|
ಮುಖಪುಟ
/ಪಾಕಶಾಲೆ ಗರ್ಮಾ ಗರಂ ಮಸಾಲೆ ವಡೆ ಅಥವಾ ಆಂಬೋಡೆ ಬೇಕಾಗುವ ಪದಾರ್ಥ : ಅರ್ಧ ಕೇಜಿಯಷ್ಟು ಕಡಲೇಬೇಳೆ, ಏಳೆಂಟು ಒಣ ಮೆಣಸಿನಕಾಯಿ, ಒಂದು ಹೋಳು ತೆಂಗಿನಕಾಯಿ ತುರಿ, ಕೊತ್ತಂಬರಿಸೊಪ್ಪು ಒಂದು ಕಂತೆ, ನಾಲ್ಕಾರು ಎಸಳು ಕರಿಬೇವಿನ ಸೊಪ್ಪು, ಎಣ್ಣೆ, ಉಪ್ಪು ಮತ್ತು ಶುಂಠಿ ಹಾಗೂ ಕರಿಯಲು ಎಣ್ಣೆ. ಮಾಡುವ ವಿಧಾನ :ಮೊದಲು ಕಡಲೇಬೇಳೆಯನ್ನು ನೀರಿನಲ್ಲಿ ತೊಳೆದು ನೆನೆಹಾಕಿ. ಕಡಲೇಬೇಳೆ ಚೆನ್ನಾಗಿನೆಂದ ಬಳಿಕ ಒಣಮೆಣಸಿನಕಾಯಿ, ತೆಂಗಿನತುರಿ, ರುಚಿಗೆ ತಕ್ಕಷ್ಟು ಉಪ್ಪು ಎಲ್ಲವನ್ನೂ ಸೇರಿಸಿ ಮಿಕ್ಸರ್ ಅಥವಾ ಗ್ರೈಂಡರ್‌ನಲ್ಲಿ ತರಿತರಿಯಾಗಿ ರುಬ್ಬಿ. ಅದಕ್ಕೆ ಸಣ್ಣಗೆ ಹೆಚ್ಚಿದ ಕರಿಬೇವು ಮತ್ತು ಹಸಿಶುಂಠಿಯನ್ನು ಸೇರಿಸಿ. ಈ ಎಲ್ಲ ಮಸಾಲೆ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆ ಮಾಡಿಟ್ಟು ಕೊಳ್ಳಿ, ಉಂಡೆಗಳನ್ನು ಅಂಗೈಮೇಲೆ ತಟ್ಟಿ ಕಾದ ಎಣ್ಣೆಯ ಬಾಣಲೆಯಲ್ಲಿ ಕರಿದರೆ ಬಿಸಿಬಿಸಿ, ರುಚಿರುಚಿ ಆಂಬೊಡೆ ರೆಡಿ. ಅಗತ್ಯವೆನಿಸಿದರೆ, ಸಣ್ಣಗೆ ಹೆಚ್ಚಿದ ಪುದೀನ ಸೊಪ್ಪು ಮತ್ತು ಈರುಳ್ಳಿಯನ್ನೂ ಕಡಲೇ ಹಿಟ್ಟಿನ ಮಿಶ್ರಣಕ್ಕೆ ಬೆರೆಸಬಹುದು.
| |||