ಮುಖಪುಟ
/ಸುದ್ದಿ
ಸಮಾಚಾರ ಮಧ್ಯಂತರ ಚುನಾವಣೆಗೆ ಸಜ್ಜಾಗಿ - ಕುಮಾರಸ್ವಾಮಿ
ಅವರು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ನಾಯಕರು ಕಾರ್ಯಕರ್ತರ ಜತೆ ಸಮನ್ವಯ ಕಾಪಾಡಿಕೊಂಡು ಎಲ್ಲ ಹಂತದಲ್ಲಿಯೂ ಸಿದ್ಧತೆ ಮಾಡಿಕೊಳ್ಳಬೇಕು ಎಂದರು. ಕಾಂಗ್ರೆಸ್ ಪಕ್ಷವನ್ನು ನಾವು ದುರ್ಬಲಗೊಳಿಸುತ್ತಿಲ್ಲ, ಬದಲಿಗೆ ಆ ಪಕ್ಷದವರೇ ಪಕ್ಷವನ್ನು ದುರ್ಬಲ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮುಂದಿನ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಶೇಕಡ 7೦ ರಷ್ಟು ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಿಡುವುದಾಗಿ ಅವರು ಹೇಳಿದರು. | |||