ಮುಖಪುಟ
/ಸುದ್ದಿ
ಸಮಾಚಾರ
ವಿಧಾನಸಭೆ ಕ್ಲಬ್ಬಾಗುತ್ತಿದೆ: ವಾಟಾಳ್ ಬೆಂಗಳೂರು, ಫೆ.7:- ಇಂದು ವಿಧಾನಮಂಡಳ ಕ್ಲಬ್ ಆಗುತ್ತಿದೆ. ಸದನದ ಗೌರವ ಹಾಳು ಮಾಡಿ, ಇಡೀ ರಾಜ್ಯವೇ ತಲೆತಗ್ಗಿಸುವಂತೆ ಮಾಡಿರುವ ಈ ಇಬ್ಬರು ಸಚಿವರು ಗೌರವಯುತವಾಗಿ ರಾಜೀನಾಮೆ ನೀಡಬೇಕು, ಇಲ್ಲವೇ ಮುಖ್ಯಮಂತ್ರಿ ಅವರಿಬ್ಬರ ರಾಜೀನಾಮೆ ಪಡೆಯಬೇಕು. ಇಲ್ಲವಾದರೆ ರಾಜಭವನದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಇದೇನಾ ಸಂಸ್ಕೃತಿ:- ಇದೇ ಏನು ಶಿಸ್ತಿನ ಪಕ್ಷ ಎನ್ನುವ ಬಿಜೆಪಿಯ ಸಂಸ್ಕೃತಿ. ಇದು ಸಚಿವರಿಗೆ ಸಭ್ಯತೆಯೇ. ಸದನದಲ್ಲಿ ಚರ್ಚೆ ಮಾಡುವ ಬದಲು, ಅಶ್ಲೀಲ ಚಿತ್ರ ನೋಡುವುದು. ಅವರ ಬೇಜವಾಬ್ದಾರಿತನ ಮತ್ತು ನಾಚಿಕೆಗೇಡಿ ಪ್ರವೃತ್ತಿಯನ್ನು ಪ್ರದರ್ಶಿಸಿದೆ. ಕೂಡಲೇ ಈ ಇಬ್ಬರು ರಾಜೀನಾಮೆ ಕೊಡಬೇಕು ಎಂದು ಸಂಸದ ಎಚ್. ವಿಶ್ವನಾಥ್ ಒತ್ತಾಯಿಸಿದ್ದಾರೆ.
| |||