ಲಿ ದರ್ಶನ್, ಜನ್ನಿಫರ್, ನಿಖಿತ, ಅವಿನಾಶ್, ಶೊಭರಾಜ್, ಆದಿಲೋಕೇಶ್, ಅವಿನಾಶ್, ಸಿಹಿಕಹಿಚಂದ್ರು, ರಂಗಾಯಣರಘು, ಶೇಖರ್‌ಕೋಟ್ಯಾನ್ ಮುಂತಾದವರಿದ್ದಾರೆ.

ಮುಖಪುಟ /ಸಿನಿಮಾ