|
ಮುಖಪುಟ
/ಪ್ರವಾಸಿತಾಣ
ಪವಿತ್ರ ಶೈವಕ್ಷೇತ್ರ ಮಹಾಕೂಟ
ವಿರಳ ಹಾಗೂ ಬಹು ಅಪರೂಪದ
ಗಿಡಮರಗಳಿಂದ ಕೂಡಿದ ಕಾನನ ಪ್ರದೇಶದಲ್ಲಿ ಅಚ್ಛಾದಿತವಾದ ನಸುಗೆಂಪು ಮರಳು ಕಲ್ಲಿನ
ಎರಡು ಬೆಟ್ಟಗಳ ನಡುವೆ ಇರುವುದೇ ಮಹಾಕೂಟವೆಂಬ ಪುಣ್ಯಕ್ಷೇತ್ರ.
ಇಲ್ಲಿ ಮಹಾಕೂಟೇಶ್ವರ ಮತ್ತು
ಮಲ್ಲಿಕಾರ್ಜುನ ದೇಗುಲಗಳಿವೆ. ಈ ಎರಡು ದೇವಾಲಯಗಳ ಮಧ್ಯೆ ಸುಂದರವಾದ
ಪುಷ್ಕರಣಿಯಿದ್ದು ಇದರ ಸುತ್ತಲೂ ಹಲವಾರು ಸಣ್ಣ ಪುಟ್ಟ ದೇವಲಾಯಗಳಿವೆ.
ಪುಷ್ಕರಣಿಯಲ್ಲಿ ಮುಖಲಿಂಗ
ಮಂಟಪ ಇದೆ. ಮುಖಲಿಂಗ ಮಂಟಪದಲ್ಲಿರುವ ಶಿವಲಿಂಗದಲ್ಲಿ ನಾಲ್ಕುಮುಖದ ಅಪರೂಪದ
ಶಿವಲಿಂಗವಿದೆ. ಅತ್ಯಂತ ಕಲಾತ್ಮಕವಾದ ಹಾಗೂ ಸೂಕ್ಷ್ಮ ಕೆತ್ತನೆಗಲಿಂದ ಕೂಡಿದ ಈ
ಲಿಂಗದಲ್ಲಿರುವ ಶಿವನ ಶಿರದಲ್ಲಿ ಗುಂಗುರು ಗುಂಗುರು ಕೂದಲನ್ನೂ ಸಹ ಶಿಲ್ಪಿ
ಮನೋಹರವಾಗಿ ಕೆತ್ತಿದ್ದಾನೆ.
ಮಹಾಕೂಟೇಶ್ವರ ಹಾಗೂ
ಮಲ್ಲಿಕಾರ್ಜುನನ ದರ್ಶನಕ್ಕೆ ಬರುವ ಭಕ್ತರು, ಪುಷ್ಕರಣಿಯಲ್ಲಿ ಮೊದಲು ಸ್ನಾನ
ಮಾಡಿ ನಂತರ ದೇವರ ಮಾಡುತ್ತಾರೆ.
ಈ ದೇಗುಲಗಳಲ್ಲಿ ಚೌರಸ
ಗರ್ಭಗೃಹವಿದೆ. ಇದಕ್ಕಿಂತ ಅಗಲವಾದ ಸಭಾ ಮಂಟಪ ಹಾಗೂ ಕಿರಿದಾದ ಮುಖಮಂಟಪವಿದೆ.
ಗರ್ಭಗುಡಿಯ ಮೇಲೆ ದ್ರಾವಿಡ ಶೈಲಿಯ ಶಿಖರವಿದೆ. ಎತ್ತರದ ಅಷ್ಠಾನ ಅಡ್ಡ
ಪಟ್ಟಿಕೆಗಳಲ್ಲಿ ಹೆಚ್ಚಾಗಿ
ದೇವಾಲಯದ ಎದುರು ಹೊರಭಾಗದಲ್ಲಿರುವ ನಂದಿಯ ಹಿಂಭಾಗದಲ್ಲಿ ಪ್ರವೇಶದ್ವಾರಕ್ಕೆ ಎದುರುಮುಖವಾಗಿ ಗಣಪನ ವಿಗ್ರಹವಿದೆ. ಭಕ್ತರು ಈ ಗಣಪನಿಗೆ ವಿಶೇಷ ರೀತಿಯಲ್ಲಿ ಪೂಜೆ ಸಲ್ಲಿಸುತ್ತಾರೆ. ಅದೇನು ಗೊತ್ತೆ, ಈ ಗಣಪನ ಹೊಕ್ಕಳಿಗೆ ಭಕ್ತರು ಎಣ್ಣೆ ಹಚ್ಚುತ್ತಾರೆ.
ಗಣಪನ
ಡೊಳ್ಳುಹೊಟ್ಟೆಯಲ್ಲಿ ಹೊಕ್ಕುಳ ಜಾಗದಲ್ಲಿ ದೊಡ್ಡದೊಂದು ರಂದ್ರವಿದೆ. ಭಕ್ತರು ಈ
ರಂದ್ರದಲ್ಲಿ ಎಣ್ಣೆ
ಈ ದೇವಾಲಯ 8ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎಂಬುದು ಇಲ್ಲಿನ ಅರ್ಚಕರ ಅಂಬೋಣ..... ದೇವಾಲಯದ ಸುತ್ತ ಅಗಸ್ತ್ತ್ಯೆಶ್ವರ, ವೀರಭದ್ರೇಶ್ವರ ಮೊದಲಾದ ಹಲವಾರು ಚಿಕ್ಕ ಗುಡಿಗಳಿವೆ. ಪ್ರಮುಖ ದೇಗುಲದ ಹೊರಬಿತ್ತಿಯ ಮೇಲೆ ವಿಷ್ಣು, ಸ್ಥಾನಕಬ್ರಹ್ಮ, ಅರ್ಧ ನಾರೀಶ್ವರ, ಪರಶುಧರ ಶಿವ, ತ್ರಿಶೂಲಧಾರಿ ಶಿವ ಮೊದಲಾದ ಕೆತ್ತನೆ ಇದೆ. ಕೆಳ ಪಟ್ಟಿಕೆಗಳಲ್ಲಿ ಸುಂದರ ಶಿಲ್ಪಕಲಾ ಕೆತ್ತನೆ ಇದೆ. ಇಲ್ಲಿ ಸೂಕ್ಷ್ಮ ಕೆತ್ತನೆ ಇಲ್ಲದಿದ್ದರೂ ಮನೋಹರವಾದ ಶಿಲ್ಪಕಲಾ ಸೌಂದರ್ಯವಿದೆ. ಬಾದಾಮಿ ಚಾಲುಕ್ಯರ ನಾಡಿನಲ್ಲಿ ಶಿಲೆಗಳೂ ಸಂಗೀತವನ್ನು ಹಾಡುತ್ತವೆ. ವಿಶೇಷ ವಾಸ್ತು ಶೈಲಿಯ ಸುಂದರ ದೇವಾಲಯಗಳು ಆಸ್ತಿಕರಿಗೆ ಭಕ್ತಿಭಾವ ಮೂಡಿಸಿದರೆ, ನಾಸ್ತಿಕರನ್ನು ತಮ್ಮ ಕಲಾಶ್ರೀಮಂತಿಕೆಯಿಂದ ಕೈಬೀಸಿ ಕರೆಯುತ್ತವೆ. | |||