ಮುಖಪುಟ
/ಸುದ್ದಿ
ಸಮಾಚಾರ ಅನಿವಾಸಿ ಭಾರತೀಯರಿಗೆ ಆತಂಕ ಬೇಡ – ಎಸ್.ಎಂ.ಕೃಷ್ಣ
ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಕೃಷ್ಣ, ಸುದ್ದಿಗಾರರೊಂದಿಗೆ ಮಾತನಾಡಿ, ವಿದ್ಯಾರ್ಥಿಗಳ ಮೇಲೆ ಆ ದೇಶದಲ್ಲಿ ನಡೆದಿರುವ ಹಲ್ಲೆಯ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಭಾರತೀಯ ವಿದ್ಯಾರ್ಥಿಗಳ ಹಿತ ರಕ್ಷಿಸುವುದಾಗಿ ಅಲ್ಲಿನ ಸರ್ಕಾರ ಭರವಸೆ ನೀಡಿದೆ ಎಂದರು. ಮೆಲ್ಬರ್ನ್ ನಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಶಂಕಿತ ಜನಾಂಗೀಯ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಾಗಿದೆ. ಹಲ್ಲೆಗೊಳಗಾದವರೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಮೆಲ್ಬರ್ನ್ ನಲ್ಲಿರುವ ಭಾರತೀಯ ಕಾನ್ಸಲೇಟ್ ಗೆ ಸೂಚಿಸಲಾಗಿದೆ ಎಂದೂ ಹೇಳಿದರು. | |||