ಮುಖಪುಟ /ಸಾಧಕರು   

ಕರುನಾಡ ಸಾಧಕರು

ಕರುನಾಡು ಸಾಧಕರ ತವರು. ಸಾಹಿತ್ಯ, ಕಲೆ, ಸಂಸ್ಕೃತಿ, ರಂಗಭೂಮಿ, ಸಿನಿಮಾ, ವಿಜ್ಞಾನ, ತಂತ್ರಜ್ಞಾನ, ಪತ್ರಿಕೋದ್ಯಮ,  ಕ್ರೀಡೆ, ಸಮಾಜಸೇವೆ, ಶಿಕ್ಷಣ, ರಾಜಕೀಯ ಸೇರಿದಂತೆ ಹಲವು ಹತ್ತು ಕ್ಷೇತ್ರಗಳಲ್ಲಿ ಕನ್ನಡಿಗರು ಸಾಧನೆಯ ಉತ್ತುಂಗಕ್ಕೇರಿದ್ದಾರೆ.  ಸಾಹಿತ್ಯ ಶ್ರೇಷ್ಠರು ಕನ್ನಡ ತಾಯಿ ಭುವನೇಶ್ವರಿಗೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಯ ಗರಿತೊಡಿಸಿದ್ದರೆ, ಕ್ರೀಡಾಪಟುಗಳು ವಿಶ್ವವಿಕ್ರಮವನ್ನು ಮೆರೆದಿದ್ದಾರೆ. ಸರ್.ಸಿ.ವಿ. ರಾಮನ್, ಸಿ.ಎನ್.ಆರ್.ರಾವ್, ರಾಜಾರಾಮಣ್ಣನವರಂಥ ವಿಜ್ಞಾನಿಗಳು, ಸರ್.ಎಂ.ವಿಶ್ವೇಶ್ವರಯ್ಯ, ಇನ್ ಫೋಸಿಸ್ ನಾರಾಯಣಮೂರ್ತಿ, ಎಂಜಿನಿಯರುಗಳು, ಉದ್ಯಮಿಗಳು ಕನ್ನಡ ನಾಡಿನ ಹಿರಿಮೆಯನ್ನು ಜಗತ್ತಿಗೇ ಪರಿಚಯಿಸಿದ್ದಾರೆ.  ಗಂಗೂಬಾಯಿ ಹಾನಗಲ್ ಮೊದಲಾದ ಸಂಗೀತ ಶ್ರೇಷ್ಠರು ಗಾನಸುಧೆಯನ್ನೇ ಹರಿಸಿದ್ದಾರೆ, ತ್ರಿವಿಧ ದಾಸೋಹದಿಂದ ಸಿದ್ದಗಂಗಾಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ, ಡಾ.ರಾಜ್ ಕುಮಾರ್ ತಮ್ಮ ಶ್ರೇಷ್ಠ ಅಭಿನಯದ ಮೂಲಕ ವರನಟನಾಗಿ ಕನ್ನಡಿಗರ ಕಣ್ಮಣಿಯಾಗಿದ್ದಾರೆ, ಹೊರನಾಡಿಗೆ ಉದ್ಯೋಗವನ್ನರಸಿ ಹೋದ ಸಹಸ್ರಾರು ಕನ್ನಡಿಗರು ವಿಶ್ವದ ಗಮನ ಸೆಳೆಯುವಂಥ ಸಾಧನೆಗಳನ್ನು ಮಾಡುತ್ತಿದ್ದಾರೆ. ಎಲೆ ಮರೆಯ ಕಾಯಿಯಂತೆ ಕರುನಾಡ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಧನೆ ಮೆರೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ನಾಡು ಮತ್ತು ಹೊರನಾಡಿನಲ್ಲಿ ನೆಲೆಸಿರುವ ಸಾಧಕರ ಪರಿಚಯ ಮಾಡಿಸಲು ನಾವು ಆರಂಭಿಸಿರುವ ಅಂಕಣವೇ ಕರುನಾಡ ಸಾಧಕರು.... 

ಮರೆಯಲಾಗದ ರಂಗಕರ್ಮಿ ಬಿ.ವಿ.ಕಾರಂತ್
ಕನ್ನಡಕ್ಕೆ ಮೊದಲ ಜ್ಞಾನಪೀಠದ ಗರಿತೊಡಿಸಿದ ರಾಷ್ಟ್ರಕವಿ ಕುವೆಂಪು
ಸಾಧನಕೇರಿಯ ಬೇಂದ್ರೆ ಮಾಸ್ತರ್
ಕನ್ನಡದ ಆಸ್ತಿ ಮಾಸ್ತಿ
ಕಡಲ ತೀರದ ಭಾರ್ಗವ ಡಾ. ಶಿವರಾಮ ಕಾರಂತ
ಸಮುದ್ರಗೀತೆಗಳ ಅಲೆಯಲ್ಲಿ ಭಾರತ ಸಿಂಧು ರಶ್ಮಿಯಾಗಿ ಕಂಗೊಳಿಸಿದ ಗೋಕಾಕ್
ಅನಂತಮೂರ್ತಿ ಎಂಬ ಆಲದ ಮರ
ನಾಟಕ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದ ಗಿರೀಶ್ ಕಾರ್ನಾಡ್
ಸಾಹಿತ್ಯ ಕ್ಷೇತ್ರದ ಪರಮೋಚ್ಚ ಪ್ರಶಸ್ತಿ ಜ್ಞಾನಪೀಠದ ಇತಿಹಾಸ
ಸಾವಿರ ಪದಬಂಧಗಳ ಸರದಾರ ಪತ್ರಕರ್ತ, ವಾಗ್ಮಿ ಟಿ.ಎಂ.ಸತೀಶ್

ಜನಾನುರಾಗಿ ಸಮಾಜಸೇವಕ, ರಾಜಕಾರಿಣಿ ಶಂಕರನಾರಾಯಣ್
ನಿಸ್ವಾರ್ಥ ಸಮಾಜ ಸೇವಕ ಕೆ. ಧರಣೇಶ್

ಮುಖಪುಟ /ಸಾಧಕರು