ಮುಖಪುಟ

ನಮ್ಮ ಮೊದಲ ಮಾತು...

ಸಹೃದಯೀ ಕನ್ನಡಿಗರಿಗೆ ಹೃದಯಪೂರ್ವಕ ವಂದನೆಗಳು      

         

Kannadaratna function, ಕನ್ನಡರತ್ನ.ಕಾಂ ಉದ್ಘಾಟನಾ ಸಮಾರಂಭದ ಚಿತ್ರಜಾಗತಿಕ ಆರ್ಥಿಕ ಹಿನ್ನಡೆಯಿಂದ ದೊಡ್ಡ ದೊಡ್ಡ ಡಾಟ್‌ಕಾಂಗಳು, ಸಂಸ್ಥೆಗಳೇ ಬಾಗಿಲು ಹಾಕುತ್ತಿರುವ ಈ ಸಂದರ್ಭದಲ್ಲಿ , ಸ್ವಂತ ಬಂಡವಾಳ ಹಾಗೂ ಪುಟ್ಟ ಟೀಮ್‌ನೊಂದಿಗೆ ಕನ್ನಡರತ್ನ.ಕಾಂ ಎಂಬ ಪೂರ್ಣಕಾಲಿಕ ಕನ್ನಡ ವೆಬ್‌ಸೈಟ್ ಒಂದನ್ನು (ಚಿತ್ರಭಾನು ಸಂವತ್ಸರದ ಯುಗಾದಿಯ ಈ ಶುಭದಿನ) ನಿಮ್ಮ ಮಡಿಲಿಗೊಪ್ಪಿಸುವ ಸಾಹಸಕ್ಕೆ ಕೈ ಹಾಕುತ್ತಿದ್ದೇನೆ. ಇದು ಖಂಡಿತಾ ವಾಣಿಜ್ಯ ಉದ್ದೇಶದ ವೆಬ್‌ತಾಣವಲ್ಲ. ಕನ್ನಡ ತಾಯಿಯ ಸೇವೆಗಾಗಿ ಹಾಗೂ ಆತ್ಮತೃಪ್ತಿಗಾಗಿ ನಾವು ಆರಂಭಿಸಿರುವ ಅಂತರ್ಜಾಲ ವಾಹಿನಿ. ಹೊರನಾಡ ಹಾಗೂ ಈ ನಾಡ ಕನ್ನಡಿಗರ ನಡುವೆ ಸ್ನೇಹ ಸೇತುವಾಗುವುದೇ ನಮ್ಮೀ ಅಂತರ್ಜಾಲ ತಾಣದ ಉದ್ದೇಶ.
ನಮ್ಮ ಈ ತಾಣವನ್ನು ಕನ್ನಡಭವನದ ನಯನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡಮಿಯ ಅಧ್ಯಕ್ಷರಾಗಿದ್ದ ಅರ್ಜುನ್ ದೇವ್ ಅವರು ಉದ್ಘಾಟಿಸಿದರು. ಸಮಾರಂಭದಲ್ಲಿ ಖ್ಯಾತ ಮನಃಶಾಸ್ತ್ರಜ್ಞರಾದ ಡಾ. ಸಿ.ಆರ್. ಚಂದ್ರಶೇಖರ್, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾದ ನಾಗಮೋಹನದಾಸ್, ಕರ್ನಾಟಕ ವಕೀಲರ ಪರಿಷತ್ತಿನ ಉಪಾಧ್ಯಕ್ಷರಾಗಿರುವ ಮಲ್ಲೇಶಯ್ಯ, ಖ್ಯಾತ ನಿರ್ದೇಶಕ ಪ್ರಕಾಶ್ ಅರಸ್, ಪತ್ರಕರ್ತ ಸತೀಶ್ ಪಾಲ್ಗೊಂಡಿದ್ದರು.

ಮಾನ್ಯರೇ, ಕನ್ನಡಪ್ರಭ ದಿನಪತ್ರಿಕೆಯಲ್ಲಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಪದಾಕಾರಿಗಳಾಗಿ ಪತ್ರಿಕಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಶ್ರೀ ಟಿ.ಎಂ. ಸತೀಶ್ ನನ್ನ ಪತಿ.

೧೯೯೦ರ ದಶಕದ ಆದಿಯಿಂದ ಬೆಂಗಳೂರು ಆಕಾಶವಾಣಿಯಲ್ಲಿ ಹಲವಾರು ಕಾರ್ಯಕ್ರಮ ನೀಡಿದ, ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದ ಹಾಗೂ ಪ್ರಸಿದ್ಧ ಪ್ರಕಾಶನ ಸಂಸ್ಥೆಯ ಸಂಪಾದಕೀಯ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಬರವಣಿಗೆಗೆ ಸೂರ್ತಿಯಾಗಿದ್ದರೆ, ಮೆಕ್‌ಮಿಲನ್ ಇಂಡಿಯಾ ಬಳಗದ ಸೈಂಟಿಫಿಕ್ ಡಾಟಾ ಬ್ಯಾಂಕ್ ಸರ್ವೀಸಸ್‌ನಲ್ಲಿ ಆನ್‌ಲೈನ್ ಕಾಪಿ ಎಡಿಟರ್ ಆಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಅಂತರ್ಜಾಲ ಹಾಗೂ ವೆಬ್‌ತಾಣ ನಿರ್ಮಾಣದ ಜ್ಞಾನ ನನ್ನದಾಯ್ತು.

ಅಂತರ್ಜಾಲ ಪತ್ರಿಕೋದ್ಯಮಕ್ಕೆ ಕಾಲಿಡುತ್ತಿರುವ ನನಗೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ರಿಕಾ ಕಾರ್ಯದರ್ಶಿಗಳೂ ಹಾಗೂ ಪತ್ರಿಕೋದ್ಯಮದ ಪರಮೋಚ್ಚ ಪ್ರಶಸ್ತಿಯಾದ ಟಿಎಸ್ಸಾರ್ ಪುರಸ್ಕಾರಕ್ಕೆ ಪಾತ್ರರಾದ ಹಿರಿಯ ಪತ್ರಕರ್ತ ಪೂಜ್ಯ ಶ್ರೀ ಜಯಶೀಲರಾವ್, ಮಾರ್ಗದರ್ಶನ ನೀಡಿ, ಸಂಪೂರ್ಣ ಧೈರ್ಯ ತುಂಬಿದ್ದಾರೆ. www.educationbangalore.com ಆರಂಭಿಸಿ, ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿರುವ ಶಿಕ್ಷಣ ಸಂಸ್ಥೆಗಳ ಹಾಗೂ ಉನ್ನತ ಶಿಕ್ಷಣ ಕೋರ್ಸ್‌ಗಳ ಬಗ್ಗೆ ಅತ್ಯುಪಯುಕ್ತ ಮಾಹಿತಿ ನೀಡುತ್ತಾ, ವಿದ್ಯಾರ್ಥಿ ಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತಿರುವ ಹಿರಿಯರಾದ ಶ್ರೀ ವೆಂಕಟರಮಣ ಹೆಗಡೆ ಅವರು ಆಡಳಿತಾತ್ಮಕ ಹಾಗೂ ತಾಂತ್ರಿಕ ನೆರವು ನೀಡಿ ಪ್ರೋತ್ಸಾಹಿಸಿದ್ದಾರೆ.

ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹಲವು ಹಿರಿಯ ಪತ್ರಕರ್ತರು ಬೆನ್ನು ತಟ್ಟಿ ಮುಂದಡಿ ಇಡಲು ಪ್ರೇರೇಪಿಸಿದ್ದಾರೆ. ಹಿರಿಯರ ಪ್ರೋತ್ಸಾಹದಿಂದ ಕನ್ನಡರತ್ನ.ಕಾಂ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ಒದಗಿಸುವ ಹಲವು ವೆಬ್ ಸೈಟ್ ಗಳನ್ನು  ನೀವೂ ನಮ್ಮನ್ನು ಹರಸಿ, ಸಹೃದಯೀ ಕನ್ನಡಿಗರೆಲ್ಲರೂ ಈಗಷ್ಟೇ ಅಂಬೆಗಾಲಿಡುತ್ತಲಿರುವ ಈ ಕನ್ನಡ ಕಂದಮ್ಮ (ಕನ್ನಡರತ್ನ.ಕಾಂ)ನನ್ನು ಕೈಹಿಡಿದು ನಡೆಸಿ. ನಿಮ್ಮೆಲ್ಲರ ಪ್ರೋತ್ಸಾಹ - ಸಹಕಾರವೇ ನಮಗೆ ಶ್ರೀರಕ್ಷೆ. ನಮ್ಮ ಈ ವೆಬ್‌ಸೈಟ್ ನಿಮಗೆ ಮೆಚ್ಚುಗೆಯಾದರೆ, ನಿಮ್ಮ ಇತರ ಕನ್ನಡ ಗೆಳೆಯರಿಗೂ ದಯಮಾಡಿ ತಿಳಿಸಿ.

ಇಂತಿ

ಶೋಭಾ ಸತೀಶ್, ಬಿಎಸ್ಸಿ, ಎಂ.ಎ,ಬಿಎಡ್

ಸ್ಥಾಪಕ ಸಂಪಾದಕಿ, ಕನ್ನಡರತ್ನ.ಕಾಂ.

 

******

ಬಿ.ಎಸ್. ಯಡಿಯೂರಪ್ಪ ಅವರಿಂದ bangalorechoultries.com ಉದ್ಘಾಟನೆ. ಚಿತ್ರದಲ್ಲಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಹಿರಿಯ ಪತ್ರಕರ್ತರಾದ ಎಸ್.ವಿ.ಜಯಶೀಲರಾವ್, ಟಿ.ಎಂ. ಸತೀಶ್ ಇದ್ದಾರೆ.ಕನ್ನಡರತ್ನ.ಕಾಂ ಅನ್ನು ಇಷ್ಟು ವರ್ಷಗಳಿಂದ ಪ್ರೀತಿಸುತ್ತಾ, ವೀಕ್ಷಿಸುತ್ತಾ, ಉಪಯುಕ್ತ ಸಲಹೆಗಳನ್ನು ನೀಡುತ್ತಾ ಪೋಷಿಸುತ್ತಿರುವ ನಮ್ಮೆಲ್ಲ ಓದುಗರಿಗೆ ನಾವು ಆಭಾರಿಗಳು.

ನಿಮ್ಮ ಪ್ರೋತ್ಸಾಹದ ಫಲವಾಗಿ ನಾವು, ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರಿನ ಕಲ್ಯಾಣ ಮಂಟಪಗಳ ಬಗ್ಗೆ ಮಾಹಿತಿ ನೀಡುವ ಅಂತರ್ಜಾಲ ತಾಣವನ್ನು ಆರಂಭಿಸಿತು. ಇದನ್ನು ಉಪ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮಾನ್ಯ ಯಡಿಯೂರಪ್ಪನವರು ತಮ್ಮ ನಿವಾಸದಲ್ಲೇ ಉದ್ಘಾಟಿಸಿದರು. ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಹಿರಿಯ  ಪತ್ರಕರ್ತ ಎಸ್.ವಿ. ಜಯಶೀಲರಾವ್ ಪಾಲ್ಗೊಂಡಿದ್ದರು.

ನಂತರ www.bangaloresareehouses.com ಹಾಗೂ www.bangalorejewelleryshops.com ಆರಂಭಿಸಿದೆವು. ಈ ತಾಣಗಳು ಬೆಂಗಳೂರಿನಲ್ಲಿನ ಜವಳಿ ಮತ್ತು ಚಿನ್ನಾಭರಣದಂಗಡಿಗಳ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುತ್ತಾ ಅತ್ಯಂತ ಜನಪ್ರಿಯವಾಗಿವೆ.

ourministers.com ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಚಿತ್ರದಲ್ಲಿ ವಿಧಾನಪರಿಷತ್ ಸದಸ್ಯೆ ವಿಮಲಾಗೌಡ, ಪತ್ರಕರ್ತ ಟಿ.ಎಂ. ಸತೀಶ್ ಇದ್ದಾರೆ.ಇದಾದ ಬಳಿಕ ಕನ್ನಡರತ್ನ.ಕಾಂ ಬಿಜೆಪಿ ಸರ್ಕಾರದ ಸಚಿವರುಗಳ ಮಾಹಿತಿ ಒದಗಿಸುವ ತಾಣವನ್ನು ಆರಂಭಿಸಿತು. ಈ ಅಂತರ್ಜಾಲ ವಾಹಿನಿಯನ್ನು ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ಅವರ ಗೃಹ ಕಚೇರಿಯಲ್ಲಿಯೇ ಉದ್ಘಾಟಿಸಿದರು.

ಮ್ಮ ಎಲ್ಲ ಅಂತರ್ಜಾಲ ತಾಣಗಳಿಗೆ ಪ್ರತಿ ನಿತ್ಯ ಭೇಟಿ ನೀಡಿ, ನಮಗೆ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಹುರಿದುಂಬಿಸುತ್ತಿರುವ ತಮ್ಮ ಬೆಂಬಲ ನಮಗೆ ಇನ್ನೂ ಹೆಚ್ಚಿನ ಅಂತರ್ಜಾಲ ತಾಣ ನಿರ್ಮಾಣಕ್ಕೆ ಇಂಬು ನೀಡಿತು. ಓದುಗರಿಂದ ದೊರೆತ ಸಲಹೆಯನ್ನು ಆಧರಿಸಿ ನಾವು   www.ourtemples.in ಆರಂಭಿಸಿದೆವು. ಈ ತಾಣ ಕರ್ನಾಟಕದ ಪ್ರಮುಖ ದೇವಾಲಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದೆ. ಈ ತಾಣದಲ್ಲಿ ಸ್ಥಳಪುರಾಣ, ಇತಿಹಾಸ, ದೇವಾಲಯದ ವಾಸ್ತುಶಿಲ್ಪ, ಐತಿಹ್ಯ, ಹೋಗುವ ಬಗೆ, ಸೌಕರ್ಯ ಇತ್ಯಾದಿ ಉಪಯುಕ್ತ ourtemples.in ದೇವಾಲಯಗಳ ಮಾಹಿತಿ ಭಂಡಾರವನ್ನು ಉದ್ಘಾಟಿಸಿದ ಸಚಿವ ಗೂಳಿಹಟ್ಟಿ ಶೇಖರ್ ಅವರು, ಚಿತ್ರದಲ್ಲಿ ಹಿರಿಯ ಪತ್ರಕರ್ತ ಎಸ್.ವಿ. ಜಯಶೀಲರಾವ್ ಇದ್ದಾರೆ.ಮಾಹಿತಿಗಳಿವೆ. ಈ ಅಂತರ್ಜಾಲ ತಾಣವನ್ನು ಜವಳಿ, ಯುವಜನ ಸೇವೆ ಹಾಗೂ ಕ್ರೀಡಾ ಸಚಿವರಾದ ಗೂಳಿ ಹಟ್ಟಿ ಶೇಖರ್ ಅವರು ಲೋಕಾರ್ಪಣೆ ಮಾಡಿದ್ದಾರೆ.

ಇದಲ್ಲದೆ ಕನ್ನಡರತ್ನ.ಕಾಂ ನಾಡಿನ ಸಾಂಸ್ಕೃತಿಕ ಪ್ರಾತಿನಿಧಿಕ ಸಂಸ್ಥೆ ಕನ್ನಡಸಾಹಿತ್ಯ ಪರಿಷತ್ ಸೇರಿದಂತೆ ಹಲವು ಸಂಘ, ಸಂಸ್ಥೆಗಳಿಗೆ ಅಂತರ್ಜಾಲ ತಾಣ (ವೆಬ್ ಸೈಟ್) ನಿರ್ಮಿಸಿಕೊಟ್ಟಿದೆ. ಈ ನಾಡಿನ ಮತ್ತು ಹೊರನಾಡಿನ ಕನ್ನಡಿಗರು ನಮಗೆ ನೀಡುತ್ತಿರುವ ಸಹಕಾರಕ್ಕೆ ನಾವು ಸದಾ ಆಭಾರಿಗಳು.

 

ಮುಖಪುಟ