ಮುಖಪುಟ /ಸಾಧಕರು    

ಜನಾನುರಾಗಿ, ಸಮಾಜ ಸೇವಕ ಶಂಕರನಾರಾಯಣ್

Shankaranarayan, BJP leader, Akhila Karnataka Brahmana Maha Sabha, felicitation Doddarangegowdaಎಂ.ವಿ.  ಶಂಕರನಾರಾಯಣ್ ಸಾಹಿತ್ಯಾಸಕ್ತರು, ರಾಜಕಾರಿಣಿ, ಸಮಾಜ ಸೇವಕರು ಎಲ್ಲಕ್ಕಿಂತ ಮಿಗಿಲಾಗಿ ಅತ್ಯುತ್ತಮ ಸಂಘಟಕರು. ಮೂಲತಃ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕು ಮುಂಗಾನಹಳ್ಳಿ ಗ್ರಾಮದಲ್ಲಿ ೧೯೫೮ರ ಜುಲೈ ೨೪ರಂದು ಶ್ರೀಮತಿ ಪದ್ಮಾವತಮ್ಮ ಹಾಗೂ ವೆಂಕಟೇಶಶಾಸ್ತ್ರಿ ದಂಪತಿಗಳ ಮಗನಾಗಿ ಜನಿಸಿದ ಶಂಕರನಾರಾಯಣ್ ವಿದ್ಯಾರ್ಥಿ ದೆಸೆಯಿಂದಲೂ ನಾಯಕತ್ವದ ಗುಣ ರೂಢಿಸಿಕೊಂಡವರು.

ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಯಾಗಿ, ವಿದ್ಯಾರ್ಥಿಗಳ ನ್ಯಾಯಸಮ್ಮತ ಹಕ್ಕುಗಳ ರಕ್ಷಣೆಗೆ ಹೋರಾಟ ನಡೆಸಿ ಯಶಸ್ವಿಯಾದ ಶಂಕರನಾರಾಯಣ್ ವಾಣಿಜ್ಯ ಪದವಿ ಪಡೆದ ಬಳಿಕವೂ ತಮ್ಮ ಬಡಾವಣೆಯ ಜನತೆಯ ಸಂಕಷ್ಟಗಳಿಗೆ ಸ್ಪಂದಿಸಿ, ಜನಸೇವೆಗೆ, ಸಮಾಜ ಸೇವೆಗೆ ತಮ್ಮನ್ನು ತೊಡಗಿಸಿಕೊಂಡರು.

೧೯೮೦ರ ದಶಕದಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ ಬಳಿಕವೂ ತಮ್ಮನ್ನು ವಿವಿಧ ಸಾಂಸ್ಕೃತಿಕ, ಸಾಹಿತ್ಯಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡ ಅವರು, ಕನ್ನಡ, ನಾಡು, ನುಡಿ, ಸಂಸ್ಕೃತಿಯ ರಕ್ಷಣೆಗೆ ನಡೆದ ಹೋರಾಟಗಳಿಂದ ಹಿಂದೆ Shankaranarayan, BJP leader, Akhila Karnataka Brahmana Maha Sabhaಸರಿದವರಲ್ಲ. ಗೋಕಾಕ್ ಚಳವಳಿ, ಕಾವೇರಿ ಹೋರಾಟದಲ್ಲಿಯೂ ಪಾಲ್ಗೊಂಡ ಶಂಕರನಾರಾಯಣ್, ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟಿಸಿ, ಕನ್ನಡ ಸೇವೆ ಮಾಡಿದರು. ತಮ್ಮ ಬಡಾವಣೆಯ ಹಲವು ಉದ್ಯಾನಗಳಲ್ಲಿ ಉದಯರಾಗ ಕಾರ್ಯಕ್ರಮ ಏರ್ಪಡಿಸಿ ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರಕ್ಕೂ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.

ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಶಂಕರನಾರಾಯಣ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದು, ಕರ್ನಾಟಕಾದ್ಯಂತ ಪ್ರವಾಸ ಮಾಡಿ ತಮ್ಮ ಕುಲಬಾಂಧವರ ನೋವು, ನಲಿವುಗಳಿಗೆ ಸ್ಪಂದಿಸುತ್ತಿದ್ದಾರೆ.

ಬ್ರಾಹ್ಮಣ ಮಹಾಸಭಾ ತನ್ನದೇ ಆದ ಸ್ವಂತ ಕಟ್ಟಡ ಹೊಂದಲು, ೨೩ಸಾವಿರ ಚದರಡಿಯ ನಿವೇಶನವನ್ನು ಬಿಡಿಎಯಿಂದ ದೊರಕಿಸಿಕೊಡುವಲ್ಲಿ ಇವರ ಪಾತ್ರ ಮಹತ್ವವಾದದ್ದು. ಮಹಾಸಭಾದ ವತಿಯಿಂದ ಸುಮಾರು ೨೦೦ಕ್ಕೂ ಹೆಚ್ಚು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ ಕೀರ್ತಿಯೂ ಇವರದು.

Shankaranarayan, BJP leader, Akhila Karnataka Brahmana Maha Sabhaಅಖಿಲ ಕರ್ನಾಟಕ ೮ನೇ ಬ್ರಾಹ್ಮಣ ಮಹಾ ಸಮ್ಮೇಳನ ನಡೆದ ಸಂದರ್ಭದಲ್ಲಿ ಗಾಯತ್ರಿ ರಥಯಾತ್ರೆಯೊಂದಿಗೆ ತೆರಳಿ ರಾಜ್ಯಾದ್ಯಂತ ಬ್ರಾಹ್ಮಣ ಜಾಗೃತಿ ಮೂಡಿಸಿದ ಶಂಕರನಾರಾಯಣ್ ಸದಾ ಕ್ರಿಯಾಶೀಲರಾಗಿ, ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.

ಬೆಂಗಳೂರಿನ ಶಂಕರಮಠದ ಆವರಣದಲ್ಲಿ ಶಂಕರನಾರಾಯಣ್ ಸಂಘಟಿಸಿದ್ದ ಲಲಿತಾ ಸಹಸ್ರನಾಮ ಪಾರಾಯಣ ಕಾರ್ಯಕ್ರಮದಲ್ಲಿ ೮ ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಅರ್ಚಕರ ಸಂಕಷ್ಟಗಳಿಗೂ ಸ್ಪಂದಿಸಿದ ಶಂಕರನಾರಾಯಣ್, ಅರ್ಚಕರಿಗೆ ಗೌರವಧನ ಕೊಡಿಸುವಲ್ಲಿ ವಹಿಸಿದ ಪಾತ್ರವನ್ನು ಮರೆಯುವಂತೆಯೇ ಇಲ್ಲ.

ಬ್ರಾಹ್ಮಣ ಸಮುದಾಯದಲ್ಲಿ ನಡೆದಾಡುವ ದೇವರೆಂದೇ ಕರೆಸಿಕೊಂಡಿದ್ದ ಮಂತ್ರಾಲಯ ಮಠದ ಶ್ರೀಸುಷಮೀಂದ್ರ ತೀರ್ಥರ ಹಾಗೂ ಸುಮತೀಂದ್ರ ತೀರ್ಥರಿಗೆ ಬೆಂಗಳೂರಿನಲ್ಲಿ ಭಕ್ತಿಪುರಸ್ಸರ ಸಮಾರಂಭ ಏರ್ಪಡಿಸಿ ಗೌರವ ಸಮರ್ಪಿಸಿದ ಕೀರ್ತಿಯೂ ಇವರದು.

Shankaranarayan, BJP leader, Akhila Karnataka Brahmana Maha Sabhaಜಾತಿಯಲ್ಲಿ ಬ್ರಾಹ್ಮಣರಾಗಿ, ಬ್ರಾಹ್ಮಣ ಮಹಾಸಭಾದ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೂ ಇವರು ಜಾತ್ಯತೀತ ಮನೋಭಾವದಿಂದ ಜನಸೇವೆ ಮಾಡಿದವರು. ಮತ್ತಿಕೆರೆ ಶ್ರೀ ಚೌಡೇಶ್ವರಿ ದೇವಾಲಯದ ವತಿಯಿಂದ ಬಸವನಗುಡಿ ಮತ್ತು ಪದ್ಮನಾಭನಗರ ಕ್ಷೇತ್ರದಲ್ಲಿ ಶಂಕರನಾರಾಯಣ್ ಕಾರ್ಯಕ್ರಮ ಸಂಘಟಿಸಿ ಎಲ್ಲ, ಜಾತಿ, ಮತ, ಧರ್ಮದ ೨ ಸಾವಿರ ಮಹಿಳೆಯರಿಗೆ ಉಚಿತವಾಗಿ ಸೀರೆಗಳನ್ನೂ ವಿತರಿಸಿದ್ದಾರೆ.

ಕಳೆದ ೨೫ ವರ್ಷಗಳ ಹಿಂದೆ ರಾಜಕೀಯರಂಗ ಪ್ರವೇಶಿಸಿದ ಶಂಕರನಾರಾಯಣ್ ವಿವಿಧ ರಾಜಕೀಯ ಪಕ್ಷಗಳಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ. ಎಂದೂ ಅಧಿಕಾರಕ್ಕೆ ಆಸೆ ಪಡೆದ ಅವರು ಪಕ್ಷದ ಸಂಘಟನೆಗೇ ತಮ್ಮನ್ನು ತೊಡಗಿಸಿಕೊಂಡವರು.

೨೦೦೮ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪದ್ಮನಾಭನಗರ, ಬಸವನಗುಡಿ, ಚಿಕ್ಕಪೇಟೆ, ಜಯನಗರ, ಯಶವಂತಪುರ, ಬೆಂಗಳೂರು ದಕ್ಷಿಣ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳ ಬಿ.ಜೆ.ಪಿ. ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಶಂಕರನಾರಾಯಣ್ ಕಳಹಂತದಲ್ಲಿ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿ ಮಾಡಿದ ಕಾರ್ಯವನ್ನು ಪಕ್ಷವೂ ಗುರುತಿಸಿದೆ.

೨೦೦೯ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅನಂತಕುಮಾರ್ ಅವರ ಪರ ಮತ ಯಾಚಿಸಿದ ಶಂಕರನಾರಾಯಣ್, ಅವರ ಗೆಲುವಿಗೂ ತಮ್ಮ ಕೈಲಾದಷ್ಟು ಅಳಿಲು ಸೇವೆ ಸಲ್ಲಿಸಿದ್ದಾರೆ.

M.V.Shankara Narayan with MLA Hemachandra Sagar and Ravi Subramanyaಬನಶಂಕರಿ ೩ನೇ ಹಂತದ ನಿವಾಸಿಯಾದ ಶಂಕರನಾರಾಯಣ್, ತಮ್ಮ ಬಡಾವಣೆಯ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಈ ಬಡಾವಣೆಯ ಬಡ ಜನರ ಬಗ್ಗೆ ಕಾಳಜಿ ಹೊಂದಿರುವ ಅವರು, ಅರ್ಹ ಫಲಾನುಭವಿಗಳಿಗೆ ಯಾವುದೇ ಫಲಾಪೇಕ್ಷೆ ಇಲ್ಲದೆ, ಬಿ.ಪಿ.ಎಲ್. ಕಾರ್ಡ್, ವಿಧವಾ ವೇತನ, ವೃದ್ಧಾಪ್ಯವೇತನ ಕೊಡಿಸುತ್ತಿದ್ದರೂ ಎಲೆ ಮರೆಕಾಯಿಯಂತಿದ್ದಾರೆ.

ಇವರಿಂದ ಉಪಕೃತರಾದವರು, ಅಭಿಮಾನಿಗಳು ಎಂ.ವಿ.ಶಂಕರನಾರಾಯಣ್ ಹಿತೈಷಿಗಳ ವೇದಿಕೆಯನ್ನೇ ಸ್ಥಾಪಿಸಿದ್ದು, ಈ ವೇದಿಕೆ ಮೂಲಕ ಹಲವು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಹಲವು ಸಂಘಟನೆಗಳು ಶಂಕರನಾರಾಯಣ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿವೆ.

ಮುಖಪುಟ /ಸಾಧಕರು