ಮುಖಪುಟ
/ಸುದ್ದಿ
ಸಮಾಚಾರ ಕನ್ನಡ ನುಡಿಜಾತ್ರೆಗೆ ಬನ್ನಿ...
ಬೆಂಗಳೂರಿನಲ್ಲಿಂದು ಪೂರ್ವ ಸಿದ್ಧತಾ ಸಭೆಯ ಬಳಿಕ ಮಾತನಾಡಿದ ಅವರು, ಬರುವ ೪, ೫ ಹಾಗೂ ೬ರಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕನ್ನಡದ ನುಡಿ ಜಾತ್ರೆ ನಡೆಯಲಿದ್ದು, ಕನ್ನಡ ಪ್ರೇಮಿಗಳು, ಸಾಹಿತ್ಯಾಸಕ್ತರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ನ್ಯಾಷನಲ್ ಕಾಲೇಜು ಮೈದಾನದಲ್ಲಿನ ಪ್ರಧಾನ ವೇದಿಕೆಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರಿಡಲಾಗಿದೆ. ನಾಡಪ್ರಭು ಕೆಂಪೇಗೌಡ ಮಹಾಮಂಟಪದಲ್ಲಿ ಫೆಬ್ರವರಿ ೪ರಂದು ಬೆಳಗ್ಗೆ ೮ಗಂಟೆ ೩೦ ನಿಮಿಷಕ್ಕೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ೯ಗಂಟೆ ೩೦ ನಿಮಿಷಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂಭಾಗದಿಂದ ನ್ಯಾಷನಲ್ ಕಾಲೇಜು ಮೈದಾನದವರೆಗೂ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ನಡೆಯಲಿದೆ ಎಂದರು. ಮಧ್ಯಾಹ್ನ ೧ ಗಂಟೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮೇಳನ ಉದ್ಘಾಟಿಸಲಿದ್ದು, ಸ್ಮರಣ ಸಂಚಿಕೆಯನ್ನು ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ಬಿಡುಗಡೆ ಮಾಡಲಿದ್ದಾರೆ ಎಂದು ವಿವರಿಸಿದರು. ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಕನ್ನಡ ಸಮುದಾಯದ ಆತಂಕಗಳು, ಬೆಂಗಳೂರು, ದೇಸೀ ಸಂಸ್ಕೃತಿ ತವಕ ತಲ್ಲಣಗಳು, ಸಮ್ಮೇಳನಾಧ್ಯಕ್ಷರೊಡನೆ ಸಂವಾದ, ಕಾವ್ಯವಾಚನ ಗಾಯನ, ಹಾಸ್ಯ ಸಂವೇದನೆ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು. ಸಮಾನಾಂತರ ವೇದಿಕೆಗಳಲ್ಲಿ ಕನ್ನಡ ಸಾಹಿತ್ಯದ ಇತ್ತೀಚಿನ ಒಲವುಗಳು, ಕನ್ನಡ ರಂಗ ಚಳವಳಿ, ನಾಡಪ್ರಭು ಕೆಂಪೇಗೌಡ, ಕವಿಗೋಷ್ಠಿ, ಕನ್ನಡ ಪ್ರಜ್ಞೆ ಸಮೂಹ ಮಾಧ್ಯಮಗಳು, ಚಲನಚಿತ್ರ ಮತ್ತು ಕಿರುತೆರೆ, ಸಾಮಾಜಿಕ ಹಕ್ಕುಗಳು ಮತ್ತು ಕಾನೂನು, ಕನ್ನಡ ಪುಸ್ತಕೋದ್ಯಮ, ಮಹಿಳೆ, ಕವಿಗೋಷ್ಠಿ, ಮಕ್ಕಳ ಸಾಹಿತ್ಯ, ಪರಂಪರೆ ಮತ್ತು ಕನ್ನಡ, ಕನ್ನಡದಲ್ಲಿ ಅನುವಾದ ಸಾಹಿತ್ಯ ಕುರಿತಂತೆ ಗೋಷ್ಠಿಗಳು ನಡೆಯಲಿವೆ ಎಂದು ವಿವರ ನೀಡಿದರು. | |||