ಮುಖಪುಟ /ಸಿನಿಮಾ    

ಿರಿಯ ನಟ, ನಿರ್ದೇಶಕ ಅಶೋಕ ಬಾದರದಿನ್ನಿ ನಿಧನ 

ಅಶೋಕ್ ಬಾದರದಿನ್ನಿಬೆಂಗಳೂರು, ನ. 24: ಹಿರಿಯ ಚಿತ್ರನಟ, ರಂಗಕರ್ಮಿ, ನಿರ್ದೇಶಕ ಅಶೋಕ ಬಾದರದಿನ್ನಿ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಇಂದು ಮಧ್ಯಾಹ್ನ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ.

ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಕನ್ನಡ ಚಲನಚಿತ್ರಗಳಲ್ಲಿ ಹಾಸ್ಯ ನಟರಾಗಿ ಅಭಿನಯಿಸುತ್ತಿದ್ದ ಬಾದರದಿನ್ನಿ ತಮ್ಮ ವಿಶಿಷ್ಟ ಧ್ವನಿ ಹಾಗೂ ಅಭಿನಯಿಂದ ಎಲ್ಲರ ಮನಗೆದ್ದಿದ್ದರು.

ಅಂಜದಗಂಡು, ಮನಮೆಚ್ಚಿದ ಹುಡುಗಿ ಚಿತ್ರದಲ್ಲಿ ಅವರ ಅಭಿನಯ ಮರೆಯುವಂತೆಯೇ ಇಲ್ಲ, ಇನ್ನು  ಸಿಂಗಾರವ್ವ ಮತ್ತು ಅರಮನೆ, ಅಪ್ಪ ನಾಟಕಗಳನ್ನು  ಅಶೋಕ ಬಾದರದಿನ್ನಿ ನಿರ್ದೇಶಿಸಿದ್ದರು.

ನಾಟಕಕಾರ  ಎ.ಎಸ್.ಮೂರ್ತಿಯವರು  ಕಲಾಮಂದಿರದ ಸ್ಥಾಪಕರಾದ ತಮ್ಮ ತಂದೆ ಅ.ನ. ಸುಬ್ಬರಾಯರ ಸ್ಮರಣಾರ್ಥವಾಗಿ 1981ರಲ್ಲಿ ಪ್ರಾರಂಭಿಸಿದ ನಾಟಕಶಾಲೆ ಅಭಿನಯ ತರಂಗದ ಪ್ರಥಮ ಪ್ರಾಂಶುಪಾಲರಾಗಿಯೂ ಬಾದರದಿನ್ನಿ ಸೇವೆ ಸಲ್ಲಿಸಿದ್ದರು.

 ಮುಖಪುಟ /ಸಿನಿಮಾ