ಮುಖಪುಟ
/ಸುದ್ದಿ
ಸಮಾಚಾರ 25 ವರ್ಷಗಳ ಬಳಿಕ ಮಧುರ ಮಿಲನ
ಪಾಠ ಕಲಿಸಿದ ಗುರುಗಳಿಗೆ ಕೃತಜ್ಞತೆಯ ಸಮರ್ಪಣೆ
ತಮ್ಮ ಸಹಪಾಠಿಯಾಗಿದ್ದ ಹಾಗೂ ಪ್ರಾಮಾಣಿಕ ಮತ್ತು ನಿಷ್ಠಾವಂತ ಕೆ.ಎ.ಎಸ್. ಅಧಿಕಾರಿ ಎಂದೇ ಖ್ಯಾತರಾಗಿದ್ದ ಮತ್ತು ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಮಹಂತೇಶ್, ಅಪಘಾತದಲ್ಲಿ ನಿಧನ ಹೊಂದಿದ ಅಶೋಕ್ , ಅನಾರೋಗ್ಯದಿಂದ ಅಕಾಲಿಕ ಮರಣಕ್ಕೆ ತುತ್ತಾದ ಶ್ರೀಧರ, ಚಿತ್ರ ಕಲಾವಿದ ಸುರೇಶ್ ಹಾಗೂ ಲಲಿತಾ ಮನೋಹರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ತಮಗೆ ಪಾಠ ಮಾಡಿದ, ತಮ್ಮ ಭವಿಷ್ಯ ರೂಪಿಸಿದ ಗುರುಗಳಿಗೆ ಕೃತಜ್ಞತೆಯನ್ನೂ ಸಲ್ಲಿಸಿದರು. 25 ವರ್ಷ ಕಳೆದ ಬಳಿಕವೂ ತಮ್ಮ ಕರೆಗೆ ಓಗೊಟ್ಟು ಬಂದಿದ್ದ ಉಪನ್ಯಾಸಕರಾದ ಪ್ರೊ. ಸುಂದರರಾಜ್, ಸಿ.ವಿ. ಭರತ್ ಹಾಗೂ ಲಕ್ಷ್ಮಣ ಪ್ರಸಾದ್ ಅವರಿಗೆ ಪುಷ್ಪಗುಚ್ಛ ನೀಡಿ ಗೌರವಿಸಿದರು. ಅವರ ಹಿತವಚನ ಆಲಿಸಿದರು ಇದೇ ಸಂದರ್ಭದಲ್ಲಿ ನಿನ್ನೆಯಷ್ಟೇ ಸೇವೆಯಿಂದ ನಿವೃತ್ತರಾದ ಸಿ.ವಿ. ಭರತ್ ಅವರಿಗೆ ನೆನಪಿನ ಕಾಣಿಕೆ ನೀಡಿ, ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.
ಅಂತ್ಯಾಕ್ಷರಿ ಆಡಿ ಆನಂದಿಸಿದರು. ಎಚ್.ಪಿ. ಸುರೇಶ ಮುಖ್ಯಮಂತ್ರಿ ಚಂದ್ರು ಅವರಂತೆ ಮಿಮಿಕ್ರಿ ಮಾಡಿ ರಂಜಿಸಿದರೆ, ತಾರಾ, ಅನುಪಮಾ, ಶಾಂತಲಾ, ಮುರುಗೇಂದ್ರ ಹಿರೇಮಠ್ ತಮ್ಮ ಸುಶ್ರಾವ್ಯ ಸಂಗೀತದಿಂದ ಮನಸೆಳೆದರು. ಬಹುತೇಕ ಎಲ್ಲರೂ ತಮ್ಮಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾಲೇಜು ದಿನಗಳಲ್ಲಿ ನಡೆದ ಸ್ವಾರಸ್ಯಕರ ಘಟನೆಗಳನ್ನು ನೆನಪಿನ ಬುತ್ತಿಯಿಂದ ಒಂದೊಂದಾಗಿ ತೆರೆದಿಟ್ಟರು. ಹಳೆಯ ಸ್ಮರಣೀಯ ಘಟನೆಗಳನ್ನು ಮೆಲಕು ಹಾಕಿದರು.ಬೆಳಗ್ಗೆ 11 ಗಂಟೆಯಿಂದ ಸಂಜೆ 4ಗಂಟೆಯ ತನಕ ಒಂದೇ ಕುಟುಂಬದ ಸದಸ್ಯರಂತೆ ಸುಖ, ದುಃಖ ಹಂಚಿಕೊಂಡರು. ಜೊತೆಯಲ್ಲಿ ಕುಳಿತು ಊಟ ಮಾಡಿದರು. ಈ ಅನುಭವ ನಿಜಕ್ಕೂ ಅವಿಸ್ಮರಣೀಯ.
ಈ ಅಪರೂಪದ ಸ್ನೇಹ ಸಮ್ಮಿಲನದಲ್ಲಿ ಜಿ.ಕೆ.ಟಿ. ಪ್ರಸನ್ನ, ಎ.ವಿ. ವೇಣುಗೋಪಾಲ್, ಶ್ರೀನಗರ ಶ್ರೀಧರ್, ಕೆ.ಎಸ್.ಎಸ್. ಪ್ರಕಾಶ್, ಶ್ರೀಧರ, ಟಿ.ಎಂ. ಸತೀಶ್, ಯು.ಎಂ. ಶ್ರೀನಿವಾಸ ಮಯ್ಯ, ದತ್ತಾತ್ರೇಯ, ಕೃಷ್ಣ, ಮುರುಗೇಂದ್ರ ಹಿರೇಮಠ, ಸಿಲ್ಕ್ ಬೋರ್ಡ್ ಶ್ರೀನಿವಾಸ್, ಶ್ರೀನಿವಾಸ್, ಬಿ.ಎ. ಮಂಜುನಾಥ್, ಬಾಲಕೃಷ್ಣಭಟ್, ಚಂದ್ರೇಗೌಡ, ಎಚ್.ಪಿ. ಸುರೇಶ್, ಮಂಜುನಾಥ್, ತಟ್ಟನಹಳ್ಳಿ ನಾಗೇಶ, ಸುಶೀಂದರ್ ಪ್ರಸಾದ್ ಸ್ಟ್ಯಾನ್ಲಿ, ಆರ್.ಜಿ.ಪ್ರಸಾದ್, ಏಕಾಂತರಾಜು, ಸೋಮು, ಹರ್ಷವರ್ಧನ, ಸೂರ್ಯಪ್ರಕಾಶ, ಬಾಲಾಜಿರಾವ್ ಡಿ.ಜಿ, ನಾಗರಾಜ್, ಸುದರ್ಶಿನಿ, ಶಾಂತಲಾ, ಅನುಪಮಾ, ತಾರಾ, ಸುಜಾತ, ಸುಧಾಮಣಿ, ಕಾಂತಾ, ಸುಜಾತಾ, ರಾಜಲಕ್ಷ್ಮೀ, ಶಾಂತಾ, ಲೀಲಾವತಿ ಮತ್ತಿತರರು ಪಾಲ್ಗೊಂಡಿದ್ದರು. | |||