ಮುಖಪುಟ /ಸಾಧಕರು    

ಸಮಾಜ ಸೇವಕ, ಜನಾನುರಾಗಿ ಕೆ. ಧರಣೀಶ್

*ಟಿ.ಎಂ. ಸತೀಶ್

Dharaneesh, Secretary, Basavanagudi BJP Secretaryಈಚೆಗೆ ಬನಶಂಕರಿ ಮೂರನೇ ಹಂತದ, ಮೂರನೇ ಘಟ್ಟದ, ೩ನೇ ವಿಭಾಗದಲ್ಲಿರುವ ಗೆಳೆಯರೊಬ್ಬರ ಮನೆಗೆ ಹೋಗಿದ್ದೆ. ಆಗ ಅಲ್ಲಿ ಕತ್ತರಿಗುಪ್ಪೆ ಸರ್ವೇ ನಂ ೧೦೯ರಲ್ಲಿದ್ದ ಸರ್ಕಾರಿ ಜಾಗ ಅತಿಕ್ರಮಣಕಾರರ ಪಾಲಾಗುವುದನ್ನು ತಪ್ಪಿಸಿ, ಆ ಪ್ರದೇಶದಲ್ಲಿ ಬಡಾವಣೆಯ ಮಕ್ಕಳಿಗೆ ಆಟವಾಡಲು ಅನುವಾಗುವಂತೆ ಆಟದ ಮೈದಾನ ನಿರ್ಮಿಸಿಕೊಟ್ಟ ಸ್ಥಳೀಯ ಯುವ ಮುಖಂಡ ಕೆ. ಧರಣೀಶ್ ಅವರಿಗೆ ಅಭಿನಂದನೆ ನಡೆದಿತ್ತು.

ಬಡಾವಣೆಯ ಪ್ರತಿಯೊಬ್ಬರೂ ಬಂದು ಅವರನ್ನು ಅಭಿನಂದಿಸುತ್ತಿದ್ದರು. ಹೊಸ ಆಟದ ಮೈದಾನದಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಪುಟ್ಟ ಮಕ್ಕಳಂತೂ ಇವರನ್ನು ಕಂಡೊಡನೆ ಓಡಿ ಬಂದು, ಫೀಲ್ಡ್ ಬಿಡಿಸಿಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಅಂಕಲ್ ಎಂದು ಹೇಳಿ ಓಡಿ ಹೋದರು. ಇದನ್ನೆಲ್ಲ ನೋಡುತ್ತಿದ್ದ ನಾನು, ಪತ್ರಕರ್ತನಾಗಿ ಸಹಜ ಕುತೂಹಲದಿಂದ ಧರಣೀಶ್ ಬಗ್ಗೆ ವಿಚಾರಿಸಿದೆ. ಸ್ಥಳೀಯರ ಸಮಸ್ಯೆಗೆ ಸ್ಪಂದಿಸುವ ಅವರ ಕಾರ್ಯವೈಖರಿಯ ಬಗ್ಗೆ ಕೇಳಿ ಆಶ್ಚರ್ಯವಾಯಿತು.

ಈ ಬಡಾವಣೆಯ ಯಾವುದೇ ರಸ್ತೆಯಲ್ಲಿ ಬೀದಿ ದೀಪ ಉರಿಯದಿದ್ದರೆ ಜನ ಸಂಪರ್ಕಿಸುವುದು ಧರಣೀಶ್ ಅವರನ್ನು, ಕೊಳಾಯಿಯಲ್ಲಿ ನೀರು ಬಾರದಿದ್ದರೆ, ನೀರಿನ ಕೊಳವೆ ಒಡೆದು ರಸ್ತೆಯಲ್ಲಿ ನೀರು ಹರಿಯುತ್ತಿದ್ದರೆ, ಗಣೇಶೋತ್ಸವ ಆಚರಣೆಗೆ ಪೆಂಡಾಲ್ ಹಾಕಲು ಅನುಮತಿ ಬೇಕಾದರೆ, ರಸ್ತೆಗಳು ಹಾಳಾಗಿ ಗುಂಡಿ ಬಿದ್ದಿದ್ದರೆ, ಈ ಬಡಾವಣೆಯ ನಿವಾಸಿಗಳು ಜನಪ್ರತಿನಿಧಿಗಳ ಬಳಿಗೆ ಹೋಗದೆ ಧರಣೀಶ್ ಮೊರೆ ಹೋಗುತ್ತಾರೆ. ಧರಣೀಶ್ ಈ ಎಲ್ಲ ಕೆಲಸವನ್ನೂ ತಮ್ಮ ಕೆಲಸವೆಂದು ತಿಳಿದು ಜನಪ್ರತಿನಿಧಿಗಳ ಮನೆಗೆ, ಬಿಡಿಎ, ಕೆ..ಬಿ., ಬೆಂಗಳೂರು ನೀರು ಸರಬರಾಜು ಮಂಡಳಿಗೆ ಅಲೆದು ಆ ಕಾರ್ಯ ಮಾಡಿಸಿಕೊಡುತ್ತಾರೆ.

ಇಂಥ ಯುವ ಹಾಗೂ ನಿಷ್ಠ ಕಾರ್ಯಕರ್ತರಿಂದಲೇ ಇರಬೇಕು, ಬೆಂಗಳೂರಿನಲ್ಲಿ ಈ ಬಾರಿ ಭಾರತೀಯ ಜನತಾಪಾರ್ಟಿ ಜಯಭೇರಿ ಬಾರಿಸಿದ್ದು. ಧರಣೀಶ್ ಬಿಜೆಪಿಯ ಸಕ್ರಿಯ ಕಾರ್ಯಕರ್ತರು, ಹಳೆಯ ಶ್ರೀನಿವಾಸನಗರ ಪಾಲಿಕೆ ವಾರ್ಡ್ ವ್ಯಾಪ್ತಿಯ ಸಂಘಟನಾ ಕಾರ್ಯದರ್ಶಿಯಾಗಿ ಪಕ್ಷದ ಸಂಘಟನೆಗೆ ಶ್ರಮಿಸಿದ ಧರಣೀಶ್ ಪ್ರಸ್ತುತ ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಘಟಕದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆದರ್ಶ ಯುವಕ:ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ನಾಯಕತ್ವದ ಗುಣ ಮೈಗೂಡಿಸಿಕೊಂಡ ಧರಣೀಶ್, ಮಾವಳ್ಳಿಯ ಆರ್.ವಿ.ಬಿ.ಎಚ್.ಎಸ್. ಶಾಲೆಯಲ್ಲಿ ಓದುತ್ತಿದ್ದಾಗಲೇ ಚರ್ಚಾಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಭಾಷಣ ಕಲೆ ಕರಗತ ಮಾಡಿಕೊಂಡರು. ಎಸ್.ಜೆ. ಪಾಲಿಟೆಕ್ನಿಕ್‌ನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡುವಾಗ ಕಾಲೇಜು ವಿದ್ಯಾರ್ಥಿ ಸಂಘದ ಜಂಟಿ ಕಾರ್ಯದರ್ಶಿಯಾಗಿ ವಿದ್ಯಾರ್ಥಿಗಳ ಹಕ್ಕುಗಳಿಗೆ ಹೋರಾಟ ನಡೆಸಿದರು. ಶ್ರೀಗಂಧದ ಕಾವಲುವಿನಲ್ಲಿರುವ ವಕ್ಕಲಿಗರ ಸಂಘದ ವಿ.ವಿ.ಪುರ ಕಾಲೇಜಿನಲ್ಲಿ ಲ್ಯಾಬ್‌ಟೆಕ್ನೀಷಿಯನ್ ಕೋರ್ಸ್‌ಗೆ ಸೇರಿದಾಗ, ಹೋರಾಟ ನಡೆಸಿ ಕೋರ್ಸ್‌ಗೆ ಮಾನ್ಯತೆ ಕೊಡಿಸಿದರು. ಇದುವೇ ಇವರನ್ನು ಸಮಾಜ ಸೇವೆಗೆ ಎಳೆದು ತಂತು.

ವಿದ್ಯಾಭ್ಯಾಸದ ಬಳಿಕ ಕಂಪ್ಯೂಟರ್‌ಗಳಲ್ಲಿ ಬಳಸುವ ಟ್ರಾನ್ಸ್‌ಫಾರ್ಮರ್ ತಯಾರಿಕೆಯಲ್ಲಿ ತೊಡಗಿ ಕೈಗಾರಿಕೋದ್ಯಮಿಯಾದ ಧರಣೇಶ್ ನಂತರ ಸ್ನೇಹ ಟೂರ್ಸ್ ಅಂಡ್ ಟ್ರಾವಲ್ಸ್, ಸ್ನೇಹ ಕನ್‌ಸ್ಟ್ರಕ್ಷನ್ಸ್, ಸ್ನೇಹ ಸಿಟಿ ಟ್ಯಾಕ್ಸಿ ಸರ್ವೀಸ್ ಸಂಸ್ಥೆಗಳನ್ನು ಸ್ಥಾಪಿಸಿದರು. ಕರ್ನಾಟಕ ಸಿಟಿ ಟ್ಯಾಕ್ಸಿ ಆಪರೇಟರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಯಾಗಿ ಟ್ಯಾಕ್ಸಿ ಆಪರೇಟರುಗಳ ಸಮಸ್ಯೆ ನಿವಾರಣೆಗೆ ಹೋರಾಟ ನಡೆಸಿದರು. ಸ್ವತಃ ವೃತ್ತಿ ಶಿಕ್ಷಣ ಪಡೆದು, ಸ್ವ ಉದ್ಯೋಗ ಕೈಗೊಂಡು ಹಲವರಿಗೆ ಉದ್ಯೋಗ ನೀಡಿದ ಧರಣೇಶ್, ವೃತ್ತಿ ಶಿಕ್ಷಣ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿ, ಸ್ನೇಹ ನರ್ಸಿಂಗ್ ಕಾಲೇಜು ಆರಂಭಿಸಿ ಶಿಕ್ಷಣ ಸೇವೆಯನ್ನೂ ಮಾಡುತ್ತಿದ್ದಾರೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ತಮ್ಮ ಶಿಕ್ಷಣ ಸಂಸ್ಥೆಯ ಹಿರಿಮೆ ಎಂದವರು ಹೇಳುತ್ತಾರೆ. ಕೆಂಪೇಗೌಡ ಯುವ ವೇದಿಕೆಯ ಕಾರ್ಯದರ್ಶಿಯಾಗಿ ತಮ್ಮ ಸಮುದಾಯದ ಯುವಜನರ ಆಶೋತ್ತರಗಳನ್ನು ಈಡೇರಿಸಲು ಶ್ರಮಿಸುತ್ತಾ ಜನಾನುರಾಗಿಯಾಗಿದ್ದಾರೆ.

ನಿಸ್ವಾರ್ಥ ಸಮಾಜ ಸೇವಕ: ಈ ಎಲ್ಲ ವಹಿವಾಟಿನ ಜೊತೆಗೆ ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡ ಧರಣೇಶ್ ನೊಂದವರ ಕಣ್ಣೀರು ಒರೆಸುವುದನ್ನು ಮಾತ್ರ ಮರೆಯಲಿಲ್ಲ. ಬಾಲ್ಯದಲ್ಲಿ ಸಂಘ ಪರಿವಾರದ Dharaneesh, Secretary, Basavanagudi BJP Secretaryಸ್ವಯಂ ಸೇವಕನಾಗಿ ಸ್ವಾಮಿ ವಿವೇಕಾನಂದರ ವೀರವಾಣಿಯಿಂದ ಪ್ರೇರಿತರಾದ ಧರಣೇಶ್ ದರಿದ್ರನಾರಾಯಣ ಸೇವೆ ತಮ್ಮ ಪರಮ ಧ್ಯೇಯ ಎನ್ನುತ್ತಾರೆ.

ಹೀಗಾಗೇ ತತ್ವ, ಸಿದ್ಧಾಂತ ಮತ್ತು ಶಿಸ್ತಿಗೆ ಹೆಸರಾದ ಭಾರತೀಯ ಜನತಾಪಕ್ಷದ ಸಕ್ರಿಯ ಕಾರ್ಯಕರ್ತನಾಗಿ, ಪದಾಧಿಕಾರಿಯಾಗಿ ಜನಸೇವೆ ಮಾಡುತ್ತಿದ್ದಾರೆ. ಹಳೆಯ ಶ್ರೀನಿವಾಸನಗರ ನಗರ ಪಾಲಿಕೆ ವಾರ್ಡ್ ಸಂಘಟನಾ ಕಾರ್ಯದರ್ಶಿಯಾಗಿ ಪಕ್ಷ ಬೆಳೆಸಿದ ಅವರು ನಂತರ ಉಪಾಧ್ಯಕ್ಷರಾಗಿ ಪಕ್ಷದ ಸೇವೆ ಮಾಡಿದ್ದಾರೆ.

ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿಯಾಗಿ ದುಡಿದ ಧರಣೇಶ್ ಪ್ರಸ್ತುತ ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿ.ಜೆ.ಪಿ. ಘಟಕದ ಕಾರ್ಯದರ್ಶಿಯಾಗಿದ್ದಾರೆ.

ಅನಂತಕುಮಾರ್ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದಾಗ, ಆರ್. ಅಶೋಕ ಅವರು, ಉತ್ತರಹಳ್ಳಿ ಮತ್ತು ಪದ್ಮನಾಭನಗರ ಕ್ಷೇತ್ರದಿಂದ ಸ್ಪರ್ಧಿಸಿದಾಗ, ರವಿ ಸುಬ್ರಹ್ಮಣ್ಯ ಅವರು, ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದಾಗ, ರಾಮಚಂದ್ರ ಗೌಡರು ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಸ್ಪರ್ಧಿಸಿದಾಗ ಅವರೆಲ್ಲರ ಗೆಲುವಿಗೆ ಹಗಲಿರುಳು ದುಡಿದಿದ್ದಾರೆ.

ಹೌದು ನೀವು ಬಿಜೆಪಿಯನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ ಎಂದರೆತಾವು ಒಬ್ಬ ವಾಣಿಜ್ಯೋದ್ಯಮಿಯಾಗಿ ಹಿಂದಿನ ಸರ್ಕಾರಗಳ ಆಡಳಿತ ವೈಖರಿಯಮ್ನ ಕಣ್ಣಾರೆ ಕಂಡಿದ್ದೇನೆ. ಇಂದು ಯು.ಪಿ.. ಸರ್ಕಾರದ ಅವಧಿಯಲ್ಲಿ ಹಣದುಬ್ಬರ ಪ್ರಮಾಣ ನೇತ್ಯಾತ್ಮಕವಾಗಿ ಸಾಗಿದ್ದು, ಜೀವನಾವಶ್ಯಕ ವಸ್ತುಗಳ ಏರಿಕೆಯಿಂದ ಶ್ರೀಸಾಮಾನ್ಯರು ಜೀವನ ನಡೆಸಲು ಹೆಣಗಾಡುತ್ತಿದ್ದಾರೆ. ಅದೇ ವಾಜಪೇಯಿ ಎನ್.ಡಿ.. ಸರ್ಕಾರ ಕೇಂದ್ರದಲ್ಲಿ ಆಡಳಿತದಲ್ಲಿದ್ದ ಕಾಲದಲ್ಲಿ ಹಣದುಬ್ಬರದ ಪ್ರಮಾಣ ಶೇ.೪ಕ್ಕಿಂತ ಕೆಳಗಿತ್ತು. ದಿನನಿತ್ಯದ ವಸ್ತುಗಳ ಬೆಲೆ ಶ್ರೀಸಾಮಾನ್ಯನ ಕೈಗೆಟುಕುವಂತಿತ್ತು. ಹಳ್ಳಿ ಹಳ್ಳಿಗಳಿಗೂ ಅತ್ಯುತ್ತಮ ರಸ್ತೆ ಸಂಪರ್ಕ ಕಲ್ಪಿಸಲಾಗಿತ್ತು. ದೇಶದ ಉದ್ದಗಲ ಹೆದ್ದಾರಿಗಳು ಹಾಗೂ ಸಂಪರ್ಕ ರಸ್ತೆಗಳು ಸಿದ್ಧವಾದವು. ರಸ್ತೆ ಸಂಪರ್ಕ ಬಲಗೊಂಡ ಹಿನ್ನೆಲೆಯಲ್ಲಿ ವಾಣಿಜ್ಯ ವಹಿವಾಮ ಉತ್ತುಂಗಕ್ಕೇರಿತು. ದೇಶದ ಆರ್ಥಿಕ ಸ್ಥಿತಿ ಸದೃಢವಾಗಿ ವಿದೇಶಿ ಬಂಡವಾಳ ಹೂಡಿಕೆದಾರರು ದೇಶದಲ್ಲಿ ಹಣಹೂಡಲು ಮುಂದಾದರು. ಎನ್.ಡಿ.. ಶ್ರಮದ ಫಲವಾಗಿ ಭಾರತ ಇಂದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಸಮರ್ಥವಾಗಿ ಸ್ಪರ್ಧೆ ನಡೆಸುತ್ತಿದೆ. ಇಂಥ ದೂರದರ್ಶಿತ್ವದ ಪಕ್ಷ ನನ್ನ ಆಯ್ಕೆಯಾಯ್ತು ಎನ್ನುತ್ತಾರೆ.

ಐ.ಟಿ, ಬಿ.ಟಿ. ಕ್ಷೇತ್ರದ ಸಾಧನೆಯಿಂದ ವಿಶ್ವದ ಗಮನ ಸೆಳೆದಿರುವ ಬೆಂಗಳೂರು ಮಹಾನಗರದ ಹಲವು ಪ್ರದೇಶಗಳು ಇನ್ನೂ ಮೂಲಸೌಕರ್ಯದಿಂದ  ವಂಚಿತವಾಗಿರುವ ಬಗ್ಗೆ ಮರುಗುವ ಅವರು, ತಮ್ಮ ಬಡಾವಣೆಯ ನಾಗರಿಕರಿಗೆ ಮೂಲಸೌಕರ್ಯ ಒದಗಿಸಲು ಶ್ರಮಿಸುತ್ತಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆಯ ಮಾನ್ಯತೆ ಪಡೆದ ಗುತ್ತಿಗೆದಾರರಾಗಿ, ಶ್ರೀನಿವಾಸನಗರ, ಗಿರಿನಗರ, ನಾಗೇಂದ್ರ ಬಡಾವಣೆ, ಮುನೇಶ್ವರ ಬಡಾವಣೆ ಹಾಗೂ ಕತ್ತರಿಗುಪ್ಪೆ ಬಡಾವಣೆಗಳಲ್ಲಿ ಇವರು ನಿರ್ಮಿಸಿರುವ ಸೇತುವೆಗಳು, ಡಾಂಬರು ಮತ್ತು ಕಾಂಕ್ರೀಟ್ ರಸ್ತೆಗಳು ಇಂದಿಗೂ ಗಟ್ಟಿಮುಟ್ಟಾಗಿವೆ. ಗುಣಮಟ್ಟದ ಕಾಮಗಾರಿ ಹೇಗಿರಬೇಕು ಎಂಬುದಕ್ಕೆ ಧರಣೇಶ್ ಅವರು ಮಾಡಿರುವ ಕಾಮಗಾರಿಗಳು ಮಾದರಿಯಾಗಿ ನಿಲ್ಲುತ್ತವೆ.

ಸಮುದಾಯದೊಂದಿಗೆ: ದೇಶದ ಅಭಿವೃದ್ಧಿಗೆ ಶಿಕ್ಷಣ ಹಾಗೂ ಸಾರ್ವಜನಿಕ ಆರೋಗ್ಯವೇ ಆಧಾರ ಎಂದು ನಂಬಿರುವ ಧರಣೇಶ್, ಪ್ರತಿ ವರ್ಷ ಗಿರಿನಗರ, ಕತ್ತರಿಗುಪ್ಪೆ ಹಾಗೂ ಹನುಮಂತನಗರದ ವಿವಿಧ ಸರ್ಕಾರಿ ಶಾಲೆಗಳ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಿಸುತ್ತಿದ್ದಾರೆ.

ಬಿಜೆಪಿ ಹಿರಿಯ ನಾಯಕರಾದ ಎ.ಬಿ. ವಾಜಪೇಯಿ, ಎಲ್.ಕೆ. ಅಡ್ವಾಣಿ, ಬಿ.ಎಸ್. ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯನಾಯ್ಡು, ಆರ್. ಅಶೋಕ ಅವರ ಹುಟ್ಟುಹಬ್ಬದ ದಿನದಂದು ಉಚಿತ ಆರೋಗ್ಯ ತಪಾಸಣಾ ಶಿಬಿರ, ನೇತ್ರ ತಪಾಸಣೆ  ಮತ್ತು ಉಚಿತ ಕನ್ನಡಕ ವಿತರಣಾ ಶಿಬಿರಗಳನ್ನು ಏರ್ಪಡಿಸುತ್ತಾ ಬಂದಿದ್ದಾರೆ.

ಯುವ ಚೇತನ: ಎಲ್ಲರೂ ತಮ್ಮ ತಮ್ಮ ಸ್ವಾರ್ಥಕ್ಕೆ ಗಂಟು ಬೀಳುವ ಈ ಕಾಲದಲ್ಲಿ, ಸ್ವತಃ ಉದ್ಯಮಿಯಾಗಿ Dharaneesh, Secretary, Basavanagudi BJP Secretaryಬಿಡುವಿಲ್ಲದ ತಮ್ಮ ಕಾರ್ಯಭಾರಗಳ ನಡುವೆಯೂ ಧರಣೀಶ್ ಸಮಾಜ ಸೇವೆಗೆ, ದೀನರ ಸೇವೆಗೆ ತಮ್ಮ ಅಮೂಲ್ಯ ಸಮಯವನ್ನು ಮುಡಿಪಾಗಿಟ್ಟಿದ್ದಾರೆ.

ಕತ್ತರಿಗುಪ್ಪೆ, ಹನುಮಂತನಗರ ಹಾಗೂ ಗಿರಿನಗರ ಪ್ರದೇಶದಲ್ಲಿರುವ ಅರ್ಹ ಫಲಾನುಭವಿಗಳಿಗೆ ಬಿ.ಪಿ.ಎಲ್.ಕಾರ್ಡ್, ವೃದ್ಧಾಪ್ಯವೇತನ, ವಿಧವಾ ವೇತನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡಿಸಲು ಶ್ರಮಿಸುತ್ತಿದ್ದಾರೆ.

ಕೆಂಪೇಗೌಡ ಬಡಾವಣೆಯ ಐತಿಹಾಸಿಕ ಕೆಂಪಾಂಬುದಿ ಕೆರೆ ಸಂರಕ್ಷಣೆ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿ ಪಾಲ್ಗೊಂಡ ಧರಣೇಶ್, ತಮ್ಮ ಬಡಾವಣೆಯಲ್ಲಿ ಡೆಂಗ್ಯೂ, ಚಿಕುನ್‌ಗುನ್ಯಾ ಹಾಗೂ ಎಚ್೧ಎನ್೧ ರೋಗದ ಬಗ್ಗೆ ಜನಜಾಗೃತಿ ಅಭಿಯಾನವನ್ನೂ ಕೈಗೊಳ್ಳುತ್ತಿದ್ದಾರೆ. ಕಲಬೆರಕೆ ವಿರುದ್ಧ ಮತ್ತು ಅದರ ದುಷ್ಪರಿಣಾಮಗಳ ವಿರುದ್ಧ ಅರಿವು ಮೂಡಿಸುತ್ತಿದ್ದಾರೆ.

ಶಾಲಾ ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯ ಪ್ರಕಾಶಕ್ಕಾಗಿ ಅಂತರ ಶಾಲಾ ಮತ್ತು ಅಂತರ ಕಾಲೇಜು ಚರ್ಚಾಸ್ಪರ್ಧೆ, ಕ್ರೀಡಾಸ್ಪರ್ಧೆ ಆಯೋಜಿಸುತ್ತಾ ಬಂದಿದ್ದಾರೆ.

ಯೋಜನೆಗಳು:

  • ಎಲ್ಲ ವಿದ್ಯಾವಂತ ನಿರುದ್ಯೋಗಿಗಳೂ ಉದ್ಯೋಗಿಗಳಾಗಬೇಕು. ಅವರ ಅಪರಿಮಿತ ಶಕ್ತಿ ವ್ಯರ್ಥವಾಗಬಾರದು  ಇದಕ್ಕೆ ಸೂಕ್ತವಾದ ಯೋಜನೆ ರೂಪಿಸುವುದೇ ತಮ್ಮ ದ್ಯೇಯ ಎನ್ನುತ್ತಾರೆ.

  • ಮೂಲಭೂತ ಸೌಕರ್ಯಗಳ ಕೊರತೆಯಿಂದ ಕುಗ್ಗಿರುವ ತಮ್ಮ ಬಡಾವಣೆಯ ವಾರ್ಡ್‌ಗಳನ್ನು ಮಾದರಿ ವಾರ್ಡ್ ಮಾಡುವುದೇ ತಮ್ಮ ಗುರಿ ಎನ್ನುತ್ತಾರೆ.

  • ಜಾತಿ,ಮತ, ಧರ್ಮ ಭೇದವಿಲ್ಲದೆ ಎಲ್ಲ ವರ್ಗದ ಜನರು ಸುಖ, ಶಾಂತಿ ಹಾಗೂ ನೆಮ್ಮದಿಯಿಂದ ಸೌಹಾರ್ದತೆಯಿಂದ ಬಾಳುವಂಥ ವಾತಾವರಣವಮ್ನ ಕಲ್ಪಿಸುವುದು ತಮ್ಮ ಪರಮ ಗುರಿ ಎಂದೂ ಅವರು  ಭಾವಿಸುತ್ತಾರೆ.

  • ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಮ್ಮ ಬಡಾವಣೆಯಲ್ಲಿರುವ ನಿವಾಸಿಗಳ ಸಮಸ್ಯೆಗೆ ಸ್ಪಂದಿಸುವುದು ತಮ್ಮ ಸಂಕಲ್ಪವೆನ್ನುತ್ತಾರೆ.

  • ಕತ್ತರಿಗುಪ್ಪೆ, ಹನುಮಂತನಗರ ಅಥವಾ ಗಿರಿನಗರ ವಾರ್ಡ್‌ನಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ದೊರಕಿದಲ್ಲಿ, ಪಕ್ಷದ ತತ್ವ, ಸಿದ್ಧಾಂತಗಳಿಗೆ ಚ್ಯುತಿ ಆಗದಂತೆ ಹಾಗೂ ಅಭಿವೃದ್ಧಿಯೇ ಮೂಲ ಮಂತ್ರವಾಗಿರುವ ರಾಜ್ಯ ಬಿಜೆಪಿ ಸರ್ಕಾರದ ಆಶೋತ್ತರಗಳನ್ನು ಈಡೇರಿಸಲು ಅವಿರತ ಶ್ರಮಿಸುವುದಾಗಿ ಹೇಳುತ್ತಾರೆ. 

ಮುಖಪುಟ /ಸಾಧಕರು