ಮುಖಪುಟ /ಸಿನಿಮಾ    

ಕಲರ್ ಫುಲ್ 'ಕಸ್ತೂರಿ ನಿವಾಸ'

kasturi nivasa Rajkumarಬೆಂಗಳೂರು, ಜು.13- ಸುಮಾರು 50 ವರ್ಷಗಳ ಹಿಂದೆ ಅಂದರೆ 1965ರಲ್ಲಿ ತೆರೆಕಂಡ ಕನ್ನಡದ ಮೇರು ನಟ, ವರನಟ ಡಾ. ರಾಜ್ ಕುಮಾರ್ ಅಭಿನಯದ ಕಪ್ಪು ಬಿಳುಪು ಚಲನಚಿತ್ರ ಸತ್ಯಹರಿಶ್ಚಂದ್ರ 2009ರಲ್ಲಿ ವರ್ಣಮಯವಾಗಿ ಮತ್ತೆ ರಜತ ಪರದೆಯಲ್ಲಿ ರಾರಾಜಿಸಿದ್ದು ತಮಗೆಲ್ಲಾ ತಿಳಿದ ವಿಷಯ ಅಲ್ಲವೇ.

ಈಗ ಅನುಪಂ ಮೂವೀಸ್ ಲಾಂಛನ ಹಾಗೂ ದೊರೈ ಭಗವಾನ್ ನಿರ್ದೇಶನದಲ್ಲಿ 1971ರಲ್ಲಿ ತೆರೆಕಂಡ ಡಾ.ರಾಜ್ ಕುಮಾರ್ ಅಭಿನಯದ ಮತ್ತೊಂದು ಮಹೋನ್ನತ ಹಾಗೂ ಸೂಪರ್ ಹಿಟ್ ಚಲನಚಿತ್ರ 'ಕಸ್ತೂರಿ ನಿವಾಸ' ಕೂಡ ಕಲರ್ ಫುಲ್ ಆಗುತ್ತಿದೆ.

ಡಾ. ರಾಜ್‌ಕುಮಾರ್‌ ಅವರ ಅಭಿನಯದ ಅಜರಾಮರ ಕಪ್ಪು ಬಿಳುಪು ಚಿತ್ರ 'ಕಸ್ತೂರಿ ನಿವಾಸ'ವನ್ನು ವರ್ಣಮಯಗೊಳಿಸಿ ಶ್ರಾವಣ ಮಾಸದಲ್ಲಿ ಅಂದರೆ 2014ರ ಆಗಸ್ಟ್ ನಲ್ಲಿ  ಮರು ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆದಿದೆ.

ಈ ಚಿತ್ರದ ವಿತರಕರಾಗಿದ್ದ ದಿವಂಗತ ಕೆ.ಸಿ.ಎನ್‌. ಗೌಡ ಅವರೇ ಈ ಚಿತ್ರವನ್ನು ಕಲರ್ ಮಾಡಿ ಮರು ಬಿಡುಗಡೆ ಮಾಡುವ ಕಲಸು ಕಂಡಿದ್ದರು. ಹಲವು ವರ್ಷಗಳ ಬಳಿಕ ಅವರ ಆ ಕನಸು ನನಸಾಗುತ್ತಿದೆ. ವಾಸ್ತವವಾಗಿ ಡಾ.ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ದಿನವಾದ ಏಪ್ರಿಲ್ 24ರಂದೇ ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಕಾರಣಾಂತರಗಳಿಂದ 4 ತಿಂಗಳು ತಡವಾಗಿದೆ.

Dr. Raj, Arati, Kasturinivasaಚಿತ್ರದಲ್ಲಿ ಡಾ. ರಾಜ್‌ ಕುಮಾರ್, ಆರತಿ, ಜಯಂತಿ, ಕೆ.ಎಸ್‌. ಅಶ್ವತ್ಥ್, ರಾಜಾಶಂಕರ್‌, ಬಾಲಕೃಷ್ಣ  ಮೊದಲಾದವರು ನಟಿಸಿದ್ದರು. ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್‌ ಅವರ ಸಂಗೀತ ಹಾಗೂ ಚಿ. ಉದಯಶಂಕರ್‌ ಅವರ ಗೀತ ಸಾಹಿತ್ಯ ಈ ಚಿತ್ರದ ಮೆರುಗು ಹೆಚ್ಚಿಸಿತ್ತು. 'ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು, ಏನೇ ಬರಲಿ ...', 'ನೀ ಬಂದು ನಿಂತಾಗ ನಿಂತು ನೀ ನಕ್ಕಾಗ, ನಕ್ಕು ನೀ ನಲಿದಾಗ ಸೋತೆ ನಾನಾಗ ...' ಗೀತೆಗಳು ಇಂದಿಗೂ ಅಜರಾಮರವಾಗಿವೆ.

 

ಮುಖಪುಟ /ಸಿನಿಮಾ