ಮುಖಪುಟ
/ಪ್ರವಾಸಿತಾಣ/ನಮ್ಮ
ದೇವಾಲಯಗಳು
ತ್ರಿವೇಣಿ ಸಂಗಮದ ಟಿ. ನರಸೀಪುರ *ಟಿ.ಎಂ. ಸತೀಶ್
ಈ ಪವಿತ್ರ ಸ್ಥಳದಲ್ಲಿ ಜೀವನದಿ ಕಾವೇರಿ, ಕಪಿಲೆಯ ಸ್ಫಟಿಕ ಸರೋವರದಲ್ಲಿ ಸಂಗಮವಾಗುತ್ತವೆ. ಈ ಮೂರರ ಸಂಗಮ ಸ್ಥಳವಾದ್ದರಿದಲೇ ಇದಕ್ಕೆ ತಿರುಮ ಕೂಡಲು ಎಂದು ಹೆಸರು ಬಂದಿದೆ ಎನ್ನುತ್ತಾರೆ ಊರಿನ ಹಿರೀಕರು. ನರಸಿಂಹಸ್ವಾಮಿ ನೆಲೆಸಿಹ ತಾಣವಿದಾದ್ದರಿಂದ ಇದು ತಿರುಮಕೂಡಲು ನರಸೀಪುರ ಎನಿಸಿದೆ.
ಸಂಗಮದ ಸಮೀಪದಲ್ಲಿ ಅಗಸ್ತ್ಯೇಶ್ವರನ
ದೇಗುಲವಿದೆ. ಪುರಾತನವಾದ ಈ ಅಗಸ್ತ್ಯೇಶ್ವರ ದೇವಾಲಯದಲ್ಲಿರುವ ಲಿಂಗದ ಶಿಖರದಲ್ಲಿ
ರಂಧ್ರವಿದ್ದು ಅದರಿಂದ ಕಾರಂಜಿಯ ತೀರ್ಥ ಬರುತ್ತದೆ. ಲಿಂಗದಲ್ಲಿ ತೀರ್ಥೋದ್ಭವ
ಆಗಿದ್ದಾದರೂ ಹೇಗೆ? ಸ್ಥಳ
ಪುರಾಣದ ರೀತ್ಯ ಇದಕ್ಕೂ ಒಂದು ಕಥೆ ಇದೆ. ಸೀತೆಯನ್ನು ಅಪಹರಿಸಿದ ರಾವಣನ ವಿರುದ್ಧ
ಯುದ್ಧಕ್ಕೆ ಹೋಗುವ ಮುನ್ನ ರಾಮೇಶ್ವರದಿಂದ ಲಂಕೆಗೆ ಸೇತುವೆ ಕಟ್ಟಲು ಶ್ರೀರಾಮ
ತೀರ್ಮಾನಿಸಿದ. ಕಪಿಸೈನ್ಯ ಸೇತುವೆ ನಿರ್ಮಿಸುತ್ತಿತ್ತು. ಆಗ ಶ್ರೀರಾಮಚಂದ್ರ ಯುದ್ಧಕ್ಕೆ
ಹೋಗುವ ಮುನ್ನ ಪರಮೇಶ್ವರನನ್ನು ಪೂಜಿಸಲು ತೀರ್ಮಾನಿಸಿದ. ಆಂಜನೇಯನಿಗೆ ಲಿಂಗವೊಂದನ್ನು
ತರುವಂತೆ ತಿಳಿಸಿದ. ಉತ್ತಮವಾದ ಲಿಂಗ ಹುಡುಕುತ್ತಾ ಆಂಜನೇಯ ಸಮಯ ವ್ಯರ್ಥ ಮಾಡಿದ.
ಮುಹೂರ್ತ ಮೀರಿ ಹೋಗಬಾರದೆಂದು ರಾಮ ಮರಳಿನಲ್ಲಿ ಲಿಂಗ ಮಾಡಿ ಸೈಕತ ಲಿಂಗ ಪೂಜಿಸಿದ.
ಅಷ್ಟು ಹೊತ್ತಿಗೆ ಲಿಂಗದೊಂದಿಗೆ ಹನುಮ ಬಂದ. ತಾನು ತಂದಿರುವ ಲಿಂಗವನ್ನೇ ಪೂಜಿಸುವಂತೆ
ರಾಮನಿಗೆ ಹೇಳಿದ. ಆಗ ರಾಮ ನಾನು
ನಂತರ ಅದೇ ಲಿಂಗವನ್ನು ಪ್ರತಿಷ್ಠಾಪಿಸಿ, ಪ್ರಥಮ ಪೂಜೆ ಮಾಡಿದರಂತೆ, ಅಗಸ್ತ್ಯ ಮಹರ್ಷಿಗಳು ಪ್ರತಿಷ್ಠಾಪಿಸಿದ ಲಿಂಗ ಅಗಸ್ತ್ಯೇಶ್ವರ ಎನಿಸಿಕೊಂಡಿದೆ ಎಂದೂ ಹೇಳುತ್ತಾರೆ ಪುರೋಹಿತರು. ಈ ದೇಗುಲ ವಿಶಾಲವಾದ ಪ್ರಾಕಾರ ಹೊಂದಿದ್ದು ಅಮ್ಮನವರ ಗುಡಿಯ ಮುಂದೆ ಹಲ್ಲಿಯ ಕಂಬವಿದೆ. ಕಪಿಲೆ ಮತ್ತು ಕಾವೇರಿಯರ ಸಂಗಮದ ಆಚೆಯ ದಡದಲ್ಲಿ ನರಸಿಂಹನ ಸ್ವಾಮಿ ದೇವಸ್ಥಾನವಿದೆ. ನರಸಿಂಹ ದೇವರು ಕೈಯಲ್ಲಿ ಗುಲಗಂಜಿಯ ಹಿಡಿದಿರುವುದರಿಂದ ಗುಂಜಾ ನರಸಿಂಹ ಎಂದೂ ಕರೆಯುತ್ತಾರೆ. ಪಿಟೀಲು ವಿದ್ವಾಂಸರಾದ ವಿದ್ವಾನ್ ಪಿಟೀಲು ಚೌಡಯ್ಯನವರು ಹುಟ್ಟಿದ್ದು ಈ ಊರಿನಲ್ಲೇ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in | |||